Asianet Suvarna News Asianet Suvarna News

Suicide; ಏಕಕಾಲಕ್ಕೆ ನಾಲ್ವರೊಂದಿಗೆ ಡೇಟಿಂಗ್, ಸಿಕ್ಕಿಬಿದ್ದು ವಿಷ ಕುಡಿದ

* ಏಕಕಕಾಲಕ್ಕೆ ನಾಲ್ವರು ಯುವತಿಯರ ಜತೆ ಡೇಟಿಂಗ್
* ನಾಲ್ವರು ಸೇರಿ ರೆಡ್ ಹ್ಯಾಂಡ್ ಆಗಿ ಹಿಡಿದರು
*  ಯುವತಿಯರ ಜತೆ ಕಿತ್ತಾಡಿಕೊಂಡು ವಿಷ ಸೇವಿಸಿದ
* ಆತ್ಮಹತ್ಯೆಗೆ  ಯತ್ನಿಸಿದವನಿಗೆ ಚಿಕಿತ್ಸೆ

Man dating four women at the same time attempts suicide West Bengal mah
Author
Bengaluru, First Published Nov 13, 2021, 1:39 AM IST
  • Facebook
  • Twitter
  • Whatsapp

ಕೋಲ್ಕತ್ತಾ(ನ . 13)  ಇದೊಂದು ವಿಚಿತ್ರ ಪ್ರಕರಣ. ಏಕಕಾಲಕ್ಕೆ ನಾಲ್ಕು ಜನ ಯುವತಿರೊಂದಿಗೆ (Woman) ಡೇಟಿಂಗ್ (Dating), ಚಾಟಿಂಗ್ ಮಾಡುತ್ತಿದ್ದ ಆಸಾಮಿ ಆತ್ಮಹತ್ಯೆಗೆ (suicide)ಯತ್ನಿಸಿದ್ದಾನೆ. ಡೇಟಿಂಗ್ ನಿಪುಣವಾಗಿದ್ದ  ಸುಭಮೋಯ್ ಕರ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.  ನಾಲ್ವರೊಂದಿಗೆ ಜಗಳ ಮಾಡಿಕೊಂಡು ವಿಷ ಕುಡಿದಿದ್ದಾನೆ.

ಸ್ಥಲೀಯ ಮೆಡಿಕಲ್ ಸ್ಟೋರ್ ನಲ್ಲಿ ಸೇಲ್ಸ್ ಮೆನ್ ಆಗಿ ಕೆಲಸ ಮಾಡಿಕೊಂಡಿದ್ದ. ಈತನ ಜೂಟಾಟ ಗೊತ್ತಾದ ನಾಲ್ವರು ಯುವತಿಯರು  ಈತನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು  ನಿರ್ಧಾರ ಮಾಡಿದ್ದಾರೆ.

ಕಾಳಿ ಪೂಜೆ ಮುಗಿಸಿದ ಎರಡು ದಿನದ ನಂತರ ಸುಭಮೊಯ್ ಕೆಲಸಕ್ಕೆ ಹೊರಡಲು ಸಿದ್ಧನಾಗಿದ್ದಾನೆ.  ಈ ವೇಳೆ ಅಲ್ಲಿಗೆ ಬಂದ ನಾಲ್ವರು ಯುವತಿರು ಜಗಳ ತೆಗೆದಿದ್ದಾರೆ. ಇದಾದ ನಂತರ ಕೋಣೆ ಒಳಕ್ಕೆ ಹೋದ ಯುವಕ ವಿಷ ಕುಡಿದಿದ್ದಾನೆ.

ಪೊಲೀಸ್ ವಿಚಾರಣೆಗೆ ಅಂಜಿ ಕೋಲಾರದ ಕುಟುಂಬ ಸುಸೈಡ್ ಯತ್ನ

ಜಗಳದ ನಂತರ ಸುಭಮೊಯ್ ತನ್ನ ಕೋಣೆಯೊಳಗೆ ಹೋಗಿ ವಿಷ ಸೇವಿಸಿದ್ದಾನೆ.  ನೆರೆಹೊರೆಯವರು ಮತಾಭಂಗ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಚಿಕಿತ್ಸೆ ಸಾಧ್ಯವಿಲ್ಲ ಎಂದು ಅವರನ್ನು ಕೂಚ್ ಬೆಹಾರ್ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಈಗ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ವರು ಮಹಿಳೆಯರಲ್ಲಿ ಯಾರೂ ದೂರು ದಾಖಲಿಸಿಲ್ಲ. 

ಇನ್ನೊಂದು ಪ್ರಕರಣ;  ಕೋಲ್ಕತ್ತಾದ ಮಾ ಮೇಲ್ಸೇತುವೆ ಮೇಲೆ ಕಾರು  ನಿಲ್ಲಿಸಿ ಅಲ್ಲಿಂದ ಕೆಳಕ್ಕೆ ಹಾರಿದ ಒಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಭಾನುವಾರ  ರಾತ್ರಿ 08:30 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಮೃತನನ್ನು ನಂತರ ಜಂತು ದಾಸ್ ಎಂದು ಗುರುತಿಸಲಾಗಿತ್ತು. 

ಕಲ್ಕತ್ತಾ ನ್ಯಾಷನಲ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ  (CNMCH)  ಸೇರಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ದಾಸ್ ತನ್ನ ಕಾರನ್ನು 16 ಮತ್ತು 17 ಪಿಲ್ಲರ್‌ಗಳ ನಡುವೆ ನಿಲ್ಲಿಸಿ ಕೆಳಕ್ಕೆ ಜಿಗಿದಿದ್ದ.

ಶಿವಮೊಗ್ಗದಲ್ಲಿ ಪಾಗಲ್ ಪ್ರೇಮಿಯೊಬ್ಬ ಡ್ರಗ್ಸ್ ಅಮಲಿನಲ್ಲಿ ಪ್ರಿಯತಮೆಯ ಕತ್ತು ಸೀಳಿದ್ದ. ಆಮೇಲೆ ತಾನು ಆತ್ಮಹತ್ಯೆಗೆ ಯತ್ನ ಮಾಡಿ ಆಸ್ಪತ್ರೆ ಸೇರಿದ್ದ. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. 

 

Follow Us:
Download App:
  • android
  • ios