ಲೈಂಗಿಕ ಕಿರುಕುಳ ವಿರೋಧಿಸಿದ 7 ವರ್ಷದ ಬಾಲಕಿಯ ಉಸಿರುಗಟ್ಟಿಸಿ ಕೊಲೆ ಮಾಡಿದ ಪಾಪಿ ಸಂಬಂಧಿಕ
ಸಂಬಂಧಿಕರೊಬ್ಬರು ಪಕ್ಕದ ಮನೆಯ ಟೆರೇಸ್ ಮೇಲೆ ತಿಂಡಿ ಕೊಡುವ ನೆಪದಲ್ಲಿ ಬಾಲಕಿಯನ್ನು ಕರೆದುಕೊಂಡು ಹೋಗಿ ಅನುಚಿತವಾಗಿ ಸ್ಪರ್ಶಿಸಲು ಆರಂಭಿಸಿದ್ದರು. ಇದನ್ನು ವಿರೋಧಿಸಿದ ಬಾಲಕಿಯನ್ನು ಕೊಲೆ ಮಾಡಿದ್ದಾರೆ.
ಲಖನೌ (ಅಕ್ಟೋಬರ್ 8, 2023): ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಏಳು ವರ್ಷದ ಬಾಲಕಿಯನ್ನು ಸಂಬಂಧಿಕನೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಬಾಲಕಿಯನ್ನು ಸಂಬಂಧಿಕ ಅನುಚಿತವಾಗಿ ಮುಟ್ಟುತ್ತಿದ್ದು, ಇದನ್ನು ಆಕೆ ವಿರೋಧಿಸಿದ ಹಿನ್ನೆಲೆ ಆರೋಪಿ ಆಕೆಯನ್ನು ಸಾಯಿಸಿದ್ದಾರೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ, ಆರೋಪಿಯನ್ನು ಬಂಧಿಸಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. ಬಾಲಕಿ ಕೈಲಾ ಭಟ್ಟ ಪ್ರದೇಶದಲ್ಲಿರುವ ತನ್ನ ತಾಯಿಯ ಮಾವನ ಮನೆಗೆ ಬಂದಿದ್ದಳು ಎಂದೂ ಅವರು ಹೇಳಿದರು. ಶುಕ್ರವಾರ ರಾತ್ರಿ ಸಂಬಂಧಿಕರೊಬ್ಬರು ಪಕ್ಕದ ಮನೆಯ ಟೆರೇಸ್ ಮೇಲೆ ತಿಂಡಿ ಕೊಡುವ ನೆಪದಲ್ಲಿ ಆಕೆಯನ್ನು ಕರೆದುಕೊಂಡು ಹೋಗಿ ಅನುಚಿತವಾಗಿ ಸ್ಪರ್ಶಿಸಲು ಆರಂಭಿಸಿದ್ದರು.
ಇದನ್ನು ಓದಿ: ಬಾಯ್‌ಫ್ರೆಂಡ್ ಭೇಟಿ ಮಾಡಲು ಬಿಡದ ಹೆತ್ತ ತಾಯಿಗೆ ಚಹಾದಲ್ಲಿ ವಿಷ ಹಾಕಿದ ಹದಿಹರೆಯದ ಹುಡುಗಿ!
ಇದಕ್ಕೆ ಬಾಲಕಿ ಆಕ್ಷೇಪಿಸಿದಾಗ, ಸಂಬಂಧಿಕ ಆಕೆಯ ಬಾಯಿ ಮುಚ್ಚಿದ್ದಾನೆ ಎಂದೂ ಡಿಸಿಪಿ (ನಗರ) ನಿಪುನ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಬಳಿಕ, ಬಾಲಕಿ ಪ್ರಜ್ಞೆ ತಪ್ಪಿ ಬಿದ್ದಾಗ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಕುಟುಂಬದವರು ಕಂಡುಕೊಂಡಿದ್ದಾರೆ. ಬಳಿಕ, ತಾಯಿಯ ಚಿಕ್ಕಪ್ಪ 7 ವರ್ಷದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿನ ವೈದ್ಯರು ಆಸ್ಪತ್ರೆಗೆ ಬರುವ ಮೊದಲೇ ಬಾಲಕಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಇನ್ನು, ಈ ಘಟನೆ ಬಗ್ಗೆ ಮಾಹಿತಿ ನೀಡಿದ ಘಾಜಿಯಾಬಾದ್ (ನಗರ) ಡಿಎಸ್‌ಪಿ ನಿಪುಣ್ ಅಗರ್ವಾಲ್, "ನಾವು ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ" ಎಂದು 7 ವರ್ಷದ ಬಾಲಕಿಯ ಹತ್ಯೆ ಪ್ರಕರಣದ ಬಗ್ಗೆ ಡಿಸಿಪಿ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಅಮೆರಿಕದಲ್ಲಿ ಭಾರತೀಯ ಕುಟುಂಬದ ನಾಲ್ವರ ಶವ ಪತ್ತೆ: ನಿಗೂಢ ಸಾವಿನ ಸುತ್ತ ಅನುಮಾನದ ಹುತ್ತ!
16 ವರ್ಷದ ಬಾಲಕಿಯೊಬ್ಬಳು ಶುಕ್ರವಾರ ತನ್ನ ತಾಯಿಗೆ ವಿಷ ಬೆರೆಸಿದ ಚಹಾ ನೀಡಿದ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ. ಬಾಯ್‌ಫ್ರೆಂಡ್‌ನೊಂದಿಗೆ ತನ್ನ ಮಗಳ ಸಂಬಂಧವನ್ನು ವಿರೋಧಿಸಿ ಹುಡುಗನನ್ನು ಭೇಟಿಯಾಗದಂತೆ ತಾಯಿ ತಡೆದಿದ್ದೇ ಇದಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಗೂಗಲ್ ಮ್ಯಾಪ್ ನಂಬ್ಕೊಂಡು ಹೋದ ಇಬ್ಬರು ನೀರುಪಾಲು: ಹುಟ್ಟುಹಬ್ಬದ ದಿನವೇ ಬಲಿಯಾದ ಯುವ ವೈದ್ಯ!