ಮುಂಬೈ(ಡಿ. 29)   ಹೊರ ರಾಜ್ಯದಿಂದ ಪ್ರವಾಸಕ್ಕೆ ಬಂದಿದ್ದ ಮಹಿಳೆ ಮೇಲೆ ಆಟೋ ಚಾಲಕ ರೇಪ್ ಮಾಡಿದ್ದಾನೆ. ಪ್ರಕರಣ ದಾಖಲಾಗಿ ಹನ್ನೆರಡು ಗಂಟೆ ಅವಧಿ ಒಳಗೆ ಆರೋಪಿಯನ್ನು ಬಂಧಿಸಲಾಗಿದೆ.

ಛತ್ತೀಸ್ ಘಡದ ಜಾಶ್ ಪುರದ ಮಹಿಳೆ ಮುಂಬೈ ನಲ್ಲಿ ಕ್ರಿಸ್ ಮಸ್ ಆಚರಣೆಗೆಂದು ಬಂದಿದ್ದರು. ಡಿ.  26  ರಂದು ಪನ್ವೆಲ್ ರೈಲ್ವೆ ನಿಲ್ದಾಣಕ್ಕೆ ತೆರಳಿ ಅಲ್ಲೊಬ್ಬ ವ್ಯಕ್ತಿಯೊಂದಿಗೆ ಸ್ನೇಹ ಸಂಪಾದಿಸಿ ದಿನ ಕಳೆದಿದ್ದಾಳೆ. ಮಾರನೇ ದಿನ ಆಟೋ  ಬುಕ್ ಮಾಡಿ ಗಾಂಧಿ ಗಾರ್ಡನ್ ಕಡೆ ಹೊರಟಿದ್ದಾಳೆ.

ಪೊಲೀಸ್ ಸಿಬ್ಬಂದಿ ಎಂದು ನಂಬಿಸಿ ಮೈಮೇಲೆ ಕೈ ಹಾಕಿದ

ಒಂಟಿ ಮಹಿಳೆಯನ್ನು  ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆಕೆ ಮೇಲ ಅತ್ಯಾಚಾರ ಎಸಗಿದ್ದು ನಂತರ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.  ದೂರು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ ವರದಿ ತರಿಸಿಕೊಳ್ಳಲಾಗಿದೆ.