Udupi: ಮೆಹಂದಿ ಕಾರ್ಯಕ್ರಮದಲ್ಲಿ ಹೃದಯಾಘಾತದಿಂದ ವ್ಯಕ್ತಿ ಸಾವು

ಮದುವೆಯ ಮುಂಚಿನ ದಿನದ ಮೆಹಂದಿ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಇಲ್ಲಿನ ಅಂಬಾಗಿಲು ಗ್ರಾಮದ ಪುತ್ತೂರಿನಲ್ಲಿ ಇತ್ತೀಚೆಗೆ ನಡೆದಿದೆ. ಮೃತರು ಪುತ್ತೂರು ನಿವಾಸಿ ಗಣಪತಿ ಆಚಾರ್ಯ (56).

man died by heart attack while dancing in mehndi program udupi gvd

ಉಡುಪಿ (ಜು.10): ಮದುವೆಯ ಮುಂಚಿನ ದಿನದ ಮೆಹಂದಿ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಇಲ್ಲಿನ ಅಂಬಾಗಿಲು ಗ್ರಾಮದ ಪುತ್ತೂರಿನಲ್ಲಿ ಇತ್ತೀಚೆಗೆ ನಡೆದಿದೆ. ಮೃತರು ಪುತ್ತೂರು ನಿವಾಸಿ ಗಣಪತಿ ಆಚಾರ್ಯ (56). ವೃತ್ತಿಯಲ್ಲಿ ಚಿನ್ನಾಭರಣ ತಯಾರಿಕರಾಗಿದ್ದರು. ಅವರು ನೆರೆಮನೆಯಲ್ಲಿ ಸಂಬಂಧಿಕರ ಮೆಹಂದಿ ಕಾರ್ಯಕ್ರಮದಲ್ಲಿ ಇತರರೊಂದಿಗೆ ನೃತ್ಯ ಮಾಡುತಿದ್ದವರು ಸುಸ್ತಾಗಿ ಕುರ್ಚಿಯಲ್ಲಿ ಕುಳಿತು, ಅಲ್ಲಿಯೇ ಕುಸಿದು ಬಿದ್ದರು. 

ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅದಾಗಲೇ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಮೃತರು ಚಿನ್ನಾಭರಣ ತಯಾರಿಕೆಯ ಜೊತೆಗೆ ಸೊಸೈಟಿಯೊಂದರ ಪಿಗ್ಮಿ ಸಂಗ್ರಹ ಮಾಡುತಿದ್ದರು. ಪತ್ನಿ, ಇಬ್ಬರು ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

ಹಾರ್ಟ್ ಅಟ್ಯಾಕ್‌ ಸೂಚನೆ ಒಂದು ತಿಂಗಳ ಮೊದ್ಲೇ ಸಿಗುತ್ತೆ !

ಭತ್ತ ನಾಟಿ ಮಾಡುತ್ತಿರುವಾಗ ಕುಸಿದು ಬಿದ್ದು ರೈತ ಸಾವು: ಸಾವು ಹೇಳಿ ಕೇಳಿ ಬರಲ್ಲ.. ಯಾವ ಹೊತ್ತಿನಲ್ಲಿ ಸಾವು ಬರುತ್ತೋ ಗೊತ್ತಿಲ್ಲ. ಇನ್ನು ಇತ್ತೀಚೆಗೆ ಎಳೆಪ್ರಾಯದ ಯುವಕರಲ್ಲಿ, ಮಧ್ಯವಯಸ್ಕರಲ್ಲಿ ಹೃದಯಾಘಾತ ಸಾಮಾನ್ಯವಾಗಿದೆ. ಏನಾದರೂ ಕೆಲಸ ನಡೆಸುತ್ತಿರುವಾಗಲೇ ಪೂರ್ವ ಸೂಚನೆ ಇಲ್ಲದೆ ಹೃದಯಘಾತ ಸಂಭವಿಸಿದ ಅನೇಕ ಘಟನೆಗಳನ್ನು ಕಂಡಿದ್ದೇವೆ. ಹೌದು! ಭತ್ತದ ಗದ್ದೆ ಉಳುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿಯೊಬ್ಬ ಅಸುನೀಗಿದ್ದಾರೆ.  ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.

ಕುಂದಾಪುರದ ಕೆರಾಡಿ ಗ್ರಾಮದ ದೀಟಿ ಎಂಬಲ್ಲಿ ಕೃಷಿ ಕಾಯಕದಲ್ಲಿ ತೊಡಗಿದಾಗಲೇ ವ್ಯಕ್ತಿಯೊಬ್ಬರು ಗದ್ದೆಯಲ್ಲಿ ಬಿದ್ದು ಅಸುನಗಿದ್ದಾರೆ. ಹರಿಹರ ಮೂಲದ ನಡುವಯಸ್ಸಿನ ರಾಜು ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. ಬಿತ್ತನೆಗೂ ಮುನ್ನ ಗದ್ದೆ ಹದ ಮಾಡುವ ಸಲುವಾಗಿ ಬೆಳಗ್ಗಿನಿಂದಲೇ ಕಾರ್ಯಪ್ರವೃತ್ತರಾಗಿದ್ದರು. ಇಂದು ವಿಪರೀತ ಮಳೆ ಇದ್ದ ಕಾರಣ, ಗದ್ದೆ ಹದ ಮಾಡುವ ಕಾರ್ಯ ಬಿರುಸಿನಿಂದ ಸಾಗಿತ್ತು. ಕೆಲಸ ಮಾಡುತ್ತಿರುವಾಗಲೇ ಜವರಾಯ ಬಂದೆರಗಿದ್ದಾನೆ. ಗದ್ದೆಯಲ್ಲಿ ಟ್ರ್ಯಾಕ್ಟರ್ ಮೂಲಕ ರಾಜು ಉಳುತ್ತಿದ್ದರು. ಟ್ರ್ಯಾಕ್ಟರ್ ಮೇಲಿದ್ದಾಗಲೇ ಹೃದಯಾಘಾತ ಸಂಭವಿಸಿದೆ.ಗದ್ದೆಯಲ್ಲಿ ಯಾರು ಇಲ್ಲದ ಹಿನ್ನೆಲೆಯಲ್ಲಿ, ರಾಜು  ಟ್ರಾಕ್ಟರ್ ನಿಂದ ಕೆಳಗೆ ಬಿದ್ದರು.ಕೆಲ ಹೊತ್ತಿನ ಬಳಿಕ ಬಂದು ನೋಡಿದಾಗ ರಾಜು ಗದ್ದೆಯಲ್ಲಿ ಶವವಾಗಿದ್ದರು.

ಹಾರ್ಟ್‌ ಅಟ್ಯಾಕ್ ಆದ್ರೆ ಆರೋಗ್ಯವನ್ನು ಹೀಗೆ ನೋಡ್ಕೊಳ್ಳಿ

ಸ್ಥಳೀಯರು ಕೂಡಲೇ  ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ರಾಜು ಇಹಲೋಕ ತ್ಯಜಿಸಿದ್ದರು.ಕರಾವಳಿ ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಉಳುಮೆ ಮಾಡಲೆಂದೇ ರಾಜು ಉಡುಪಿಯ ಕುಂದಾಪುರಕ್ಕೆ ಬಂದಿದ್ದರು. ಹೊಟ್ಟೆಪಾಡಿಗೆ ಬಂದು ದುಡಿಯುವ  ಸಂದರ್ಭದಲ್ಲೇ ನಡೆದ ಹೃದಯವಿದ್ರಾವಕ ಘಟನೆಯಿಂದ ಅವರ ಕುಟುಂಬ ತೀವ್ರ ಆಘಾತ ಎದುರಿಸಿದೆ. ಘಟನೆ ಸಂಭವಿಸಿದ ಕೆರಾಡಿ ಗ್ರಾಮ ದಿಗ್ಬ್ರಮೆ ಗೊಂಡಿದೆ.ಗದ್ದೆಯಲ್ಲಿ ಹೆಣವಾಗಿ ಬಿದ್ದ ರಾಜು ಶವವನ್ನು ನೋಡಿ  ದೀಟಿ ಭಾಗದ ಜನತೆ ಮರುಗಿದ್ದಾರೆ. 

Latest Videos
Follow Us:
Download App:
  • android
  • ios