ಕಾನ್ಪುರ(ಫೆ. 26) ಇದು ಒಳ ಉಡುಪಿನ ವಿಚಾರ. ಆದರೆ ಅಂತ್ಯವಾಗಿದ್ದು ಮಾತ್ರ ಕೊಲೆಯಲ್ಲಿ!  ತನ್ನ ಅಂಡರ್ ವೇರ್ ಕದ್ದು ಅದನ್ನು ಹಾಕಿಕೊಂಡಿದ್ದಾನೆ ಎಂಬ ಕಾರಣಕ್ಕೆ ಫ್ಯಾಕ್ಟರಿಯ ಕೆಲಸಗಾರನೊಬ್ಬ ತನ್ನ ಸಹೋದ್ಯೋಗಿಯನ್ನು ಹತ್ಯೆ ಮಾಡಿದ್ದಾನೆ.

ಆರೋಪಿಯನ್ನು ಬಾಂಡಾ ಜಿಲ್ಲೆಯ ಅಜಯ್ ಕುಮಾರ್ ಎಂದು ಗುರುತಿಸಲಾಗಿದೆ ಬಹ್ರೇಚ್‌ನ ವಿವೇಕ್ ಶುಕ್ಲಾ  ಹತ್ಯೆಗಿಡಾದವ.

ಕಾನ್ಪುರ್ ದೇಹತ್ ಜಿಲ್ಲೆಯ ಕಾರ್ಖಾನೆಯ ಕಾರ್ಮಿಕರು ಇಬ್ಬರೂ ಕಾರ್ಖಾನೆಯ ಆವರಣದಲ್ಲಿ ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದರು. ಕುಮಾರ್ ಅವರ ಒಳ ಉಡುಪುಗಳನ್ನು ಕದ್ದು ಧರಿಸಿ ಕುಚೇಷ್ಟೆ ಮಾಡಲು ಶುಕ್ಲಾ ಪ್ರಯತ್ನಿಸಿದ್ದಾರೆ. ಕುಮಾರ್ ಅವರಿಗೆ ಈ ವಿಷಯ  ಗೊತ್ತಾದಾಗ ಗಲಾಟೆ ಆರಂಭವಾಗಿದೆ..

ಬಾಡಿಗೆ ಮನೆ ಸುಂದರಿ.. ಹೆಂಡತಿ ಮೊಬೈಲ್‌ ಗೆ  ಬಂತು ಗಂಡನ ರಾಸಲೀಲೆ ವಿಡಿಯೋ

ಸಿಟ್ಟಿಗೆದ್ದ ಕುಮಾರ್  ತರಕಾರಿ ಕತ್ತರಿಸುವ ಚಾಕುವಿನಿಂದ ವಿವೇಕ್ ಶುಕ್ಲಾ ಮೇಲೆ ದಾಳಿ ಮಾಡಿದ್ದಾನೆ.  ನಂತರ ಅಲ್ಲಿಂದ ಜಾಗ ಖಾಳಿ ಮಾಡಿದ್ದಾನೆ. ಗಂಭೀರ ಗಾಯಗೊಂಡಿದ್ದ ವಿವೇಕ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ದಾರಿ ಮಧ್ಯವೇ ಪ್ರಾಣ ಪಕ್ಷಿ ಹಾರಿಹೋಗಿರುವುದಾಘಿ ವೈದ್ಯರು ತಿಳಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಪ್ಯಾಕಟ್ರಿ ಮಾಲೀಕ ಸೇರಿದಂತೆ ಉಳಿದ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.