ಲಕ್ಷ್ಮೇಶ್ವರ(ಏ.12): ಸಮೀಪದ ಸೂರಣಗಿ ಗ್ರಾಮದ ಮರಿಯಪ್ಪ ತಳಗೇರಿ (40) ಎಂಬ ವ್ಯಕ್ತಿಯನ್ನು ಶನಿವಾರ ತಡರಾತ್ರಿ ಗ್ರಾಮದ ಸಮೀಪದ ಬೆಳ್ಳಟ್ಟಿ ರಸ್ತೆಯ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿ ಹೊಲದಲ್ಲಿ ಬಿಸಾಕಿ ಹೋಗಿರುವ ಘಟನೆ ನಡೆದಿದೆ. ಕೊಲೆಗೆ ಅನೈತಿಕ ಸಂಬಂಧವೇ ಕಾರಣವೆಂದು ತಿಳಿದು ಬಂದಿದೆ.

ಕೊಲೆಯಾಗಿರುವ ಬಗ್ಗೆ ಮಾಹಿತಿ ಅರಿತ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶೀಲ ಶಂಕೆ: ಕತ್ತು ಹಿಸುಕಿ ಗಂಡನನ್ನೇ ಕೊಲೆ ಮಾಡಿದ ಹೆಂಡ್ತಿ..!

ಈ ವೇಳೆ ಸಿಪಿಐ ವಿಕಾಸ ಲಮಾಣಿ, ಪಿಎಸ್‌ಐ ಶಿವಯೋಗಿ ಲೋಹಾರ ಇದ್ದರು. ಲಕ್ಷ್ಮೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ತಂದೆಯನ್ನು ಕಳೆದುಕೊಂಡ ಮಕ್ಕಳು ಹಾಗೂ ಕುಟುಂಬದ ಸದಸ್ಯರ ದುಃಖ ಮುಗಿಲು ಮುಟ್ಟಿತ್ತು.