ಕರ್ವಾಚೌತ್ ದಿನ ಪತ್ನಿ ಜೊತೆ ಇರುವ ಬದಲು ಗರ್ಲ್‌ಫ್ರೆಂಡ್‌ ಕರೆದುಕೊಂಡು ಶಾಪಿಂಗ್ ಮಾಡಲು ಬಂದಿದ್ದಾನೆ. ಪರಿಣಾಮ ಪತ್ನಿ ಕೈಯಿಂದ ಸರಿಯಾಗಿ ಪೂಜೆ ಆಗಿದ್ದು, ಆ ಸ್ಟೋರಿ ಇಲ್ಲಿದೆ ನೋಡಿ.

ಗಾಜಿಯಾಬಾದ್: ಕರ್ವಾಚೌತ್ ಉತ್ತರ ಭಾರತದಾದ್ಯಂತ ಹೆಂಗೆಳೆಯರು ಆಚರಿಸುವ ಬಹು ದೊಡ್ಡ ಹಬ್ಬ. ಮುತ್ತೈದೆಯರಿಗೆ ಶುಭ ತರುವುದು ಎಂದು ನಂಬಲಾದ ಕಾರ್ವ ಚೌತ್‌ ಹಬ್ಬದ ದಿನ ಸೂರ್ಯೋದಯದಿಂದ ಚಂದ್ರೋದಯದವರೆಗೂ ಪತಿಗಾಗಿ ಹೆಣ್ಣು ಮಕ್ಕಳು ಉಪವಾಸದಿಂದಿದ್ದು, ಗಂಡನ ಅಭ್ಯುದಯಕ್ಕೆ ಹರಕೆ ಹೊರುತ್ತಾರೆ. ನೀರನ್ನು ಕುಡಿಯದೇ ಉಪವಾಸವಿದ್ದು, ಮಹಿಳೆಯರು ಈ ಹಬ್ಬ ಆಚರಿಸುತ್ತಾರೆ. ಕಷ್ಟವಾದರೂ ತನ್ನೊಂದಿಗೆ ಸಪ್ತಪದಿ ತುಳಿದ ಪತಿ ಮೇಲಿನ ಪ್ರೀತಿ ಹಾಗೂ ಗೌರವದಿಂದ ಈ ಎಲ್ಲ ಕಷ್ಟವನ್ನು ತೆಗೆದುಕೊಳ್ಳುತ್ತಾರೆ. ಅಂತಹ ವಿಶೇಷ ಹಬ್ಬದ ದಿನ ಇಲ್ಲೋರ್ವ ಪತಿ ,ಪತ್ನಿ ಜೊತೆ ಇರುವ ಬದಲು ಗರ್ಲ್‌ಫ್ರೆಂಡ್‌ ಕರೆದುಕೊಂಡು ಶಾಪಿಂಗ್ ಮಾಡಲು ಬಂದಿದ್ದಾನೆ. ಪರಿಣಾಮ ಪತ್ನಿ ಕೈಯಿಂದ ಸರಿಯಾಗಿ ಪೂಜೆ ಆಗಿದ್ದು, ಆ ಸ್ಟೋರಿ ಇಲ್ಲಿದೆ ನೋಡಿ.

ಉತ್ತರಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ (Gaziabaad)ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಕರ್ವಾಚೌತ್‌ ಹಬ್ಬದ ದಿನವೇ ಹೆಂಡ್ತಿ ಕೈಯಿಂದ ಸಾರ್ವಜನಿಕ ಸ್ಥಳದಲ್ಲಿ ಸರಿಯಾಗಿ ಏಟು ತಿಂದಿದ್ದಾನೆ. ಈತ ಹೆಂಡತಿಯರು ಗಂಡನ ಆಯುಷ್ಯ ಆರೋಗ್ಯಕ್ಕಾಗಿಯೇ ಆಚರಿಸುವ ಕರ್ವಾಚೌತ್ (Karwa Chauth) ಹಬ್ಬದಂದು ಹೆಂಡ್ತಿ ಜೊತೆ ಉಪಚಾರ ಮಾಡಿಸಿಕೊಂಡು ಇರೋ ಬದಲು ಬೇಲಿ ಹಾರಲು ಹೋಗಿದ್ದಾನೆ. ಗರ್ಲ್ ಫ್ರೆಂಡ್ ಕರೆದುಕೊಂಡು ಊರು ಸುತ್ತಲು ಬಂದಿದ್ದು, ಪೇಟೆಯಲ್ಲಿ ಶಾಪಿಂಗ್ ಅಂತ ಸುತ್ತಾಡ್ತಿರಬೇಕಾದ್ರೆ ಹೆಂಡ್ತಿ ಕಡೆಯವರಿಗೆ ಈ ವಿಚಾರ ಗೊತ್ತಾಗಿದೆ. ಕೂಡಲೇ ಅವರು ಕಾಲಿಗಾಕೋ ಚಪ್ಪಲಿನ ಕೈಯಲ್ಲಿ ಹಿಡ್ಕೊಂಡು ಬಂದಿದ್ದಾರೆ.

Scroll to load tweet…

ಬಂದವರೆ ನಡು ಬೀದಿಯಲ್ಲಿ ಇಬ್ಬರನ್ನು ಹಿಡಿದುಕೊಂಡು ಸರಿಯಾಗಿ ಬಾರಿಸಿದ್ದಾರೆ. ಹೆಂಡ್ತಿ (Wife), ಆಕೆಯ ಅಕ್ಕ ತಂಗಿ ಗೆಳತಿಯರೆಲ್ಲಾ ಸೇರಿಕೊಂಡು ಗಂಡ ಹಾಗೂ ಆತನ ಗರ್ಲ್‌ಫ್ರೆಂಡ್‌ಗೆ ನಡುಬೀದಿಯಲ್ಲಿ ಚಳಿ ಬಿಡಿಸಿದ್ದಾರೆ. ಇವರ ಗಲಾಟೆ ನೋಡಿ ಅಲ್ಲಿ ಜನ ಗುಂಪು ಸೇರಿ ನೋಡಲು ಶುರು ಮಾಡಿದ್ದು, ಕೆಲವರು ಈ ಘಟನೆಯನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇದೇ ವೇಳೆ ಅಂಗಡಿ ಮಾಲೀಕನೋರ್ವ ಹೊರಗೆ ಹೊರಗೆ ಅಂತ ಕಿರುಚುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತಿದೆ. ಅಂದರೆ ಶಾಪ್ ಒಳಗೆ ಬೇಡ ಹೊರಗೆ ಕಿತ್ತಾಡಿ ಅಂತ ಆತ ಹೇಳ್ತಿದ್ದಾನೆ. 

Shivamogga: ಗಂಡ-ಹೆಂಡತಿ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯ!

ವರದಿಗಳ ಪ್ರಕಾರ, ಹೀಗೆ ಹೆಂಡ್ತಿ ಇದ್ರು ಗರ್ಲ್‌ಫ್ರೆಂಡ್ (GirlFriend) ಮೇಂಟೇನ್ ಮಾಡ್ತಿದ್ದ ವ್ಯಕ್ತಿಯನ್ನು ರಾಹುಲ್ (Rahul)ಅಂತ ಗುರುತಿಸಲಾಗಿದೆ. ಈತ 2017ರಲ್ಲಿ ಪ್ರೀತಿ ಎಂಬಾಕೆಯನ್ನು ವಿವಾಹವಾಗಿದ್ದ. ಆದರೆ ಇಬ್ಬರ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಪ್ರೀತಿ (Preethi) ಕಳೆದ ಮೂರು ವರ್ಷಗಳಿಂದ ತನ್ನ ತಾಯಿಯ ಮನೆಯಲ್ಲೇ ವಾಸ ಮಾಡುತ್ತಿದ್ದಳು. ಇಬ್ಬರ ನಡುವಿನ ಈ ಗಲಾಟೆ ಕೋರ್ಟ್ (Court) ಮೆಟ್ಟಿಲೇರಿದ್ದು ವಿಚಾರಣೆ ನಡೆಯುತ್ತಿತ್ತು. ಈ ಮಧ್ಯೆ ಈತ ಬೇರೆಯವಳ ಜೊತೆ ಸುತ್ತಲೂ ಶುರು ಮಾಡಿದ್ದು, ಇದು ಹೆಂಡ್ತಿ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ತನ್ನ ಗಂಡ ಬೇರೆಯವಳೊಂದಿಗೆ ಸಂಬಂಧ ಹೊಂದಿದ್ದು, ಇದೇ ಕಾರಣಕ್ಕೆ ಆತ ನನ್ನನ್ನು ಆತನ ಮನೆಗೆ ಕರೆದುಕೊಂಡು ಹೋಗದೆ ಒಬ್ಬಂಟಿಯಾಗಿ ಬದುಕುತ್ತಿದ್ದಾನೆ ಎಂದು ದೂರಿದ್ದಾರೆ.

ಪ್ರಿಯಕರನ ಹಿಂದೆ ಸುತ್ತುತ್ತಿದ್ದ ಹೆಂಡತಿಯನ್ನ ರೆಡ್‌ಹ್ಯಾಂಡಾಗಿ ಹಿಡಿದ ಬಹುದ್ದೂರ್ ಗಂಡ

ಗುರುವಾರ ನಿನ್ನೆ ಕರ್ವಾಚೌತ್ ದಿನದಂದೇ ರಾಹುಲ್ ತನ್ನ ಗೆಳತಿಯೊಂದಿಗೆ ತುರಬ್‌ನಗರದ (Turabnagar) ಮಾರುಕಟ್ಟೆಗೆ ಶಾಪಿಂಗ್‌ಗೆ ಬಂದಿದ್ದು, ಅದೇ ವೇಳೆ ಪ್ರೀತಿಯೂ ತನ್ನ ತಾಯಿಯೊಂದಿಗೆ ಆ ಪ್ರದೇಶಕ್ಕೆ ಶಾಪಿಂಗ್ ಬಂದಿದ್ದಾಗ ಈ ಅವಘಡ ಸಂಭವಿಸಿದೆ. ಇತ್ತ ಈ ವಿಡಿಯೋವನ್ನು ಯೋಗೇಶ್ ತಿವಾರಿ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ(Social Media) ಪೋಸ್ಟ್ ಮಾಡಿದ್ದು, ಪುರುಷ ವರ್ಗದವರು ದಯವಿಟ್ಟು ಗಮನಿಸಿ, ಇಂದು ನಿಮ್ಮ ಮನೆಯವರ ಮೇಲೆಯೇ ನಿಮ್ಮ ಎಲ್ಲ ಆಸಕ್ತಿಯನ್ನು ಕೇಂದ್ರೀಕರಿಸಿ, ತಪ್ಪಿದಲ್ಲಿ ಹೀಗಾಗುವುದು ಎಂದು ಹಾಸ್ಯಮಯವಾಗಿ ಬರೆದಿದ್ದಾರೆ.