*  ಯಾವ ಸಿನಿಮಾ ಕತೆಗೂ  ಕಡಿಮೆ ಇಲ್ಲ* ವೇಟರ್ , ಆಟೋ ಚಾಲಕರ ರೀತಿ ವೇಷ ಮರೆಸಿಕೊಂಡು ಆರೋಪಿಒಗಳ ಸೆರೆ* ಮಹಿಳೆ ಮನೆಯಲ್ಲಿ ಕಳ್ಳತನ ಮಾಡಿದ್ದರು

ಮುಂಬೈ(ಫೆ. 11) ಇದು ಯಾವ ಸಿನಿಮಾ, (Bollywood) ವೆಬ್ ಸೀರಿಸ್ ಗೂ ಕಡಿಮೆ ಇಲ್ಲ. ಮುಂಬೈ ಪೊಲೀಸರಿಗೆ (Mumbai Police) ಸವಾಲಾಗಿದ್ದ ಮಲಾಡ್ ದರೋಡೆ ಪ್ರಕರಣದಲ್ಲಿ ಸಿಕ್ಕ ಸುಳಿವನ್ನು ಆಧರಿಸಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಐವರನ್ನು ಬಂಧಿಸಿದ್ದಾರೆ. 

 60 ವರ್ಷದ ಮಹಿಳೆ ಮನೆಯಿಂದ 21 ಲಕ್ಷ ರೂ. ದರೋಡೆ (Robbery) ಮಾಡಿದ್ದ ತಂಡದ ಸದಸ್ಯರು ಸರೆ ಸಿಕ್ಕಿದ್ದಾರೆ. ಮಹಿಳೆ ತಮ್ಮ ಜನ್ಮದಿನ ಆಚರಣೆ ಮಾಡಿಕೊಳ್ಳಲು ಹೊರಗೆ ಹೋಗಿದ್ದಾಗ ಜನವರಿ 31 ರಂದು ಆಕೆ ಮನೆಯನ್ನು ದರೋಡೆ ಮಾಡಲಾಗಿತ್ತು.

ರಾತ್ರಿ ಸುಮಾರು ಹತ್ತು ಗಂಟೆ ಸಂದರ್ಭ ನಾಲ್ಕನೇ ಮಹಡಿಯಲ್ಲಿದ್ದ ಅಪಾರ್ಟ್ ಮೆಂಟ್ ಗೆ ಬಂದು ನೋಡಿದಾಗ ಮಹಿಳೆಗೆ ಆಘಾತವಾಗಿದೆ. ಆಭರಣಗಳು, ಮನೆಯಲ್ಲಿದ್ದ ಹಣ ಮತ್ತು ಟಿವಿ ಸೆಟ್ ಕದ್ದು ತಂಡ ಪರಾರಿಯಾಗಿದ್ದು ಗೊತ್ತಾಗಿದೆ.

Robbery: ಕಲಬುರಗಿ, ದಶಕದಿಂದ ತಲೆ ಮರೆಸಿಕೊಂಡಿದ್ದ ಕುಖ್ಯಾತ ಮನೆಗಳ್ಳರ ಬಂಧನ

ಸುತ್ತಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಪೊಲೀಸರಿಗೆ ಒಂದೆರಡು ಸುಳಿವು ಸಿಕ್ಕಿದೆ. ಅನುಮಾನಾಸ್ಪದವಾಗಿ ಓಢಾಡಿದ್ದ ವಾಹನದ ನಂಬರ್ ಪತ್ತೆ ಮಾಡಿ ಬೆನ್ನು ಬಿದ್ದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆಟೋ ಚಾಲಕರನ್ನು ವಿಚಾರಣೆ ಮಾಡಿ ಮಾಹಿತಿ ಕಲೆ ಹಾಕಿದ್ದಾರೆ. 

 ಅಪರಾಧ ಹಿನ್ನಲೆ ಇದ್ದ ಆಟೋ ಚಾಲಕರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಲಾಗಿದೆ. ಈ ವೇಳೆ ಕೆಲವರು ತಲೆಮರೆಸಿಕೊಂಡ ಮಾಹಿತಿಯೂ ಲಭ್ಯವಾಗಿದೆ. ಕಳ್ಳತನದ ಆರೋಪದ ಮೇಲೆ ಬಂಧಿತನಾಗಿದ್ದ ನೌಶಾದ್ ಖಾನ್ ಪೋನ್ ಮಾಹಿತಿಯನ್ನು ಹೊರತೆಗೆದಾಗ ಇನ್ನಷ್ಟು ಅಂಶಗಳು ಪತ್ತೆಯಾಗಿವೆ. ನಂತರ ಪೊಲೀಸರು ನೌಶಾದ್ ಖಾನ್ ಪೋನ್ ಬಳಸಿಕೊಂಡೆ ಉಳಿದವರಿಗೆ ಕರೆ ಮಾಡಿ ಪಾರ್ಟಿ ಆಯೋಜನೆ ಮಾಡಿದ್ದೇನೆನ ಬರಬೇಕು ಎಂದು ಆಹ್ವಾನ ಕೊಟ್ಟಿದ್ದಾರೆ.

ನೌಶಾದ್ ಸಹಚರರಾದ ಸದ್ದಾಂ, ಅಬ್ದುಲ್ ಮತ್ತು ರೋನಿ ಫರ್ನಾಂಡಿಸ್ ಗೆ ಪ್ರತ್ಯೇಕವಾಗಿ ಕರೆ ಮಾಡಿಸಲಾಗಿದೆ. ಬಾರ್ ಗೆ ಬರಲು ತಿಳಿಸಿದ ನಂತರ ಪೊಲೀಸರು ವೇಟರ್ ಮತ್ತು ಆಟೋ ಚಾಲಕರ ವೇಷ ಧರಿಸಿ ಅಲ್ಲಿಗೆ ತೆರತಳಿದ್ದಾರೆ. ಇನ್ನು ಕೆಲಸಾವು ಪೊಲೀಸರು ಲವರ್ಸ್ ರೀತಿ, ಬೀದಿ ವ್ಯಾಪಾರಿಗಳ ರೀತಿ ವೇಷ ಮರೆಸಿಕೊಂಡಿದ್ದರು. ಅಬ್ದುಲ್ ಪಠಾಣ್, ಗುಡ್ಡು ಸೋನಿ ಎಂಬುವರನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದಾರೆ.

ಬೆಂಗಳೂರು ಪ್ರಕರಣ : ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿ ಮನೆಗೆ ನುಗ್ಗಿ 3.5 ಲಕ್ಷ ರು. ನಗದು ಹಾಗೂ ಪಿಸ್ತೂಲ್‌ ದೋಚಿ ಪರಾರಿಯಾಗಿದ್ದ ಐದು ಮಂದಿ ಆರೋಪಿಗಳನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದರು.

ಸಂಜಯನಗರ ನಿವಾಸಿ ಎಂ.ಮಂಜುನಾಥ(35), ಕಾವಲ್‌ ಬೈರಸಂದ್ರದ ಮಹಮ್ಮದ್‌ ಶೋಯೆಬ್‌ ರಬ್ಬಾನಿ ಅಲಿಯಾಸ್‌ ಫಕರ್‌ ಅಲಿ(32), ಸಹಕಾರನಗರದ ಟಿ.ಸಿ.ಪ್ರಶಾಂತ್‌ಕುಮಾರ್‌(40), ಯಶವಂತಪುರದ ವೈ.ಸಿ.ದುರ್ಗೇಶ(30) ಹಾಗೂ ಆರ್‌.ಟಿ.ನಗರದ ಕೆ.ಕುಮಾರ್‌(40) ಬಂಧಿತರು. ಆರೋಪಿಗಳಿಂದ 1.7 ಲಕ್ಷ ರು. ನಗದು, 2 ಪಿಸ್ತೂಲ್‌ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. 

ಆರೋಪಿಗಳು ಜ.23ರಂದು ಬೆಳಗ್ಗೆ 8.45ರ ಸುಮಾರಿಗೆ ಸಂಜಯನಗರದ ಕ್ಯಾಡ್‌ಮೆಟ್‌ ಲೇಔಟ್‌ನ ನಿವಾಸಿ ಆರ್‌.ಚೇತನ್‌ ಎಂಬುವವರ ಮನೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ದಾಳಿ ಮಾಡಿದ್ದರು. ಮನೆ ಪರಿಶೀಲಿಸುವ ನೆಪದಲ್ಲಿ ವಾರ್ಡ್‌ರೂಬ್‌ನ ಲಾಕರ್‌ನಲ್ಲಿದ್ದ ನಗದು ಹಾಗೂ ಒಂದು ಪಿಸ್ತೂಲ್‌ ದರೋಡೆ ಮಾಡಿ ಪರಾರಿಯಾಗಿದ್ದರು.