ನವದೆಹಲಿ(ಸೆ. 13) ಕಚೇರಿ ಮತ್ತು ಮನೆಯಲ್ಲಿ ನಡೆಯುವ ವಾಗ್ವಾದಗಳು ಒಮ್ಮೊಮ್ಮೆ ವಿಕೋಪದ ಹಂತಕ್ಕೆ ತಿರುಗಿ ಬಿಡುತ್ತವೆ. ಈ ಘಟನೆ ಸಹ ಅಂಥದ್ದೆ.

ಇನ್ಶೂರೆನ್ಸ್ ಕಂಪನಿಯ ಉದ್ಯೋಗಿಗಳ ನಡುವೆ ಉಂಟಾದ ವಾಗ್ವಾದ ವಿಕೋಪಕ್ಕೆ ತಿರುಗಿದೆ. ಪರಿಣಾಮ ಒಬ್ಬ ಸಿಬ್ಬಂದಿ ಇನ್ನೊಬ್ಬರ ಕೈ ಬೆರಳನ್ನೇ ಕಚ್ಚಿ ತುಂಡರಿಸಿದ್ದಾನೆ.

ದೆಹಲಿಯ ಮಯೂರ್ ವಿಹಾರ್ ದಲ್ಲಿ ಘಟನೆ ನಡೆದಿದೆ. ಹೇಮಂತ್ ಸಿದ್ಧಾರ್ಥ್ ಎಂಬಾತ ಮೋಹಿತ್ ಎಂಬುವರ ಬೆರಳು ಕಚ್ಚಿ ತುಂಡರಿಸಿದ್ದಾನೆ.

ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಲೆ ಮಾಡಿದ!

ಅಕ್ಷರಧಾಮದ ಬಳಿ ಭೇಟಿಯಾದ ಇಬ್ಬರು ಕೆಲಸದ ನಿಮಿತ್ತ ಗುರುವಾರ ಕರೋಲ್ ಭಾಘ್ ಕಡೆ ಪ್ರಯಾಣ ಬೆಳೆಸಿದ್ದರು.  ಅಲ್ಲಿಂದ ಮೋಹಿತ್ ಮನೆಗೆ ಬರುವನಿದ್ದ, ಆದರೆ ಈ ವೇಳೆ ಹೇಮಂತ್ ಕೆಲಸದಲ್ಲಿ ಸಹಾಯ ಮಾಡಲು ಕೇಳಿಕೊಂಡಿದ್ದಾನೆ.  ಕಾರಿನಲ್ಲಿಯೇ ಇಬ್ಬರ ನಡುವೆ ಜಗಳ ಶುರುವಾಗಿದೆ. ಮೋಹಿತ್  ತನ್ನ ಮುಖ ಮುಚ್ಚಿಕೊಳ್ಳಲು ಮುಂದಾದಾಗ ಆತ ಕೈಬೆರಳನ್ನೇ ಕಚ್ಚಿ ತುಂಡರಿಸಿದ್ದಾನೆ. 

ಹೇಗೋ ಕಾರಿನಿಂದ ತಪ್ಪಿಸಿಕೊಂಡ ಮೋಹಿತ್ ಅಲ್ಲಿಂದ ಪೊಲೀಸ್ ಸ್ಟೇಶನ್ ಗೆ ಬಂದು ದೂರು ನೀಡಿದ್ದಾನೆ. ಗಾಯಗೊಂಡ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.