ಚಂದ್ರಾಪುರ್(ಜೂ. 23)  ಹೆಂಡತಿಯ ಅಗಲಿಕೆ ನೋವು ತಾಳಲಾರದೆ ಗಂಡ ಹೆಂಡತಿಯ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ಮಾಡಿದ್ದಾನೆ. ಆದರೆ ಸಂಬಂಧಿಕರು ಆ ಸಂದರ್ಭದಲ್ಲಿ ಅವನನ್ನು ಬಚಾವ್ ಮಾಡಿದ್ದಾರೆ. ನಂತರ ಬಾವಿಗೆ ಹಾರಿ ಪತಿ ಸುಸೈಡ್ ಮಾಡಿಕೊಂಡಿದ್ದಾನೆ.

ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಬಂಗಾರಮ್ ಥಾಲೋಡಿ ಗ್ರಾಮದಿಂದ ಈ ಘಟನೆ ವರದಿಯಾಗಿದೆ.  ಈ ವರ್ಷ ಮಾರ್ಚ್  19 ಕ್ಕೆ ಕಿಶೋರ್ ಖಟಿಕ್ ರುಚಿರಾ ಚಿತ್ತಾವರ್ ಎಂಬುವರನ್ನು ಮದುವೆಯಾಗಿದ್ದರು.

ತನ್ನ ಅಂತ್ಯಕ್ರಿಯೆ ತಾನೇ ಮಾಡಿಕೊಂಡು ಚಿತೆಗೆ ಹಾರಿದ ಯಲ್ಲಾಪುರ ವೃದ್ಧ

ಮೂರು ತಿಂಗಳ ಗರ್ಭಿಣಿಯಾಗಿದ್ದ ರುಚಿತಾ ತಮ್ಮ ತಾಯಿ ಮನೆಗೆ ನಾಲ್ಕು ದಿನದ ಹಿಂದೆ ತೆರಲಿದ್ದರು. ಆದರೆ ಅಲ್ಲಿಂದ ಇದ್ದಕ್ಕಿದ್ದಂತೆ ರುಚಿತಾ ನಾಪತ್ತೆಯಾಗಿದ್ದು ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದರು. 

ಇದಾದ ಮೇಲೆ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಶವ ಸಂಸ್ಕಾಸರದ ಎಲ್ಲ ಕಾರ್ಯಗಳು ಮುಗಿದ ಮೇಲೆ ಚಿತೆಗೆ ಬೆಂಕಿ ನೀಡಲಾಗಿತ್ತು. ಎಲ್ಲರೂ ಹಿಂದಕ್ಕೆ ತಿರುಗಿ ಮನೆಗೆ ಬರಬೇಕು ಎಂದುಕೊಳ್ಳುತ್ತಿರುವಾಗ ಪತಿ ಕಿಶೋರ್ ಚಿತೆಗೆ ಹಾರಲು ಯತ್ನ ಮಾಡಿದ್ದಾರೆ. ಆದರೆ ಸಂಬಂಧಿಕರು ಈ ವೇಳೆ ಕಿಶೋರ್ ಕಾಪಾಡಿ ವಾಪಸ್ ಕರೆದುತಂದಿದ್ದಾರೆ. ಆದರೆ ಆತ್ಮಹತ್ಯೆ ತೀರ್ಮಾನ ಮಾಡಿದ್ದ ಕಿಶೋರ್ ನಂತರ ಬಾವಿಯೊಂದಕ್ಕೆ ಹಾರಿ ಪ್ರಾಣ ಬಿಟ್ಟಿದ್ದಾರೆ.

ಬಾವಿಗೆ ಬಿದ್ದವನ ಬದುಕಿಸಲು ಕುಟುಂಬಸ್ಥರು ಹಗ್ಗ ಎಸೆದರೂ ಆತ ಹಿಡಿದುಕೊಳ್ಳುವ ಯಾವ ಯತ್ನವನ್ನು ಮಾಡಿಲ್ಲ. ನೋಡು ನೋಡುತ್ತಿದ್ದಂತೆಯೇ ಪ್ರಾಣ ಹಾರಿಹೋಗಿದೆ.