ಗಣೇಶ ಹಬ್ಬದಲ್ಲಿ ಡ್ಯಾನ್ಸ್ ಮಾಡುತ್ತಾ ಕುಸಿದು ಬಿದ್ದ ಯುವಕ ಹೃದಯಾಘಾತಕ್ಕೆ ಬಲಿ!
ಗಣೇಶ ಹಬ್ಬ ಆಚರಣೆ ಜೋರಾಗಿತ್ತು. ಡಿಜೆ ಮ್ಯೂಸಿಕ್, ಡ್ಯಾನ್ಸ್ ಹೀಗೆ ಸಂಭ್ರಮದ ವಾತಾವರಣ. ಆದರೆ ಡಿಜೆಗೆ ಸದ್ದಿಗೆ ಡ್ಯಾನ್ಸ್ ಮಾಡುತ್ತಿದ್ದ ಯುವಕ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಯುವಕನ ವಿಡಿಯೋಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

ಧರ್ಮಾವರಂ(ಸೆ.24) ದೇಶಾದ್ಯಂತ ಗಣೇಶ ಚತುರ್ಥಿ ಆಚರಿಸಲಿದೆ. ಬಹುತೇಕ ಕಡೆಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗಿದೆ. ಕೆಲವೆಡೆ ಈಗಲೂ ವಿಸರ್ಜನೆ ಮೆರವಣಿಗೆ ನಡೆಯುತ್ತಿದೆ. ಹೀಗೆ ಆಂಧ್ರ ಪ್ರದೇಶದ ಸತ್ಯಸಾಯಿ ಜಿಲ್ಲೆಯ ಧರ್ಮಾವರಂದಲ್ಲಿ ಪೆಂಡಾಲ್ ಹಾಗಿ ಗಣೇಶನ ಕೂರಿಸಲಾಗಿತ್ತು. ಈ ಗಣೇಶ ಚತುರ್ಥಿ ಆಚರಣೆ ವೇಳೆ ಡ್ಯಾನ್ಸ್ ಮಾಡುತ್ತಲೇ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಹೃದಯಾಘಾತದಿಂದ ಕುಸಿದ ಬಿದ್ದ ಯುವಕ ಆಸ್ಪತ್ರೆ ದಾಖಲಿಸಿದರೂ ಬದುಕಿ ಉಳಿಯಲಿಲ್ಲ.
26 ವರ್ಷದ ಪ್ರಸಾದ್ ಮೃತ ದುರ್ದೈವಿ. ಧರ್ಮಾವರಂನಲ್ಲಿ ಪ್ರತಿ ವರ್ಷ ಅದ್ಧೂರಿ ಗಣೇಶ ಹಬ್ಬ ಆಚರಿಸಲಾಗುತ್ತದೆ. ಗ್ರಾಮದ ಕೆಲವೇ ಕೆಲವು ಹಿಂದೂ ಕುಟುಂಬಗಳು ಸೇರಿ ಈ ಗಣೇಶ ಹಬ್ಬ ಆಚರಿಸುತ್ತದೆ. ಗಣೇಶನ ಕೂರಿಸಿ ಪೂಜೆ ನೆರವೇರಿಸಲಾಗುತ್ತದೆ. ಮೂರು ದಿನ ವಿಶೇಷ ಪೂಜೆಗಳು ನಡೆಯುತ್ತದೆ. ಈ ವೇಳೆ ಮಂಟಪ ಹಾಕಲಾಗುತ್ತದೆ. ಡಿಜೆ ಮ್ಯೂಸಿಕ್, ಲೈಟಿಂಗ್ಸ್ ಸೇರಿದಂತೆ ಹಲವು ಅಲಂಕಾರಗಳನ್ನು ಮಾಡಲಾಗುತ್ತದೆ.
ಟ್ರೆಡ್‌ಮಿಲ್‌ನಲ್ಲಿ ಓಡುತ್ತಿದ್ದ ವ್ಯಕ್ತಿ ಹಾರ್ಟ್‌ಅಟ್ಯಾಕ್‌ನಿಂದ ಸಾವು, ಹೃದಯ ವಿದ್ರಾವಕ ಕ್ಷಣ ಸಿಸಿಟಿವಿಯಲ್ಲಿ ಸೆರೆ
ಧರ್ಮಾವರಂ ಗ್ರಾಮದ ಜನರು ಸಕಲ ರೀತಿಯಲ್ಲೂ ಸಜ್ಜಾಗಿದ್ದರು. ಮೂರನೇ ದಿನ ಅಂದರೆ ಬುಧವಾರ(ಸೆ.20) ರಂದು ಗಣೇಶನ ವಿಸರ್ಜನೆ. ಮೆರವಣಿಗೆ ಮೂಲಕ ಗಣೇಶನ ವಿಸರ್ಜನೆ ಮಾಡಲಾಗುತ್ತದೆ. ಗಣೇಶನ ವಿಸರ್ಜನೆಗೂ ಮುನ್ನ ಪೆಂಡಾಲ್‌ನಲ್ಲಿ ಡಿಜೆ ಮ್ಯೂಸಿಕ್ ಹಾಕಲಾಗಿತ್ತು. ಈ ವೇಳೆ ಯುವಕರ ಗುಂಪು ಡ್ಯಾನ್ಸ್ ಆರಂಭಿಸಿತ್ತು.
ಹಲವು ಯುವಕರು ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ 26ರ ಹರೆಯದ ಪ್ರಸಾದ್ ಕೂಡ ಕೆಲ ಹೊತ್ತು ಡ್ಯಾನ್ಸ್ ಮಾಡಿದ್ದಾನೆ. ಸತತವಾಗಿ ಡ್ಯಾನ್ಸ್ ಮಾಡಿದರೂ ಪ್ರಸಾದ್ ಬಳಲಿರಲಿಲ್ಲ. ಅದೇ ಉತ್ಸಾಹ, ಅದೇ ಜೋಶ್‌ನಲ್ಲಿ ಪ್ರಸಾದ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ. ಆದರೆ ನೋಡ ನೋಡುತ್ತಿದ್ದಂತೆ ಪ್ರಸಾದ್ ಕುಸಿದು ಬಿದ್ದಿದ್ದಾನೆ. ಗ್ರಾಮಸ್ಥರು, ಕುಟುಂಬಸ್ಥರು ಕುಳಿತು ಯುವಕರ ಡ್ಯಾನ್ಸ್ ನೋಡುತ್ತಿದ್ದರು. ಇವರ ಕಾಲಿನ ಬಳಿಯೇ ಪ್ರಸಾದ್ ಕುಸಿದು ಬಿದ್ದಿದ್ದಾನೆ.
ವಿಜಯಪುರ: ನಾಟಕ ಪ್ರದರ್ಶನದ ವೇಳೆ ಹೃದಯಾಘಾತದಿಂದ ಕಲಾವಿದ ಸಾವು
ತಕ್ಷಣವೇ ಪ್ರಸಾದ್‌ನ ಎತ್ತಿ ಮಲಗಿಸಿದ್ದಾರೆ. ಬಳಿಕ ನೀರು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸಾದ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಅನ್ನೋದು ಆರ್ಥವಾಗಿದೆ. ತಕ್ಷಣವೇ ಪ್ರಸಾದ್‌ನ ಆಸ್ಪತ್ರೆ ದಾಖಲಿಸಲಾಗಿದೆ. ಆದರೆ ಪ್ರಯೋಜನವಾಗಲಿಲ್ಲ. ಪ್ರಸಾದ್ ಕುಸಿದು ಬಿದ್ದ ಬೆನ್ನಲ್ಲೇ ಮತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಪ್ರತಿ ವರ್ಷ ಸಂಭ್ರಮದಿಂದ ನಡೆಯುತ್ತಿದ್ದ ಧರ್ಮಾವರಂ ಗಣೇಶ ಚತುರ್ಥಿಯಲ್ಲಿ ಈ ಬಾರಿ ಸೂತಕ ಛಾಯೆ ಆವರಿಸಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಅತೀಯಾದ ಡಿಜೆ ಶಬ್ದ, ಬಳಲಿದರೂ ಡ್ಯಾನ್ಸ್ ಮಾಡಿದ್ದಾರೆ. ಹೀಗಾಗಿ ಹೃದಯಾಘಾತ ಸಂಭವಿಸಿದೆ ಎಂದಿದ್ದಾರೆ. ಇತ್ತ ಮದ್ಯ ಸೇವನೆ ಹಾಗೂ ಡ್ಯಾನ್ಸ್ ಸಾವಿಗೆ ಕಾರಣ ಎಂದಿದ್ದಾರೆ. ಇದೇ ವೇಳೆ ಕೆಲವರು ಕೋವಿಡ್ ಲಸಿಕೆಯಿಂದಲೇ ಈ ಸಾವು ಸಂಭವಿಸಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.