ಇಬ್ಬರು ಗೆಳೆಯರು ಹಾಗೂ ಮತ್ತೊಬ್ಬಳು ಹುಡುಗಿ. ಮೂವರು ಒಂದೇ ಕಾಲೇಜಿನಲ್ಲಿ ಒದಿದವರು. ಕಾಲೇಜು ದಿನಗಳ 2 ವರ್ಷ ಒಬ್ಬನ ಜೊತೆ ಪ್ರೀತಿ, ಬಳಿಕ ಆತನ ಗೆಳೆಯನ ಜೊತೆಗೆ ಪ್ರೀತಿ.ಹುಡುಗಿಯ ಮಾಜಿ ಬಾಯ್‌ಫ್ರೆಂಡ್ ಪ್ಯಾಚ್ ಅಪ್ ಆಗುವುದಾದರೆ ಆಗಲಿ ಎಂದು ಹಾಯ್ ಹಲೋ ಮೆಸೇಜ್ ಕಳುಹಿಸಿದ್ದಾನೆ. ಇದು ಹಾಲಿ ಬಾಯ್‌ಫ್ರೆಂಡ್ ಹಾಗೂ ಆತನ ಆಪ್ತ ಗೆಳೆಯನ ಪಿತ್ತ ನೆತ್ತಿಗೇರಿಸಿದೆ. ಇಷ್ಟಕ್ಕೇ ಆಪ್ತ ಗೆಳೆಯನ ಕೊಂದು ಖಾಸಗಿ ಅಂಗ ಬೇರ್ಪಡಿಸಿ ಹುಡುಗಿಗೆ ಫೋಟೋ ಕಳುಹಿಸಿದ ಘಟನೆ ನಡೆದಿದೆ.

ಹೈದರಾಬಾದ್(ಫೆ.25): ಮೊದಲೆರಡು ವರ್ಷ ಒಬ್ಬನ ಜೊತೆ ಪ್ರೀತಿ ಬಳಿಕ ಬ್ರೇಕ್ ಅಪ್. ಇದೀಗ ಬ್ರೇಕ್ ಅಪ್ ಆದ ಬಾಯ್‌ಫ್ರೆಂಡ್ ಗೆಳೆಯನ ಜೊತೆ ಹುಡುಗಿಗೀ ಪ್ರೀತಿ ಚಿಗುರೊಡದಿದೆ. ಆದರೆ ಹುಡುಗಿಯ ಮಾಜಿ ಗೆಳೆಯ ಅಲ್ಲೊಂದು ಇಲ್ಲೊಂದು ಮೆಸೇಜ್ ಕಳುಹಿಸಿ ಮತ್ತೆ ಪ್ಯಾಚ್ ಅಪ್ ಮಾಡುವ ಪ್ರಯತ್ನ ಮಾಡುತ್ತಲೇ ಇದ್ದ. ಇದು ಹುಡುಗಿಯ ಹಾಲಿಬಾಯ್‌ಫ್ರೆಂಡ್‌ ಪಿತ್ತ ನೆತ್ತಿಗೇರಿಸಿದೆ. ಈ ಕೋಪಕ್ಕೆ ಆಪ್ತ ಗೆಳೆಯನನ್ನೇ ಕೊಂದು, ಹೃದಯ, ಖಾಸಗಿ ಅಂಗ ಬೇರ್ಪಡಿಸಿ ಅದರ ಫೋಟೋವನ್ನು ಗರ್ಲ್‌ಫ್ರೆಂಡ್‌ಗೆ ಕಳುಹಿಸಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.ಬಳಿಕ ಆರೋಪಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ನವೀನ್ ಹಾಗೂ ಹರಿಹರ ಕೃಷ್ಣ ಗೆಳೆಯರು. ಇವರು ದಿಲ್‌ಸುಖ್‌ನಗರದಲ್ಲಿನ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಇದೇ ಕಾಲೇಜಿನಲ್ಲಿ ಓದುತ್ತಿದ್ದ ಹುಡುಗಿಯ ಜೊತೆಗೆ ಮೊದಲು ನವೀನ್‌ಗೆ ಪ್ರೀತಿ ಅರಳಿದೆ. ಸುತ್ತಾಟ, ಐಸ್‌ಕ್ರೀಮ್, ಗಿಫ್ಟ್ ಸೇರಿದಂತೆ ಎಲ್ಲಾ ಪ್ರಣಯ ಹಕ್ಕಿಗಳ ಹಾರಾಟ ಇಲ್ಲೂ ಇತ್ತು. ಆದರೆ ಈ ಸಂಬಂಧ 2 ವರ್ಷ ಮುಂದೆ ಸಾಗಿತ್ತು. 2ನೇ ವರ್ಷದ ಅಂತ್ಯದಲ್ಲಿ ನವೀನ್ ಹಾಗೂ ಹುಡುಗಿ ಪ್ರೀತಿಯಲ್ಲಿ ಬಿರುಗಾಳಿ ಎದ್ದಿತ್ತು. ಹೀಗಾಗಿ ಇವರಿಬ್ಬರ ಪ್ರೀತ್ ಬ್ರೇಕ್ ಅಪ್ ಆಗಿತ್ತು.

ಉಪವಾಸ ಸತ್ಯಾಗ್ರಹನಿರತ ಅಜೀಂ ಪ್ರೇಮ್‌ಜಿ ವಿವಿ ವಿದ್ಯಾರ್ಥಿ ಸಾವು: ಆಡಳಿತ ಮಂಡಳಿ ವಿರುದ್ಧ ಆಕ್ರೋಶ

ಬ್ರೇಕ್ ಆಪ್ ಆದ ಬಳಿಕ ನವೀನ್ ಗೆಳೆಯ ಹರಿಹರ ಕೃಷ್ಣನ ಜೊತೆ ಹುಡುಗಿಗೆ ಪ್ರೇಮಾಂಕುರವಾಗಿತ್ತು. ಈ ಪ್ರೀತಿ ಗಾಢವಾಯಿತು. ಆದರೆ ನವೀನ್ ಮತ್ತೆ ಪ್ಯಾಚ್ ಅಪ್ ಮಾಡುವ ಪ್ರಯತ್ನ ಮಾಡಿದ್ದ. ಹೀಗಾಗಿ ಅಲ್ಲೊಂದು ಇಲ್ಲೊಂದು ಮೆಸೇಜ್, ಕಾಲ್ ಮಾಡಿ ಮಾತನಾಡುವ ಪ್ರಯತ್ನ ಮಾಡುತ್ತಿದ್ದ. ಈ ವಿಚಾರ ಹರಿಹರ ಕೃಷ್ಣನಿಗೂತಿಳಿಯಿತು. ತನ್ನ ಆಪ್ತ ಗೆಳೆಯನ ಮೇಲೆ ಹರಿಹರ ಕೃಷ್ಣ ರೇಗಾಡಲಿಲ್ಲ, ಕೂಗಾಡಲಿಲ್ಲ. ಆದರೆ ಮನಸ್ಸಲ್ಲೇ ಒಂದು ಸ್ಕೆಚ್ ರೆಡಿ ಮಾಡಿದ್ದ.

ಪಾರ್ಟಿ ನೆಪದಲ್ಲಿ ನವೀನ್‌ನನ್ನು ಕರೆದೊಯ್ದ ಹರಿಹರ ಕೃಷ್ಣ , ಪ್ಲಾನ್ ಪ್ರಕಾರ ಎಲ್ಲವನ್ನೂ ಮುಗಿಸಿದ್ದ. ನವೀನ್‌ಗೆ ಸರಿಯಾಗಿ ಕುಡಿಸಿ ತಾನು ಕುಡಿಯುವಂತೆ ನಾಟಕವಾಡಿದ್ದ. ಪಾರ್ಟಿ ಅಂತಿಮ ಹಂತ ತಲುಪುತ್ತಿದ್ದಂತೆ ತನ್ನ ಹುಡುಗಿಗೆ ಮೆಸೇಜ್, ಕಾಲ್ ಮಾಡುವ ವಿಚಾರ ಎತ್ತಿದ್ದಾನೆ. ಈ ವಿಚಾರಕ್ಕಾಗಿ ಜಗಳ ಶುರುಮಾಡಿದ್ದಾನೆ. ಬಳಿಕ ಚಾಕುವಿನಿಂದ ಇರಿದು ನವೀನ್‌ನನ್ನು ಹತ್ಯೆಗೈದಿದ್ದಾನೆ. 

ಇಷ್ಟಕ್ಕೆ ಈತನ ಸಿಟ್ಟು ತಣ್ಣಗಾಗಿರಲಿಲ್ಲ. ನವೀನ್ ಹತ್ಯೆ ಮಾಡಿ ಆತನ ಹೃದಯ ಹಾಗೂ ಖಾಸಗಿ ಅಂಗವನ್ನು ಬೇರ್ಪಡಿಸಿದ್ದಾನೆ. ಬಳಿಕ ಅದರ ಫೋಟೋವನ್ನು ಗರ್ಲ್‌ಫ್ರೆಂಡ್‌ಗೆ ಕಳುಹಿಸಿದ್ದಾನೆ. ಈ ಫೋಟೋ ನೋಡಿದ ಗೆಳತಿಗೆ ತನ್ನ ಪ್ರೀತಿಯ ಆಟಕ್ಕೆ ಒಂದು ಜೀವ ಬಲಿಯಾಗಿದೆ ಅನ್ನೋದು ಅರಿವಾಗಿದೆ. ತಕ್ಷಣ ಫೋನ್ ಸ್ವೀಚ್ ಮಾಡಿದ್ದಾಳೆ. ಇತ್ತ ನವೀನ್ ಹತ್ಯೆ ಮಾಡಿದ ಹರಿಹರ ಕೃಷ್ಣ ಪೊಲೀಸ್ ಠಾಣೆಗೆ ತೆರಳಿ ಶರಣವಾಗಿದ್ದಾನೆ. ಇತ್ತ ನವೀನ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Bengaluru Crime: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ: ಪೊಲೀಸ್‌ ಠಾಣೆ ಶವವಿಟ್ಟು ಪ್ರತಿಭಟನೆ

ಇದೀಗ ಪೊಲೀಸರು ತಿನಿಖೆ ಆರಂಭಿಸಿದ್ದಾರೆ. ಇತ್ತ ಹುಡಿಗಿಯನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಹರಿಹರ ಕೃಷ್ಣನ ಮರ್ಡರ್ ಕೇಸ್ ಇದೀಗ ಗಂಭೀರವಾಗುತ್ತಿದೆ. ಈ ಕೊಲೆಯಲ್ಲಿ ಹುಡುಗಿಯ ಪಾತ್ರವಿತ್ತೇ? ಮೊದಲೇ ಹೇಳಿದಂತೆ ಹರಿಹರ ಕೃಷ್ಣನ ಹತ್ಯೆ ಮಾಡಿ ಫೋಟೋಗಳನ್ನು ಆಕಗೆ ಕಳುಹಿಸಲಾಗಿತ್ತಾ ಅನ್ನೋ ಕುರಿತು ತನಿಖೆ ನಡೆಯುತ್ತಿದೆ. ಇದೀಗ ನವೀನ್ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ನಮ್ಮ ಹುಡುಗನ ಭೀಕರವಾಗಿ ಹತ್ಯೆಗೈದ ನವೀನ್‌ನನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ್ದಾರೆ. ನವೀನ್ ಜಾಮೀನು ಅಥವಾ ಸಣ್ಣ ಶಿಕ್ಷೆ ಮುಗಿಸಿ ಹೊರಬಂದರೆ ಪ್ರತೀಕಾರದ ಮಾತುಗಳು ಕೇಳಿಬರುತ್ತಿದೆ.