Asianet Suvarna News Asianet Suvarna News

Bengaluru Crime: ಮಿಲಿಟರಿಯಲ್ಲಿ ಕೆಲಸದಾಸೆ ತೋರಿಸಿ ವಂಚನೆ: ನಕಲಿ ಸೇನಾಧಿಕಾರಿ ಬಂಧನ

*   ನೆತೈಚಾಂದ್‌ ಜನಾ ಬಂಧಿತ ಅರೋಪಿ
*   ಉದ್ಯೋಗ ನೀಡುವುದಾಗಿ ನಕಲಿ ನೇಮಕಾತಿ ನಡೆಸುತ್ತಿದ್ದ ನೆತೈಚಾಂದ್‌ 
*   ಆರೋಪಿ ಮೇಲೆ ಕಣ್ಣಿಟ್ಟಿದ್ದ ಮಿಲಿಟರಿ ಗುಪ್ತಚರ ವಿಭಾಗ

Man Fraud to People in the Name of Indian Army Jobs grg
Author
Bengaluru, First Published Feb 13, 2022, 7:11 AM IST

ಬೆಂಗಳೂರು(ಫೆ.13):  ಮಿಲಿಟರಿ ಅಧಿಕಾರಿ(Military Officer) ಎಂದು ನಂಬಿಸಿ ಸೈನ್ಯದ ಉದ್ಯೋಗಕಾಂಕ್ಷಿಗಳನ್ನು ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಭಾರತೀಯ ಸೇನೆಯ ದಕ್ಷಿಣ ಕಮಾಂಡ್‌ನ ಮಿಲಿಟರಿ ಗುಪ್ತಚರ ವಿಭಾಗ ಮತ್ತು ಬೆಂಗಳೂರು ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಭಾರತೀಯ ಸೇನೆಯಲ್ಲಿ(Indian Army) ತಾನು ಲೆಫ್ಟಿನೆಂಟ್‌ ಜನರಲ್‌ ಆಗಿರುವುದಾಗಿ ನೆತೈಚಾಂದ್‌ ಜನಾ ಎಂಬಾತ ಸೇನೆಯಲ್ಲಿ ಕೆಲಸಕ್ಕೆ ಸೇರ ಬಯಸುತ್ತಿದ್ದ ಅಭ್ಯರ್ಥಿಗಳಿಗೆ(Candidates) ಉದ್ಯೋಗ(Job) ನೀಡುವುದಾಗಿ ವಂಚಿಸುತ್ತಿದ್ದ ಮತ್ತು ನಕಲಿ ನೇಮಕಾತಿ(Fake Recruitment) ನಡೆಸುತ್ತಿದ್ದ ಎಂದು ವಿವೇಕ್‌ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

Mumbai Robbery: ಯಾವ ವೆಬ್ ಸಿರೀಸ್‌ಗೂ ಕಡಿಮೆ ಇಲ್ಲ... ವೇಟರ್, ಆಟೋ ಡ್ರೈವರ್‌  ವೇಷ ಧರಿಸಿ ಕಳ್ಳರ ಗ್ಯಾಂಗ್  ಸೆರೆ!

ಭಾರತೀಯ ಸೇನೆಯಲ್ಲಿ ಸಿಪಾಯಿ ಆಗಿದ್ದ ನೆತೈಚಾಂದ್‌ ಜನಾ 2009ರಲ್ಲಿ ಸೇನೆ ಬಿಟ್ಟಿದ್ದ. ಉದ್ಯೋಗಕಾಂಕ್ಷಿಗಳನ್ನು ಸೆಳೆಯಲು ಅನೇಕ ನಕಲಿ ಗುರುತಿನ ದಾಖಲೆಗಳನ್ನು ಸೃಷ್ಟಿಸಿದ್ದ. ಕಳೆದ ಒಂದು ವರ್ಷದಿಂದ ಆತನ ಮೇಲೆ ಮಿಲಿಟರಿ ಗುಪ್ತಚರ ವಿಭಾಗ ಕಣ್ಣಿಟ್ಟಿತು. ಬಂಧಿತನಿಂದ ಸೇನೆಯ ನಕಲಿ ಗುರುತಿನ ಚೀಟಿ, ಸೇನಾ ಸಮವಸ್ತ್ರದಲ್ಲಿನ ಆತನ ಭಾವಚಿತ್ರ ಮತ್ತು ಉದ್ಯೋಗಾಕಾಂಕ್ಷಿಗಳ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಹಣದಾಸೆಗೆ ಬೈಕ್‌ ಕಳವು; ಕೂಲಿ ಕಾರ್ಮಿಕರ ಬಂಧನ

ಬೆಂಗಳೂರು: ಮನೆ ಮುಂದೆ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಕಳವು(Bike Theft) ಮಾಡುತ್ತಿದ್ದ ಕೂಲಿ ಕಾರ್ಮಿಕರಿಬ್ಬರನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ(Arrest).

ಹೊಸಕೆರೆಹಳ್ಳಿ ಶೇಖರ್‌ ಹಾಗೂ ಚನ್ನಸಂದ್ರದ ಚೇತನ್‌ ಬಂಧಿತರಾಗಿದ್ದು, ಆರೋಪಿಗಳಿಂದ 9 ಲಕ್ಷ ರು. ಮೌಲ್ಯದ 11 ದ್ವಿಚಕ್ರ ವಾಹನಗಳು ಹಾಗೂ ವಿವಿಧ ಕಂಪನಿಗಳ 11 ಮೊಬೈಲ್‌ಗಳು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಸರಣಿ ಬೈಕ್‌ ಕಳ್ಳತನಗಳು ನಡೆದಿದ್ದವು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ(CCTV) ಕ್ಯಾಮೆರಾ ದೃಶ್ಯಾವಳಿ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕೂಲಿ ಕಾರ್ಮಿಕರಾಗಿದ್ದ ಆರೋಪಿಗಳು, ಹಣದಾಸೆಗೆ ಅಡ್ಡದಾರಿ ತುಳಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಬೈಕ್‌ ಕಳ್ಳತನ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ ಶೇಖರ್‌ ಬಳಿಕ ಜಾಮೀನು ಹೊರಬಂದು ತನ್ನ ಚಾಳಿ ಮುಂದುವರೆಸಿದ್ದಾನೆ. ಆತನಿಗೆ ಚೇತನ್‌ ಸಹಕರಿಸುತ್ತಿದ್ದನು.ಆರೋಪಿಗಳಿಂದ ರಾಜರಾಜೇಶ್ವರಿ ನಗರ, ಚಂದ್ರಾಲೇಔಟ್‌, ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಚೂರಿ ಇರಿತ: ಇಬ್ಬರ ಬಂಧನ

ಬಂಟ್ವಾಳ(Bantwal): ಬಾರೊಂದರಲ್ಲಿ ಕುಡಿದು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಚೂರಿ ಇರಿತಕ್ಕೊಳಗಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದು ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಕಾವಳಮೂಡೂರು ನಿವಾಸಿ ಪುರುಷ ಯಾನೆ ಪುರುಷೋತ್ತಮ ಹಾಗೂ ಬಿ. ಕಸಬಾ ನಿವಾಸಿ ಧನುಷ್‌ ಯಾನೆ ಧನಂಜಯ ಬಂಧಿತ ಆರೋಪಿಗಳು.

ಘಟನೆಯ ವಿವರ:

ಸ್ನೇಹಿತರು ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡಿಕೊಂಡ ಬಳಿಕ ಚೂರಿ ಇರಿತಕ್ಕೊಳಗಾಗಿದ್ದು ಇರಿತದಿಂದ ಇಬ್ಬರು ಗಾಯಗೊಂಡ ಘಟನೆ ಬಂಟ್ವಾಳ ಬೈಪಾಸ್‌ ಜಂಕ್ಷನ್‌ ಬಳಿ ಫೆ. 9ರಂದು ನಡೆದಿತ್ತು.

Bengaluru Crime: ಸ್ನೇಹಿತನ ಹತ್ಯೆ ಮಾಡಿದ್ದ ಆಟೋ ಚಾಲಕನ ಬಂಧನ

ಲಕ್ಷಾಂತರ ರು. ವಂಚಿಸಿದ್ದ ಆರೋಪಿ ಬಂಧನ

ಬೆಳಗಾವಿ(Belagavi): ಕೆಲಸ ಮಾಡುತ್ತಿದ್ದ ಪೆಟ್ರೋಲ್‌ ಬಂಕ್‌ ಮಾಲೀಕನಿಗೆ ಲಕ್ಷಾಂತರ ರು.ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಗುರುವಾರ ನಗರದ ಸಿಇಎನ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ನಾವಗೆ ಕ್ರಾಸ್‌ ನಿವಾಸಿ ರೋಹಿತ ಬೆಳಗುಂದಕರ ಬಂಧಿತ ಆರೋಪಿ. ತಾಲೂಕಿನ ಮಚ್ಛೆಯ ಸೋಮನಾಥ ಪೆಟ್ರೋಲಿಯಂ ಮಾಲೀಕರಿಗೆ ವಂಚಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಆತನಿಂದ .28 ಲಕ್ಷ ವಶಪಡಿಸಿಕೊಂಡಿದ್ದಾರೆ. 

ಈತ ಇದೇ ಪೆಟ್ರೋಲಿಯಂನಲ್ಲಿ 2019ರಿಂದ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ. 2020ರ ಆಗಸ್ಟ್‌ನಿಂದ ತನ್ನ ಫೋನ್‌ ಪೇ ಖಾತೆಯಿಂದ ಮಾಲೀಕರ ಖಾತೆಗೆ ನಿತ್ಯವೂ ಹಣ ವರ್ಗಾಯಿಸುತ್ತಿದ್ದ. ನಿತ್ಯದ ಲೆಕ್ಕಪತ್ರ ನೀಡುವಾಗ ಫೋನ್‌ ಪೇ ಬಿಜಿನೆಸ್‌ ಆ್ಯಪ್‌ನಲ್ಲಿ ಮರ್ಚಂಟ್‌ ಐಡಿ ಮುಖಾಂತರ ರಿ​ಫಂಡ್‌ ಆಪ್ಷನ್‌ ಒತ್ತಿ, ಮಾಲೀಕರಿಗೆ ಗೊತ್ತಿಲ್ಲದಂತೆ ಆ ಹಣ ಮರಳಿ ತನ್ನ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದ. ಈ ವಿಷಯ ಗೊತ್ತಾಗುತ್ತಿದ್ದಂತೆ ಮಾಲೀಕ ಸುನೀಲ ವಿಷ್ಣು ಶಿಂಧೆ ದೂರು ಸಲ್ಲಿಸಿದ್ದರು. ರೋಹಿತ . 44 ಲಕ್ಷ ವಂಚಿಸಿರುವುದಾಗಿ ಆಪಾದಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
 

Follow Us:
Download App:
  • android
  • ios