ಚಿತ್ತೂರ್(ಸೆ. 05) ತಂದೆಯೊಬ್ಬ ತನ್ನ ಐದು ವರ್ಷದ ಮಗಳನ್ನು ನೇಣಿಗೆ  ಹಾಕಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆಂಧ್ರಪ್ರದೇಶದ ಚಿತ್ತೂರ್ ನ ವಸತಿಗೃಹವೊಂದರಲ್ಲಿ ಘೋರ ಘಟನೆ ನಡೆದಿದೆ.  ಮಗುವಿನ ದೇಹ ಲಾಡ್ಜ್ ನ ಬಾತ್ ರೂಂ ನಲ್ಲಿ ನೇತಾಡುತ್ತಿದ್ದರೆ ತಂದೆ ಗಣೇಶ ರೂಂನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

ಸುಶಾಂತ್ ಸಾವಿನ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್

ಗಣೇಶ್ ಮಾಡಿರುವ ಸೆಲ್ಫಿ ವಿಡಿಯೋ ಒಂದು ಘಟನೆಯೆಗ ಘೋರ ಕತೆ ಹೇಳುತ್ತಿದೆ.  ಮಾಜಿ ಹೆಂಡತಿಯಿಂದ ತನ್ನ ಮಗುವನ್ನು ಪಡೆದುಕೊಳ್ಳಲು ಸಾಧ್ಯವಾಗದ ಕಾರಣ ಗಣೇಶ್  ಇಂಥ ನಿರ್ಧಾರ ಮಾಡಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಗಣೇಶ್ ಮತ್ತು ಮಹಿಳೆ ಆರಂಭದಲ್ಲಿ ಚೆನ್ನಾಗಿಯೇ ಇದ್ದರು. ಮಹಿಳೆಗೆ ಅಕ್ರಮ ಸಂಬಂಧ ಇರುವುದು ಗೊತ್ತಾದ ನಂತರ ವಿಚ್ಛೇದನ ಪಡೆದುಕೊಳ್ಳಲಾಗಿತ್ತು. ಮಗು ತಾಯಿಯೊಂದಿಗೆ  ಇದ್ದರೂ ಬಾಲಕಿಗೂ ತಾಯಿ ಹಿಂಸೆ ನೀಡುತ್ತಿದ್ದಳು. ಇದರಿಂದ ತುಂಬಾ ನೊಂದಿದ್ದ ತಂದೆ ಮಗುವನ್ನು ತನ್ನ ಬಳಿಗೆ ಕರೆಸಿಕೊಳ್ಳುವ ಯತ್ನ ಮಾಡಿದ್ದಾರೆ. ಇದು ಯಾವುದು ಸಾಧ್ಯವಾಗದೇ ಇದ್ದಾಗ ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ.