Asianet Suvarna News Asianet Suvarna News

ಲೈಂಗಿಕ ಕಿರುಕುಳಕ್ಕೆ ವಿರೋಧ: ಚಲಿಸುತ್ತಿರುವ ರೈಲಿನ ಬಳಿ ಬಾಲಕಿ ತಳ್ಳಿದ ಕಾಮುಕ; ಕೈ, ಕಾಲು ಕಟ್‌!

ಮಂಗಳವಾರ ನೀಟ್‌ ಕೋಚಿಂಗ್‌ ಮುಗಿಸಿ ಹಿಂತಿರುಗುತ್ತಿದ್ದಾಗ ಬರೇಲಿಯಲ್ಲಿ 19ರ ಹರೆಯದ ಯುವಕ ಚಲಿಸುತ್ತಿರುವ ರೈಲಿನ ಮುಂದೆ 17 ವರ್ಷದ ಬಾಲಕಿಯನ್ನು ತಳ್ಳಿದ ಪರಿಣಾಮ ಆಕೆ ತನ್ನ ಎರಡೂ ಕಾಲುಗಳು ಮತ್ತು ಎಡಗೈಯನ್ನು ಕಳೆದುಕೊಂಡಿದ್ದಾಳೆ.

17 year old neet student rejects advances of man pushed in front of moving train in bareilly ash
Author
First Published Oct 12, 2023, 4:10 PM IST | Last Updated Oct 12, 2023, 4:10 PM IST

ಬರೇಲಿ (ಅಕ್ಟೋಬರ್ 12, 2023): ಲೈಂಗಿಕ ಕಿರುಕುಳವನ್ನು ವಿರೋಧಿಸಿದ ಮಹಿಳೆಯನ್ನು ಚಲಿಸುತ್ತಿರುವ ರೈಲಿನ ಮುಂದೆ ತಳ್ಳಿದ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಈ ಸಂಬಂಧ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ಘಟನೆ ಬಗ್ಗೆ ನಿರ್ಲಕ್ಷ್ಯ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಮಂಗಳವಾರ ನೀಟ್‌ ಕೋಚಿಂಗ್‌ ಮುಗಿಸಿ ಹಿಂತಿರುಗುತ್ತಿದ್ದಾಗ ಬರೇಲಿಯಲ್ಲಿ 19ರ ಹರೆಯದ ಯುವಕ ಚಲಿಸುತ್ತಿರುವ ರೈಲಿನ ಬಳಿ 17 ವರ್ಷದ ಬಾಲಕಿಯನ್ನು ತಳ್ಳಿದ ಪರಿಣಾಮ ಆಕೆ ತನ್ನ ಎರಡೂ ಕಾಲುಗಳು ಮತ್ತು ಎಡಗೈಯನ್ನು ಕಳೆದುಕೊಂಡಿದ್ದಾಳೆ. ಸದ್ಯ ಆಕೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನೀಟ್‌ ವಿದ್ಯಾರ್ಥಿನಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: ಹೊಸಕೋಟೆ ಬಿರಿಯಾನಿ ಹೋಟೆಲ್‌ ಮಾಲೀಕರಿಂದ ಜಿಎಸ್‌ಟಿ ವಂಚನೆ: ಕೋಟಿ ಕೋಟಿ ಹಣ ವಶಕ್ಕೆ!

ಆರಂಭದಲ್ಲಿ ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡಿದ್ದ ಡಾ. ಓ.ಪಿ. ಭಾಸ್ಕರ್‌, ‘‘ಮೊಣಕಾಲಿನ ಕೆಳಗೆ ಎರಡೂ ಕಾಲುಗಳನ್ನು ತುಂಡರಿಸಿರುವ ಆಕೆಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಘಟನೆಯಲ್ಲಿ ಆಕೆ ಒಂದು ಕೈ ಅನ್ನೂ ಕಳೆದುಕೊಂಡಿದ್ದು, ಮೂಳೆ ಮುರಿತಕ್ಕೆ ಒಳಗಾಗಿದ್ದಳು. ಅತಿಯಾದ ರಕ್ತ ಸೋರಿಕೆಯಿಂದಾಗಿ ಆಕೆಗೆ 6 ಯೂನಿಟ್ ರಕ್ತ ನೀಡಿದ್ದು, ಆಕೆಯ  ಸ್ಥಿತಿ ಅತ್ಯಂತ ಗಂಭೀರವಾಗಿದೆ’’ ಎಂದು ಹೇಳಿದ್ದಾರೆ. 

ಈ ಘಟನೆಯ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗಮನ ಸೆಳೆದ ನಂತರ, ನಿರ್ಲಕ್ಷ್ಯದ ಕಾರಣಕ್ಕಾಗಿ ಎಸ್‌ಎಚ್‌ಒ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್ (ಬರೇಲಿ) ರವೀಂದ್ರ ಕುಮಾರ್ ಮತ್ತು ಎಸ್‌ಎಸ್‌ಪಿ ಸುಶೀಲ್ ಚಂದ್ರಭಾನ್ ಘುಲೆ ಬುಧವಾರ ಬೆಳಿಗ್ಗೆ ಬಾಲಕಿಯನ್ನು ಭೇಟಿ ಮಾಡಲು ಆಸ್ಪತ್ರೆಗೆ ಧಾವಿಸಿದ್ದಾರೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ ವಿರೋಧಿಸಿದ 7 ವರ್ಷದ ಬಾಲಕಿಯ ಉಸಿರುಗಟ್ಟಿಸಿ ಕೊಲೆ ಮಾಡಿದ ಪಾಪಿ ಸಂಬಂಧಿಕ

ಅಲ್ಲದೆ, ಉತ್ತರ ಪ್ರದೇಶ ಸಿಎಂ ಸೂಚನೆ ಮೇರೆಗೆ ಸಂತ್ರಸ್ತೆಯ ಪೋಷಕರಿಗೆ ಕೂಡಲೇ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ. ಹಾಗೂ, ಬಾಲಕಿಯನ್ನು ಉನ್ನತ ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಆಕೆಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿ ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು' ಎಂದು ಹೇಳಿದ್ದಾರೆ.

ಇನ್ನೊಂದೆಡೆ,  "ನಾವು ಎಸ್‌ಎಚ್‌ಒ ಅಶೋಕ್ ಕುಮಾರ್ ಕಾಂಬೋಜ್, ಸ್ಥಳೀಯ ಔಟ್‌ಪೋಸ್ಟ್ ಇನ್‌ಚಾರ್ಜ್ ನಿತೇಶ್ ಕುಮಾರ್ ಶರ್ಮಾ ಮತ್ತು ಕಾನ್‌ಸ್ಟೆಬಲ್ ಆಕಾಶ್ ದೀಪ್ ಅವರನ್ನು ನಿರ್ಲಕ್ಷ್ಯಕ್ಕಾಗಿ ಅಮಾನತುಗೊಳಿಸಿದ್ದೇವೆ. ಆರೋಪಿ ವಿಜಯ್ ಮೌರ್ಯ ವಿರುದ್ಧ ಐಪಿಸಿ ಸೆಕ್ಷನ್ 354 ರ ಅಡಿಯಲ್ಲಿ,  ಎಫ್‌ಐಆರ್ ದಾಖಲಿಸಲಾಗಿದೆ. 

 ಎಸ್‌ಎಸ್‌ಪಿ, "ನಾವು ಎಸ್‌ಎಚ್‌ಒ ಅಶೋಕ್ ಕುಮಾರ್ ಕಾಂಬೋಜ್, ಸ್ಥಳೀಯ ಔಟ್‌ಪೋಸ್ಟ್ ಇನ್‌ಚಾರ್ಜ್ ನಿತೇಶ್ ಕುಮಾರ್ ಶರ್ಮಾ ಮತ್ತು ಕಾನ್‌ಸ್ಟೆಬಲ್ ಆಕಾಶ್ ದೀಪ್ ಅವರನ್ನು ನಿರ್ಲಕ್ಷ್ಯಕ್ಕಾಗಿ ಅಮಾನತುಗೊಳಿಸಿದ್ದೇವೆ. ಆರೋಪಿ ವಿಜಯ್ ಮೌರ್ಯ ವಿರುದ್ಧ ಐಪಿಸಿ ಸೆಕ್ಷನ್ 354, 307 (ಕೊಲೆಗೆ ಯತ್ನ), 504 (ಉದ್ದೇಶಪೂರ್ವಕ ಅವಮಾನ), 342 (ತಪ್ಪಾದ ಬಂಧನ) ಮತ್ತು 326 (ಅಪಾಯಕಾರಿ ಆಯುಧಗಳಿಂದ ಸ್ವಯಂಪ್ರೇರಣೆಯಿಂದ ಘೋರವಾದ ಗಾಯವನ್ನು ಉಂಟುಮಾಡುವುದು), ಜೊತೆಗೆ ಪೋಕ್ಸೋ ಕಾಯಿದೆ. ಆರೋಪಿ ನಮ್ಮ ವಶದಲ್ಲಿದ್ದಾನೆ ಎಂದೂ ಎಸ್‌ಎಸ್‌ಪಿ ಹೇಳಿದರು. 

ಇದನ್ನೂ ಓದಿ: ಬಾಯ್‌ಫ್ರೆಂಡ್‌ ಭೇಟಿ ಮಾಡಲು ಬಿಡದ ಹೆತ್ತ ತಾಯಿಗೆ ಚಹಾದಲ್ಲಿ ವಿಷ ಹಾಕಿದ ಹದಿಹರೆಯದ ಹುಡುಗಿ!

"ಕಳೆದ ಕೆಲವು ದಿನಗಳಿಂದ ವಿಜಯ್ ನನ್ನ ಮಗಳಿಗೆ ತೊಂದರೆ ನೀಡುತ್ತಿದ್ದ, ಮಂಗಳವಾರ, ಅವಳು ಮನೆಗೆ ಹಿಂದಿರುಗುತ್ತಿದ್ದಾಗ, ಅವನು ಅವಳನ್ನು ಬಲವಂತವಾಗಿ ತಡೆದನು, ಅವಳು ವಿರೋಧಿಸಿದಾಗ, ಅವನು ಅವಳನ್ನು ರೈಲಿನ ಮುಂದೆ ತಳ್ಳಿದ್ದಾನೆ. ಕೆಲವು ಗಂಟೆಗಳ ನಂತರ, ನಾವು ಅವಳನ್ನು ಖದೌ ರೈಲ್ವೆ ಕ್ರಾಸಿಂಗ್ ಬಳಿ ಕಂಡುಕೊಂಡೆವು’’ ಎಂದು ಈ ಘಟನೆ ಬಗ್ಗೆ ಬಾಲಕಿಯ ತಂದೆ ಹೇಳಿದ್ದಾರೆ. 

ಇದನ್ನು ಓದಿ: ಅಮೆರಿಕದಲ್ಲಿ ಭಾರತೀಯ ಕುಟುಂಬದ ನಾಲ್ವರ ಶವ ಪತ್ತೆ: ನಿಗೂಢ ಸಾವಿನ ಸುತ್ತ ಅನುಮಾನದ ಹುತ್ತ!

Latest Videos
Follow Us:
Download App:
  • android
  • ios