ಬೆಂಗಳೂರ(ಏ.12): ಪತ್ನಿಯೇ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಇಂದು(ಮಂಗಳವಾರ) ಬೆಳಗಿನ ಜಾವ 3.30 ರ ಸುಮಾರಿಗೆ ಜೆಜೆ ನಗರದ ಓಬಳೇಶ್ ಕಾಲೋನಿಯಲ್ಲಿ ನಡೆದಿದೆ. ಮೋಹನ್ (41) ಕೊಲೆಯಾದ ದುರ್ದೈವಿಯಾಗಿದ್ದಾರೆ. ಪತ್ನಿ ಪದ್ಮಾ ಎಂಬಾಕೆಯೇ ತನ್ನ ಗಂಡ ಮೋಹನ್‌ನನ್ನ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

16 ವರ್ಷದ ಹಿಂದೆ ಮೋಹನ್‌ ಪದ್ಮಾ ಮದುವೆಯಾಗಿತ್ತು. ಇವರಿಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ. ಕುಡಿತದ ಚಟಕ್ಕೆ ದಾಸನಾಗಿದ್ದ ಮೋಹನ್‌ ಪತ್ನಿ ಶೀಲ ಶಂಕಿಸಿ ಯಾವಾಗಲು ಜಗಳವಾಡುತಿದ್ದ, ಕೆಲಸ ಕಾರ್ಯ ಇಲ್ಲದೆ ಯಾವಾಗಲೂ ಹೆಂಡತಿ ಜೊತೆ ಜಗಳ ಮಾಡುತಿದ್ದ. ಪತ್ನಿ ಶೀಲ ಶಂಕಿಸಿ ನಿನ್ನೆ ಕೂಡ ಪತ್ನಿ ಪದ್ಮಾ ಜೊತೆ ಜಗಳ ಮಾಡಿದ್ದ. ಈ ವೇಳೆ ಪತ್ನಿ ಮೋಹನ್‌ನ ಕತ್ತು ಹಿಸುಕಿ ಹತ್ಯೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ದಂಪತಿಗೆ ಮೂವರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.

ಅವನು ರೌಡಿಶೀಟರ್ - ಇವನ ಹೆಂಡ್ತಿ ಜೊತೆ ಅಕ್ರಮ ಸಂಬಂಧ : ನೋಡಿ ನೋಡಿ ಕೊಂದೇ ಬಿಟ್ಟ

ಘಟನೆ ಬಳಿಕ ಪತ್ನಿ ಪದ್ಮಾ ಪರಾರಿಯಾಗಿದ್ದಳು. ಮನೆಯಲ್ಲಿ ಬಿದ್ದಿದ್ದ ಮೋಹನ್‌ನನ್ನು ಅಕ್ಕಪಕ್ಕದ ಮನೆಯವರು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ಆದ್ರೆ ಮಾರ್ಗ ಮಧ್ಯೆಯೇ ಮೋಹನ್ ಮೃತಪಟ್ಟಿದ್ದ. ಈ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ನಾಪತ್ತೆಯಾಗಿದ್ದ ಪದ್ಮಾಳನ್ನ ಹುಡುಕಿ ಪೊಲೀಸರು ಬಂಧಿಸಿ ವಿಚಾರಣೆ ಅರಂಭಿಸಿದ್ದಾರೆ.