Bengaluru Crime: ಕುಡಿಯಲು ಕಾಸು ಕೊಡಲಿಲ್ಲ ಎಂದು ಗೆಳತಿಗೆ ಬೆಂಕಿ ಇಟ್ಟ ಪಾಪಿ..!
* 6 ತಿಂಗಳಿಂದ ಲಿವಿಂಗ್ ಟುಗೆದರ್‌ನಲ್ಲಿದ್ದ ಕೂಲಿ ಕಾರ್ಮಿಕ ಜೋಡಿ
* ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೀನಾ
* ವೈಯಕ್ತಿಕ ವಿಚಾರವಾಗಿ ಇಬ್ಬರ ಮಧ್ಯೆ ಜಗಳ
ಬೆಂಗಳೂರು(ಮಾ.12): ಕುಡಿಯಲು ಹಣ ನೀಡದ ಕಾರಣಕ್ಕೆ ಕೋಪಗೊಂಡು ಗೆಳತಿಗೆ ಬೆಂಕಿ(Fire) ಹಚ್ಚಿ ಕೊಲೆಗೆ ಯತ್ನಿಸಿದ ಕೂಲಿ ಕಾರ್ಮಿಕನೊಬ್ಬನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಳೇ ಬ್ಯಾತನಹಳ್ಳಿ ನಿವಾಸಿ ಬಾಬು ಬಂಧಿತನಾಗಿದ್ದು(Arrest), ಘಟನೆಯಲ್ಲಿ ಗಾಯಗೊಂಡಿರುವ ಮೀನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ದಿನಗಳ ಹಿಂದೆ ಮನೆಯಲ್ಲಿ ವೈಯಕ್ತಿಕ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆರೋಪಿ(Accused) ಬೆಂಕಿ ಹಚ್ಚಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೂಲಿ ಕಾರ್ಮಿಕರಾದ ಮೀನಾ ಹಾಗೂ ಬಾಬು ಲಿವಿಂಗ್ ಟುಗೆದರ್‌ನಲ್ಲಿದ್ದು, ಆರು ತಿಂಗಳಿಂದ ಬ್ಯಾತನಹಳ್ಳಿಯಲ್ಲಿ ನೆಲೆಸಿದ್ದರು. ಮದುವೆಯಾಗಿ ಪತ್ನಿಯಿಂದ ಬಾಬು ಪ್ರತ್ಯೇಕವಾಗಿದ್ದರೆ, ಮೀನಾ ಪತಿ ಮೃತಪಟ್ಟಿದ್ದರು. ಇದಾದ ಬಳಿಕ ಇಬ್ಬರು ಒಟ್ಟಿಗೆ ವಾಸವಾಗಿದ್ದರು. ಇತ್ತೀಚಿಗೆ ವೈಯಕ್ತಿಕ ವಿಚಾರವಾಗಿ ಅವರ ಮಧ್ಯೆ ಮನಸ್ತಾಪವಾಗಿತ್ತು. ವಿಪರೀತ ಮದ್ಯ ವ್ಯಸನಿ ಆಗಿದ್ದ ಬಾಬು, ಪ್ರತಿದಿನ ಮದ್ಯ(Alcohol) ಸೇವನೆಗೆ ಹಣ ಕೊಡುವಂತೆ ಗೆಳತಿಗೆ ಪೀಡಿಸುತ್ತಿದ್ದ. ಇದಕ್ಕೆ ಆಕೆ ಆಕ್ಷೇಪಿಸಿದ್ದರಿಂದ ಗಲಾಟೆ ನಡೆದಿತ್ತು. ಅಂತೆಯೇ ಬುಧವಾರ ಸಹ ಗಲಾಟೆಯಾಗಿದೆ. ಆಗ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಳ್ಳುವುದಾಗಿ ಮೀನಾ ಹೇಳಿದ್ದಾಳೆ.
Bengaluru Drug Bust: ಕುರ್ಕುರೆ, ಚಕ್ಕುಲಿ ಪ್ಯಾಕೆಟಲ್ಲಿ ಡ್ರಗ್ಸ್ ತುಂಬಿಸಿ ಮಾರಾಟ..!
ಈ ಮಾತಿಗೆ ಕೆರಳಿದ ಬಾಬು, ನೀನೇನು ಆತ್ಮಹತ್ಯೆ ಮಾಡಿಕೊಳ್ಳುವುದೋ ನಾನೇ ಬೆಂಕಿ ಹಚ್ಚಿ ಸಾಯಿಸುತ್ತೇನೆ ಎಂದು ಹೇಳಿ ಬೆಂಕಿ ಹಚ್ಚಿದ್ದಾನೆ. ಈ ಗಲಾಟೆ ಶಬ್ಧ ಕೇಳಿ ನೆರೆಹೊರೆಯವರು ಜಮಾಯಿಸಿ ಮೀನಾಳನ್ನು ರಕ್ಷಿಸಿದ್ದಾರೆ. ಆಸ್ಪತ್ರೆಯಲ್ಲಿ ಆಕೆ ಚಿಕಿತ್ಸೆ(Treatment) ಪಡೆಯುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.
ಅಪ್ರಾಪ್ತೆಯ ಪ್ರಜ್ಞೆ ತಪ್ಪಿಸಿ ವೇಶ್ಯಾವಾಟಿಕೆ ದಂಧೆ: ಮಹಿಳೆಯರಿಂದಲೇ ಹೇಯ ಕೃತ್ಯ..!
ಬೆಂಗಳೂರು(ಮಾ.11): ಟೈಲರಿಂಗ್ ಕಲಿಸುವ ನೆಪದಲ್ಲಿ ಅಪ್ರಾಪ್ತ ಬಾಲಕಿಯನ್ನು(Minor Girl) ವೇಶ್ಯಾವಾಟಿಕೆ(Prostitution) ದಂಧೆಗೆ ತಳ್ಳಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಕಿಡಿಗೇಡಿಗಳು ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರ(Police) ಬಲೆಗೆ ಬಿದ್ದಿದ್ದರು.
Student Suicide:ಧಾರವಾಡ ಪಿಜಿಯಲ್ಲಿ ನೇಣಿಗೆ ಶರಣಾದ ಬಾಗಲಕೋಟೆ ಸ್ಟೂಡೆಂಟ್, ಕಾರಣ ನಿಗೂಢ
ಬಂಡೇಪಾಳ್ಯ ಸಮೀಪದ ರಾಜೇಶ್ವರಿ, ಕಲಾವತಿ, ತಮಿಳುನಾಡು(Tamil Nadu) ಹೊಸೂರಿನ ಕೇಶವಮೂರ್ತಿ, ಕೋರಮಂಗಲದ ಸತ್ಯರಾಜ್, ಯಲಹಂಕದ ಶರತ್ ಹಾಗೂ ಬೇಗೂರಿನ ರಫೀಕ್ ಬಂಧಿತರು(Arrest). ತಮ್ಮ ಮನೆಗೆ ಟೈಲರಿಂಗ್ ಕಲಿಯಲು ಬರುತ್ತಿದ್ದ 16 ವರ್ಷದ ಅಪ್ರಾಪ್ತ ಬಾಲಕಿಗೆ ಕಲಾವತಿ ಹಾಗೂ ರಾಜೇಶ್ವರಿ ಬೆದರಿಸಿ ವೇಶ್ಯಾವಾಟಿಕೆ ದಂಧೆಗೆ ತಳ್ಳಿದ್ದರು. ಈ ಕಾಟ ಸಹಿಸಲಾರದೆ ಸಂತ್ರಸ್ತೆ, ಎಚ್‌ಎಸ್‌ಆರ್ ಲೇಔಟ್ ಠಾಣೆಗೆ ತನ್ನ ಪೋಷಕರ ಜತೆ ಭಾನುವಾರ ತೆರಳಿ ದೂರು(Complaint) ಸಲ್ಲಿಸಿದ್ದಳು. ದೂರಿನ ಅನ್ವಯ ಪೊಲೀಸರು, ಕೃತ್ಯ ಬೆಳಕಿಗೆ ಬಂದ 36 ತಾಸಿನೊಳಗೆ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರು.
ಟೈಲರಿಂಗ್ ನೆಪದಲ್ಲಿ ವೇಶ್ಯಾವಾಟಿಕೆ
ಬಂಡೇಪಾಳ್ಯ ಸಮೀಪ ನೆಲೆಸಿದ್ದ ರಾಜೇಶ್ವರಿ ಹಾಗೂ ಕಲಾವತಿ, ಹಲವು ವರ್ಷಗಳಿಂದ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದರು. ಆದರೆ ತಮ್ಮ ವ್ಯವಹಾರ ಜನರಿಗೆ ಗೊತ್ತಾದಂತೆ ಮನೆಯಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದರು. ಕೊರೋನಾ ಸೋಂಕಿನ ಕಾಲದಲ್ಲಿ ಜನರಿಗೆ ಪಿಪಿಇ ಕಿಟ್‌ಗಳು ಹಾಗೂ ಮಾಸ್ಕ್‌ಗಳನ್ನು ಕೂಡಾ ಹೊಲಿದು ಕೊಟ್ಟು ಒಳ್ಳೆಯ ಅಭಿಪ್ರಾಯವನ್ನು ಮೂಡಿಸಿದ್ದರು. ಇದರಿಂದ ನೆರೆಹೊರೆಯ ಮಹಿಳೆಯರೊಂದಿಗೆ(Women) ಉತ್ತಮ ಸ್ನೇಹ ಬೆಳೆದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳ ಮನೆಗೆ ಕೆಲ ದಿನಗಳ ಹಿಂದೆ ಟೈಲರಿಂಗ್ ಕಲಿಯಲು ತಮ್ಮ ಮಗಳನ್ನು ಆಕೆಯ ಪೋಷಕರು ಕಳುಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು.