Sexual Harassment: ಹಾಸನ, ಯುವತಿ ಹಿಡಿದು ಎಳೆದಾಡಿದ ಆರೋಪ, ವಿವಸ್ತ್ರಗೊಳಿಸಿ ಹಲ್ಲೆ
* ಯುವತಿ ಜೊತೆ ಅಸಭ್ಯ ವರ್ತನೆ ಆರೋಪ
* ಯುವಕನನ್ನ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಗುಂಪು
* ಹಾಸನದ ಹೇಮಾವತಿ ಪ್ರತಿಮೆ ಬಳಿ ಘಟನೆ
* ಮಹಾರಾಜ ಪಾರ್ಕ್ ನಲ್ಲಿ ಯುವತಿಯನ್ನ ಹಿಡಿದು ಎಳೆದಾಡುತ್ತಿದ್ದ ಆರೋಪ
ಹಾಸನ(ಜ 11) ಯುವತಿ (Woman) ಜೊತೆ ಅಸಭ್ಯ ವರ್ತನೆ (Sexual Harassment) ತೋರಿದ ಆರೋಪದ ಮೇಲೆ ಯುವಕನ ಮೇಲೆ (Attack) ಹಲ್ಲೆಯಾಗಿದೆ. ಯುವಕನನ್ನು ವಿವಸ್ತ್ರಗೊಳಿಸ ಗುಂಪೊಂದು ಹಲ್ಲೆ ನಡೆಸಿದೆ.
ಹಾಸನದ (Hassan) ಹೇಮಾವತಿ ಪ್ರತಿಮೆ ಬಳಿ ಘಟನೆ ನಡೆದಿದೆ ಸಮೀಪದ ಮಹಾರಾಜ ಪಾರ್ಕ್ ನಲ್ಲಿ ಯುವತಿಯನ್ನ ಹಿಡಿದು ಎಳೆದಾಡುತ್ತಿದ್ದ ಎಂಬ ಕಾರಣಕ್ಕೆ ಗುಂಪೊಂದು ಹಲ್ಲೆ ಮಾಡಿದೆ.
ಯುವತಿ ಜತೆ ಅಸಭ್ಯವಾಗಿ ವರ್ತಿಸಿದ ಎಂಬ ಕಾರಣಕ್ಕೆ ಸ್ಥಳೀಯರು ಹಲ್ಲೆಗೆ ಮುಂದಾಗಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ದಾರೆ. ಕೈ ಮುಗಿದು ಬೇಡಿಕೊಂಡರೂ ಯುವಕರ ಗುಂಪು ಮನಸೋ ಇಚ್ಛೆ ಹಲ್ಲೆ ಮಾಡಿದೆ.
ಗುಪ್ತಾಂಗ ಮುಟ್ಟಿ ಲೈಂಗಿಕ ಕಿರುಕುಳ: ಆರೋಪಿಗೆ ಧರ್ಮದೇಟು!
ಸ್ಥಳಕ್ಕೆ ಬಂದ ಪೊಲೀಸರು ಯುವಕನ ರಕ್ಷಣೆ ಮಾಡಿದ್ದಾರೆ, ಹಲ್ಲೆ ಮಾಡಿದವರಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದು ಯುವಕನನ್ನು ಠಾಣೆಗೆ ಕರೆದೊಯ್ದಿದ್ದಾರೆ.
ತುಮಕೂರಿನ ಪ್ರಕರಣ: ತುಮಕೂರು ರೈಲ್ವೆ ನಿಲ್ದಾಣದಲ್ಲಿ (Indian Railways) ಹೆಣ್ಣು ಮಕ್ಕಳ ಮುಂದೆ ಅಸಭ್ಯವಾಗಿ (Sexual Harassment) ವರ್ತಿಸುತ್ತಿದ್ದ ವ್ಯಕ್ತಿಗೆ ಸರಿಯಾಗಿ ಧರ್ಮದೇಟು ಬಿದ್ದಿತ್ತು.
ಶಾಲೆಯಿಂದ ಬರುವ ಹೆಣ್ಣು ಮಕ್ಕಳನ್ನ ( Students) ಕಾಮುಕ ದೃಷ್ಟಿಯಿಂದ ಚೂಡಾಯಿಸುತ್ತಿದ್ದ ಕೀಚಕ ಕೈಯಲ್ಲಿ ಬಿಸ್ಕತ್ ಹಿಡಿದುಕೊಂಡು ಹೆಣ್ಣು ಮಕ್ಕಳನ್ನ ಕರೆಯುತ್ತಿದ್ದ. ಹತ್ತಿರ ಬಂದರೆ ತನ್ನ ಪ್ಯಾಂಟ್ ತೆಗೆದು ಅಸಭ್ಯವಾಗಿ ವರ್ತಿಸುತ್ತಿದ್ದ.
ಈತನ ವರ್ತನೆ ಗಮನಿಸುತ್ತಿದ್ದ ಸಾರ್ವಜನಿಕರು ಹಿಡಿದು ಸರಿಯಾಗಿ ಗೂಸಾ ನೀಡಿದ್ದಾರೆ. ಈತ ಕಳೆದ ಮೂರು ದಿನಗಳಿಂದ ರೈಲ್ವೆ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಎನ್ನಲಾಗಿದೆ. ಏಕಾಏಕಿ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದು ಜನರೇ ಗೂಸಾ ಕೊಟ್ಟಿದ್ದಾರೆ. ಹೊಸ ಬಡವಾಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈತನ ಮಾನಸಿಕ ಸ್ಥಿತಿಯ ಬಗ್ಗೆಯೂ ಪ್ರಶ್ನೆ ಎದ್ದಿತ್ತು.
ಮಂಡ್ಯ (Mandya) ಜಿಲ್ಲೆ ಮಳವಳ್ಳಿ (Malavalli) ತಾಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ವಿವೇಕಾನಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕರೊಬ್ಬರು ಎಸ್ಸೆಸ್ಸೆಲ್ಸಿ(SSLC) ವಿದ್ಯಾರ್ಥಿನಿಯರ (Students) ಜತೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿ ಬಂದಿತ್ತು.
ಗ್ರಾಪಂ ಪಿಡಿಒ (PDO) ಸಿದ್ದರಾಜು ಅವರಿಗೆ ವಿದ್ಯಾರ್ಥಿನಿಯರು ಮುಖ್ಯಶಿಕ್ಷಕ ಬೋರಯ್ಯ ಅಸಭ್ಯವಾಗಿ ವರ್ತಿಸಿ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಶಾಲೆಗೆ (School) ಗ್ರಾಪಂ ಅಧ್ಯಕ್ಷ ಚಿಕ್ಕಣ್ಣಶೆಟ್ಟಿ ಅವರ ಜತೆ ಪಿಡಿಒ ತೆರಳಿ ವಿದ್ಯಾರ್ಥಿನಿಯರನ್ನು ವಿಚಾರಿಸಿದಾಗ ವಿದ್ಯಾರ್ಥಿನಿಯರು ಏನು ಹೇಳದೇ ಮೌನವಾಗಿದ್ದರಿಂದ ಅಧ್ಯಕ್ಷರು ಮತ್ತು ಪಿಡಿಒ ವಾಪಸಾಗಿದ್ದಾರೆ.