ಹೈದರಾಬಾದ್​ ( ಆ. 19) ಇದಕ್ಕಿಂತ ಘೋರ ಕೃತ್ಯ ಇನ್ನೊಂದಿಲ್ಲ. ಮಲತಂದೆಯ ಲ್ಯಾಪ್ ಟಾಪ್ ತೆಗೆದು ನೋಡಿದಾಗ ಮಗಳು ಬೆಚ್ಚಿ ಬಿದ್ದಿದ್ದಾಳೆ. ಲ್ಯಾಪ್ ಟಾಪ್ ನಲ್ಲಿ ಆಕೆಯದ್ದೇ ಬೆತ್ತಲೆ ಚಿತ್ರಗಳು ಇದ್ದವು.

ಆರೋಪಿ ತಂದೆ 40 ವರ್ಷದ ರೆಸ್ಟೋರೆಂಟ್​ ಮಾಲೀಕ ರಾಜೇಶ್​.  ಮಗಳು ಅಪ್ರಾಪ್ತೆಯಾಗಿದ್ದ ಸಮಯದಲ್ಲಿ ಆರೋಪಿ ನಗ್ನ ಚಿತ್ರಗಳನ್ನು ತೆಗೆದು ಲ್ಯಾಪ್​ಟಾಪ್​ನಲ್ಲಿ ಸೇವ್​ ಮಾಡಿಟ್ಟುಕೊಂಡಿದ್ದು ಈಗ ಬಹಿರಂಗವಾಗಿದೆ.

ಸಂತ್ರಸ್ತೆಗೆ ಈಗ 20 ವರ್ಷ ವಯಸ್ಸಾಗಿದ್ದು, ಕಾನೂನು ವಿದ್ಯಾರ್ಥಿನಿಯಾಗಿರುವ ಆಕೆ ಜುಲೈನಲ್ಲಿ ಮಲ ತಂದೆಯ ಲ್ಯಾಪ್​ಟಾಪ್​ ಬಳಸುವಾಗ ತನ್ನದೇ ನಗ್ನ ಚಿತ್ರಗಳನ್ನು ನೋಡಿ ಬೆಚ್ಚಿಬಿದ್ದಿದ್ದಾಳೆ. ಫೋಟೋಗಳನ್ನು ತೆಗೆದಾಗ ಸಂತ್ರಸ್ತೆಗೆ 14 ಅಥವಾ 15 ವರ್ಷ ವಯಸ್ಸಾಗಿತ್ತು ಎಂದು ನಾಚಾರಾಮ್​ ಠಾಣೆಯ ಪೊಲೀಸ್​ ಇನ್ಸ್​ಪೆಕ್ಟರ್​ ಕಿರಣ್​ ಕುಮಾರ್​  ಮಾಹಿತಿ ನೀಡಿದ್ದಾರೆ.

ಐದು ವರ್ಷದ ಲವ್, ನಂತರ ಕಿಡ್ನಾಪ್

ರಾಜೇಶ್​ಗೆ ಸಂತ್ರಸ್ತೆ ಯುವತಿಯ ತಾಯಿ ಎರಡನೇ ಪತ್ನಿ. ಲ್ಯಾಪ್​ಟಾಪ್​ ಫೋಟೋಗಳಿರುವ ಬಗ್ಗೆ ಯುವತಿ ತನ್ನ ತಾಯಿಗೆ ತಿಳಿಸಿದ ನಂತ ಇಬ್ಬರು ಠಾಣೆಗೆ  ತೆರಳಿ ದೂರು ನೀಡಿದ್ದಾರೆ. 

ಆರೋಪಿಯನ್ನು ಈ ಮೊದಲೇ ಬಂಧಿಸಿದ್ದೆವು. ಆದರೆ, ಆತನಿಗೆ ಕರೊನಾ ವೈರಸ್​ ಪಾಸಿಟಿವ್​ ಇದ್ದ ಕಾರಣ ಗುಣಮುಖವಾದ ಬಳಿಕ ಆತನನ್ನು ಸೋಮವಾರ ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.