Asianet Suvarna News Asianet Suvarna News

ದಂಡ ತಪ್ಪಿಸಲು ಒಂದೇ ಬೈಕ್‌ಗೆ ಹಿಂದೆ, ಮುಂದೆ ಬೇರೆ ನಂಬರ್ ಹಾಕಿ ಸಿಕ್ಕಿಬಿದ್ದ ಚಾಲಾಕಿ!

ಹೆಲ್ಮೆಟ್‌ ಧರಿಸದೆ ಬರುತ್ತಿದ್ದ ಸವಾರನನ್ನು ಮುಖ್ಯ ಪೇದೆ ತಡೆದರೂ ಪರಾರಿಯಾಗಿದ್ದು, ಈ ವೇಳೆ ಬೆನ್ನಟ್ಟಿ ಹಿಡಿದಾಗ ದಂಡ ತಪ್ಪಿಸಲು ಒಂದೇ ಬೈಕ್‌ಗೆ ಹಿಂದೆ, ಮುಂದೆ ಬೇರೆ ನಂ. ಹಾಕಿದ್ದವನ ನಿಜ ಬಣ್ಣ ಬಯಲಾಗಿದೆ.

man caught put different number  plate to same bike avoid fines in bengaluru gow
Author
Bengaluru, First Published Jul 31, 2022, 7:23 AM IST

ಬೆಂಗಳೂರು (ಜು.31): ಸಂಚಾರ ನಿಯಮ ಉಲ್ಲಂಘನೆಯ ದಂಡ ವಂಚಿಸುವ ಸಲುವಾಗಿ ದ್ವಿಚಕ್ರ ವಾಹನಕ್ಕೆ ಎರಡು ನೋಂದಣಿ ಫಲಕ ಅಳವಡಿಸಿ ಓಡಾಡುತ್ತಿದ್ದ ಚಾಲಾಕಿ ಸವಾರನನ್ನು ನಂದಿನಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಂದಿನಿ ಲೇಔಟ್‌ನ ವಿಜಯಾನಂದ ನಗರ ನಿವಾಸಿ ಮರೀಗೌಡ(31) ಬಂಧಿತ. ರಾಜಾಜಿ ನಗರ ಸಂಚಾರ ಪೊಲೀಸ್‌ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ ಸೈಯದ್‌ ಅಹಮದ್‌ ಅವರು ಶುಕ್ರವಾರ ಬೆಳಗ್ಗೆ 9.25ರ ಸುಮಾರಿಗೆ ನಂದಿನಿ ಲೇಔಟ್‌ನ ಕೂಲಿನಗರ ಮೇಲ್ಸೇತುವೆ ಬಳಿ ಕರ್ತವ್ಯ ನಿರ್ವಹಿಸುವಾಗ ಹೆಲ್ಮೆಟ್‌ ಇಲ್ಲದೆ ಬರುತ್ತಿದ್ದ ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ ಅನ್ನು ತಡೆಯಲು ಮುಂದಾಗಿದ್ದಾರೆ. ಈ ವೇಳೆ ಚಾಲಕ ಮರೀಗೌಡ ಬೈಕ್‌ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ದ್ವಿಚಕ್ರ ವಾಹನದ ಮುಂದೆ ಹಾಗೂ ಹಿಂದೆ ಬೇರೆ ನೋಂದಣಿ ಫಲಕ ಅಳವಡಿಸಿರುವುದು ಗೊತ್ತಾಗಿದೆ. ಈ ವೇಳೆ ಬೆನ್ನಟ್ಟಿಹಿಡಿದು ವಿಚಾರಣೆ ಮಾಡಿದಾಗ ದಂಡ ವಂಚನೆ ಬೆಳಕಿಗೆ ಬಂದಿದೆ. ಈ ಸಂಬಂಧ ನಂದಿನಿ ಲೇಔಟ್‌ ಪೊಲೀಸ್‌ ಠಾಣೆಗೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿ ಮರೀಗೌಡ ದ್ವಿಚಕ್ರ ವಾಹನದ ಮುಂದೆ ಅಸಲಿ ನೋಂದಣಿ ಫಲಕ(ಕೆಎ 05-ಜೆ.ಎಸ್‌- 7536) ಅಳವಡಿಸಿದ್ದು, ಹಿಂಬದಿಗೆ ನಕಲಿ ನೋಂದಣಿ ಫಲಕ(ಕೆಎ-05-ಜೆ.ಎಸ್‌- 7538) ಅಳವಡಿಸಿದ್ದ. ಈ ವೇಳೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಪರಿಶೀಲಿಸಿದಾಗ ಮಾಡಿದಾಗ ಅಸಲಿ ನೋಂದಣಿ ಫಲಕಕ್ಕೆ ಬರೋಬ್ಬರಿ .19,500 ಹಾಗೂ ನಕಲಿ ನೋಂದಣಿ ಫಲಕಕ್ಕೆ .9,500 ದಂಡ ಬಾಕಿಯಿರುವುದು ಪತ್ತೆಯಾಗಿದೆ. ದಂಡ ವಂಚಿಸುವ ಉದ್ದೇಶದಿಂದ ಆರೋಪಿ ಎರಡು ನೋಂದಣಿ ಫಲಕ ಅಳವಡಿಸಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.

ಬನ್ನೇರುಘಟ್ಟ : 2ನೇ ಮಹಡಿಯಿಂದ ಬಿದ್ದು 12 ವರ್ಷದ ವಿದ್ಯಾರ್ಥಿ ದಾರುಣ ಸಾವು

ಅಪಘಾತ; ಬೈಕ್‌ ಸವಾರ ಸಾವು
ಹುಬ್ಬಳ್ಳಿ: ನಗರದ ಹೊರವಲಯ ಕಾರವಾರ ರಸ್ತೆ ಟೋಲ್‌ ಪ್ಲಾಜಾ ಬಳಿ ಲಾರಿ ಹಾಗೂ ಬೈಕ್‌ ನಡುವಿನ ಅಪಘಾತದಲ್ಲಿ ಪರಸಾಪುರ ಗುಡಿಹಾಳ ಗ್ರಾಮದ ನಿವಾಸಿ ಮಹ್ಮದ್‌ ಜಾಫರ್‌ (36) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶನಿವಾರ ಮಧ್ಯಾಹ್ನ ಗಬ್ಬೂರು ಕ್ರಾಸ್‌ ಬಳಿ ನಾಗಾಲ್ಯಾಂಡ್‌ ಪಾಸಿಂಗ್‌ನ ಲಾರಿ ಚಾಲಕ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ತಕ್ಷಣ ಲಾರಿಯಲ್ಲಿದ್ದವರು ಪರಾರಿಯಾಗಿದ್ದಾರೆ. ಈ ಬಗ್ಗೆ ದಕ್ಷಿಣ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Hubballi: ಮಗ ಜೈಲುಪಾಲಾದ್ದರಿಂದ ನೊಂದು ತಾಯಿ ಆತ್ಮಹತ್ಯೆ

ವರದಾ ನದಿಪಾಲಾದ ವಿದ್ಯಾರ್ಥಿ: ಶಿರಸಿ ವರದಾ ನದಿಯಲ್ಲಿ ಕಾಲು ಜಾರಿ ಬಿದ್ದು ಕಾಲೇಜು ವಿದ್ಯಾರ್ಥಿ ಮೃತಪಟ್ಟಘಟನೆ ಶನಿವಾರ ಬನವಾಸಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಸೀತಾರಾಮ ಮಧುಕೇಶ್ವರ ಮಡಿವಾಳ (18) ಎಂಬ ಬನವಾಸಿ ಕಾಲೇಜಿನ ದ್ವೀತಿಯ ಪಿಯುಸಿ ವಿದ್ಯಾರ್ಥಿ ಮೃತ ದುರ್ದೈವಿ. ಈತನು ಪ್ರತಿದಿನದಂತೆ ಮನೆಯವರಿಗೆ ತಿಳಿಸಿ ಶನಿವಾರ ಮುಂಜಾನೆ ಬೈಕ್‌ನಲ್ಲಿ ಕಾಲೇಜಿಗೆ ತೆರಳಿದ್ದಾನೆ. ನಂತರದಲ್ಲಿ ಭಾಶಿ-ಮೊಗವಳ್ಳಿ ಹತ್ತಿರ ವರದಾ ನದಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದ್ದು ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಕಾಲು ಜಾರಿ ನೀರಿಗೆ ಬಿದ್ದಿದ್ದಾನೋ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ. ಸ್ಥಳೀಯರ ಸಹಾಯದಿಂದ ಮೃತದೇಹ ಮೇಲಕ್ಕೆತ್ತಿ ಪರಿಶೀಲನೆ ನಡೆಸಲಾಗುತ್ತಿದೆ.

Follow Us:
Download App:
  • android
  • ios