ವೃತ್ತಿಯಲ್ಲಿ ಉದ್ಯಮಿಯಾಗಿದ್ದ ಆಕೆ ಯಾವುದಕ್ಕೂ ಕಮ್ಮಿ ಇರಲಿಲ್ಲ. ತನ್ನ ಕಾಲ್ ಮೇಲೆ ತಾ ನಿಂತು ಬದುಕು ಕಟ್ಟಿಕೊಂಡಿದ್ದಳು. ಸುಮಾರು ವಯಸ್ಸು 55 ದಾಟಿದರು ಮದುವೆಯಾಗದ ಆಕೆ ಜೀವನದಲ್ಲಿ ಖುಷಿಯಾಗೆ ಇದ್ದಳು.

ವರದಿ: ಟಿ.ಮಂಜುನಾಥ್,‌ ಹೆಬ್ಬಗೋಡಿ.

ಬೆಂಗಳೂರು (ಏ.30): ವೃತ್ತಿಯಲ್ಲಿ ಉದ್ಯಮಿಯಾಗಿದ್ದ ಆಕೆ ಯಾವುದಕ್ಕೂ ಕಮ್ಮಿ ಇರಲಿಲ್ಲ. ತನ್ನ ಕಾಲ್ ಮೇಲೆ ತಾ ನಿಂತು ಬದುಕು ಕಟ್ಟಿಕೊಂಡಿದ್ದಳು. ಸುಮಾರು ವಯಸ್ಸು 55 ದಾಟಿದರು ಮದುವೆಯಾಗದ ಆಕೆ ಜೀವನದಲ್ಲಿ ಖುಷಿಯಾಗೆ ಇದ್ದಳು. ಆದರೆ ಅದೊಂದು ದಿನ ಆಕೆ ಇದ್ದಕಿದಂತೆ ನಾಪತ್ತೆಯಾಗಿದ್ದಳು. ಆಕೆ ಹುಡುಕಿ ಹೊರಟ ಪೊಲೀಸರಿಗೆ (Police) ಆಕೆ ಶವವಾಗಿ ಸಿಕ್ಕಿದಳು. ಯಾವುದೇ ದ್ವೇಷ, ಕೋಪ ಇಲ್ಲದೇ ಬದುಕಿದ್ದ ಆಕೆಯ ಸಾವಿನ ರಹಸ್ಯ ಭೇದಿಸಿದ ಪೊಲೀಸರಿಗೆ ಈಗ ಕೊಲೆಯ ಹಿಂದಿನ ಅಸಲಿ ಕಹಾನಿ ಬಯಲಾಗಿದೆ.

ನಾಪತ್ತೆಯಾದ ಮಹಿಳಾ ಉದ್ಯಮಿ 5 ದಿನಗಳ ಬಳಿಕ ಶವವಾಗಿ ಪತ್ತೆ: ಹೆಸರು ಸುನೀತಾ. ವಯಸ್ಸು 55. ಮೂಲತಃ ಮೈಸೂರಿನವರಾದ ಈಕೆ ಬೆಂಗಳೂರಿನ (Bengaluru) ಮಲ್ಲೇಶ್ವರಂನಲ್ಲಿ ವಾಸವಿದ್ದರು. ವೃತ್ತಿಯಲ್ಲಿ ತನ್ನದೇ ಆದ ಇ-ಕಾಮರ್ಸ್ (E-Commerce) ಹೊಂದಿದ್ದ ಈಕೆಯದು ಒಳ್ಳೆ ಜೀವನ. 50 ದಾಟಿದರೂ ಮದುವೆಯಾಗದ ಈಕೆಯ ಬದುಕಿನಲ್ಲಿ ಸಂತೋಷಕ್ಕೆನು ಕೊರತೆ ಇರಲಿಲ್ಲ..ಆದರೆ ಆ ಒಂದು ದಿನ ಬ್ಯುಸಿನೆಸ್ ಮೀಟಿಂಗ್ ಅಂತ ಮನೆ ಬಿಟ್ಟಿದ್ದ ಆಕೆ ಮತ್ತೆ ವಾಪಾಸ್ ಬರಲಿಲ್ಲ. ಸತತ ಐದು ದಿನಗಳ ಕಾಲ ಸುನಿತಾಳ ಬರುವಿಕೆಗೆ ಕಾದ ಸಂಬಂಧಿಕರು ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದರು. ಪೊಷಕರು ಆಕೆಯ ಮಿಸ್ಸಿಂಗ್ ಕೇಸ್ ದಾಖಲಿಸುತಿದ್ದಂತೆ ಬಯಲಾಗಿತ್ತು ಆಕೆಯ ಸಾವಿನ ಸಂಗತಿ.

ಬೆಂಗ್ಳೂರಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: 82 ಕೆಜಿ ಮಾದಕ ವಸ್ತು ಜಪ್ತಿ, ಇಬ್ಬರ ಬಂಧನ

ಮಗನಂತೆ ಬಂದು ಪರಿಚಯವಾದ ಯುವಕ: ಆರ್ಥಿಕವಾಗಿ ಬಲವಾಗಿದ್ದ ಸುನಿತಾ ಅದು ಮಾರ್ಚ್ 31 ರಂದು ಬ್ಯುಸಿನೆಸ್ ಮೀಟಿಂಗ್ ಅಂತ ಮನೆ ತೊರೆದಿದ್ದಳು. ಆದರೆ ಆಕೆ ಎಲ್ಲಿಗೆ ಹೋದಳು ಅನ್ನೊದೆ ಗೊತ್ತಾಗಿರಲಿಲ್ಲ. ಆದರೆ ಯಾವಾಗ ಆಕೆ ಮಿಸ್ಸಿಂಗ್ ಕೇಸ್ ದಾಖಲಾಗುತ್ತೋ ಆಗ ಆಕೆಯ ಮೊಬೈಲ್ ಟವರ್ ತೆಗೆಸಲಾಗತ್ತೆ. ಅದರಂತೆ, ವರ್ತೂರಿಗೆ ಬಂದ ಪೊಲೀಸರಿಗೆ ಆಕೆ ಕೊಲೆ ಆಗಿರೊದು ಪತ್ತೆಯಾಗಿರತ್ತೆ. ಇನ್ನು ಕೊಲೆಯ ಹಿಂದಿನ ರಹಸ್ಯ ಭೇದಿಸಲು ಹೊರಟ ಪೊಲೀಸರಿಗೆ ಅದೊಬ್ಬ ವ್ಯಕ್ತಿ ಹೆಸರು ಕೇಳಿ ಬರುತ್ತೆ ಆತನೇ ಈ ಕಿರಣ್ ಕುಮಾರ್.

ಈ ಕಿರಣ್‌ಗೆ ಮಾಡೊಕೆ ಕೆಲಸ ಏನು ಇರಲಿಲ್ಲ. ಇತ್ತೀಚೆಗೆ ಲವ್ ಮ್ಯಾರೇಜ್ ಆಗಿದ್ದ. ಈತನ ಪತ್ನಿಗೆ ಆತನ ಬಗ್ಗೆಯೇ ಸರಿಯಾದ ಮಾಹಿತಿ ಇಲ್ಲ. ನಗರದ ವರ್ತೂರು ಸಮೀಪದ ಕಾಚಮಾರನಹಳ್ಳಿ ಬಳೀ ಇದೇ ಮನೆಯ ಮೊದಲ ಮಹಡಿಯ ಮನೆಯೊಂದರಲ್ಲಿ ಬಾಡಿಗೆಗೆ ಇದ್ದ. ಇನ್ನು ಮನೆ ಮಾಲೀಕರು ಮನೆ ಬಳಿ ಬರೋಕೆ ಆಗಲ್ಲ ಅಂತ ಕಿರಣ್ ಕೈಗೆ ನಾಲ್ಕನೆ ಮಹಡಿಯ ಅದೊಂದು ಮನೆಯ ಕೀ ಕೊಟ್ಟು ಬಾಡಿಗೆಗೆ ಯಾರಾದರೂ ಕೇಳಿಕೊಂಡು ಬಂದರೆ ತೊರಿಸುವಂತೆ ಹೇಳಿದರು. ಆದರೆ ಅದನ್ನ ಆತ ತನ್ನ ಸ್ವಂತ ಕೆಲಸಕ್ಕೆ ಬಳಸಿಕೊಂಡಿದ್ದ. ಇನ್ನು ಉಂಡಾರಿ ಗುಂಡನಂತಿರೋ ಈತನಿಗೆ ಅದೇಗೊ ಕಳೆದ ಕೆಲ ತಿಂಗಳ ಹಿಂದೆ ಸುನಿತಾ ಪರಿಚಯವಾಗಿದ್ದಾರೆ

ಈ ವೇಳೆ ಆಕೆಯ ಹಣ, ಕೆಲಸದ ಬಗ್ಗೆ ತಿಳಿದ ಈತ ಆಕೆಯಿಂದ ಹಣ ಲೂಟಿ ಮಾಡೊ ಆಸೆ ಕಂಡಿದ್ದ. ಅದರಂತೆ ಅದೊಂದು ದಿನ ಇನ್ವೆಸ್ಟ್‌ಮೆಂಟ್ ಹೆಸರಿನಲ್ಲಿ ಆಕೆಯನ್ನು ತಾನು ವಾಸದ ಕಟ್ಟಡದ ನಾಲ್ಕನೇ ಫ್ಲೋರ್‌ನ ಮನೆಗೆ ಕರೆದೊಯ್ದ ಆತ, ತನ್ನ ಇಬ್ಬರು ಗೆಳೆಯರಾದ ಇಮ್ರಾನ್ ಮತ್ತು ವೆಂಕಟೇಶ್ ಕರೆಸಿಕೊಂಡಿದ್ದ. ನಂತರ ಸುನೀತಾಳನ್ನು ಪ್ಲಾಸ್ಟಿಕ್ ಕವರ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಆಕೆ ತಂದಿದ್ದ 16 ಲಕ್ಷರೂ ಸಮೇತ ಪರಾರಿಯಾಗಿದ್ದ. ನಂತರ ಆಕೆ ತಂದಿದ್ದ ಕಾರ್‌ನಲ್ಲೇ ಸಿಲ್ಕ್ ಬೋರ್ಡ್‌ವರೆಗೂ ತೆರಳಿದ ಆತ ನಂತರ ಅಲ್ಲಿಂದ ಗೋವಾಗೆ ತೆರಳಿದ್ದ. ಗೋವಾದ ಹೊರವಲಯದ ಮನೆಯೊಂದರ ಬಾಡಿಗೆ ಪಡೆದು ಅವಿತಿದ್ದ ಆತನನ್ನು ವರ್ತೂರು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ‌ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ : ಆರೋಪಿ ಅರೆಸ್ಟ್

ಅಸಲಿಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ವರ್ತೂರು ಪೊಲೀಸರಿಗೆ ಮೊದಲು ಇಮ್ರಾನ್ ಮತ್ತು ವೆಂಕಟೇಶ್ ಲಾಕ್ ಆಗಿದ್ರು. ಆದ್ರೆ ಯಾವುದೇ ಕ್ಲೂ ಸಿಗದ ರೀತಿ ನಾಪತ್ತೆಯಾಗಿದ್ದ ಕಿರಣ್ ಪತ್ತೆಗಾಗಿ ಶೋಧ ನಡೆಸಿದ್ದ ವರ್ತೂರು ಪೊಲೀಸರಿಗೆ ಕೊನೆಗೂ ಕಿರಣ್ ಪತ್ತೆಯಾಗಿದ್ದಾನೆ. ಹಣದಾಸೆಗೆ ಈ ಕೃತ್ಯ ನಡೆಸಿದ್ದಾಗಿ ಸಹ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆದರೆ ಅದೇನೆ ಇದ್ದರೂ ಯಾರದೇ ಹಂಗಿಲ್ಲದೇ ತನ್ನ ಜೀವನ ರೂಪಿಸಿಕೊಂಡಿದ್ದ ಮಹಿಳಾ ಉದ್ಯಮಿಯ ದುರಂತದ ಸಾವು ಕಂಡಿದ್ದು ಮಾತ್ರ ಬೇಸರದ ಸಂಗತಿ.