ಮ್ಯಾಟ್ರಿಮೋನಿಯಲ್‌ನಲ್ಲಿ ಪರಿಚಯವಾಗಿದ್ದ ವಂಚಕ| ಆರೋಪಿ ಖಾತೆಗೆ ಹಂತ ಹಂತವಾಗಿ 10.14 ಲಕ್ಷ ಜಮೆ ಮಾಡಿದ ಯುವತಿ| ಹಣ ಸಂದಾಯವಾದ ಬಳಿಕ ಸಂಪರ್ಕ ಕಡಿತಗೊಳಿಸಿದ ಆರೋಪಿ| ಈ ಸಂಬಂಧ ಪೊಲೀಸರಿಗೆ ದೂರು ಕೊಟ್ಟ ಸಂತ್ರಸ್ತೆ|
ಬೆಂಗಳೂರು(ಏ.29): ಅಮೆರಿಕದ ಡಾಲರ್ ಆಸೆ ತೋರಿಸಿ ಹೈಕೋರ್ಟ್‌ನ ಮಹಿಳಾ ಉದ್ಯೋಗಿಯೊಬ್ಬರಿಗೆ 10.14 ಲಕ್ಷ ವಸೂಲಿ ಮಾಡಿ ಸೈಬರ್ ಕಳ್ಳರು ವಂಚಿಸಿದ್ದಾರೆ.
ತ್ಯಾಗರಾಜನಗರ ಸಮೀಪ ನೆಲೆಸಿರುವ 32 ವರ್ಷದ ಯುವತಿ ಹಣ ಕಳೆದುಕೊಂಡಿದ್ದು, ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಅಹಮ್ಮದ್ ಅಲಿ ಎಂಬಾತನ ವಿರುದ್ಧ ದಕ್ಷಿಣ ವಿಭಾಗದ ಸಿಇಎನ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಹಿತಿ ಆಧರಿಸಿ ಆರೋಪಿ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿಜಯಪುರ: ನಂಬಿಸಿ ವಂಚನೆ, ಗೆಳತಿಯ ನಗ್ನ ಚಿತ್ರ ಹರಿಬಿಟ್ಟ ಯುವಕ
ಕೆಲ ದಿನಗಳ ಹಿಂದೆ ಮ್ಯಾಟ್ರಿಮೋನಿಯಲ್ ತಾಣದಲ್ಲಿ ಸಂತ್ರಸ್ತೆಗೆ ಅಹಮದ್ ಅಲಿ ಪರಿಚಯವಾಗಿದೆ. ಈ ಗೆಳೆತನದಲ್ಲಿ ನಿನಗೆ ಅಮೆರಿಕದ ಡಾಲರ್ಸ್ ಕಳುಹಿಸುತ್ತೇನೆ. ಬ್ಯಾಂಕ್ ಖಾತೆಗೆ ಡಾಲರ್ ವರ್ಗಾವಣೆ ಪ್ರಕ್ರಿಯೆಗೆ ಕೆಲವು ಶುಲ್ಕಗಳನ್ನು ಭರಿಸಬೇಕಿದೆ ಎಂದಿದ್ದಾನೆ. ಈ ಮಾತು ನಂಬಿದ ಆಕೆ, ಆರೋಪಿ ಖಾತೆಗೆ ಹಂತ ಹಂತವಾಗಿ 10.14 ಲಕ್ಷ ಜಮೆ ಮಾಡಿದ್ದಾರೆ. ಹೀಗೆ ಹಣ ಸಂದಾಯವಾದ ಬಳಿಕ ಆತ ಸಂಪರ್ಕ ಕಡಿತಗೊಳಿಸಿದ್ದಾನೆ. ಕೊನೆಗೆ ತಾನು ಮೋಸ ಹೋಗಿರುವುದು ಅರಿವಾಗಿದ್ದು, ಸಂತ್ರಸ್ತೆ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
