ಹಣ್ಣು ಮಾರಾಟಗಾರನೊಬ್ಬನ ಅಸಹ್ಯಕರ ಕೆಲಸ ಬೆಳಕಿಗೆ ಬಂದಿದೆ. ಮೂತ್ರ ವಿಸರ್ಜನೆ ಮಾಡಿ ಕೈ ತೊಳೆಯದೆ ಮಾರಾಟ ಮಾಡ್ತಿದ್ದವನ ವಿಡಿಯೋ ವೈರಲ್ ಆಗ್ತಿದ್ದಂತೆ ಸಾರ್ವಜನಿಕರ ಆಕ್ರೋಶ ಎಲ್ಲೆ ಮೀರಿತ್ತು. 

ಆರೋಗ್ಯಕರ (Healthy) ಅಂತ ನಮ್ಮ ಡಯಟ್ (Diet) ನಲ್ಲಿ ಹಣ್ಣು, ತರಕಾರಿ ಸೇರಿಸ್ತೇವೆ. ಎಷ್ಟೋ ಸಂದರ್ಭದಲ್ಲಿ ಅದನ್ನು ತೊಳೆಯದೆ ತಿನ್ನೋರಿದ್ದಾರೆ. ಆದ್ರೆ ಈಗ ಕಲಬೆರಿಕೆ ಜಾಸ್ತಿಯಾಗಿದೆ. ಕೆಮಿಕಲ್ ಇಲ್ಲದ ಹಣ್ಣು- ತರಕಾರಿ (Fruits-vegetables) ಸಿಗೋದೇ ಕಷ್ಟ. ಹಾಗಿರುವಾಗ ಕೆಲವರು ಉದ್ದೇಶಪೂರ್ವಕವಾಗಿ ತಿನ್ನುವ ಪದಾರ್ಥಗಳನ್ನು ಕೊಳಕು ಮಾಡ್ತಿದ್ದಾರೆ. ಹಣಕೊಟ್ಟು ಅನಾರೋಗ್ಯವನ್ನು ನಾವು ಖರೀದಿ ಮಾಡ್ತಿದ್ದರೆ ಮತ್ತೆ ಕೆಲವರು ಹೇಸಿಗೆ ಕೆಲಸ ಮಾಡಿ ಗ್ರಾಹಕರ ನಂಬಿಕೆ ಕಳೆದುಕೊಳ್ತಿದ್ದಾರೆ. ಮಹಾರಾಷ್ಟ್ರ (Maharashtra) ದಲ್ಲಿ ಹಣ್ಣು ಮಾರಾಟಗಾರನೊಬ್ಬನ ಅಸಹ್ಯ ಕೃತ್ಯ ಬೆಳಕಿಗೆ ಬಂದಿದೆ. ಮೂತ್ರ ವಿಸರ್ಜನೆ ಮಾಡಿ ಕೈ ತೊಳೆಯದೆ ಆತ ಹಣ್ಣುಗಳನ್ನು ಮಾರಾಟ ಮಾಡ್ತಿದ್ದ ಎಂಬ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ.

ಮಹಾರಾಷ್ಟ್ರದ ಥಾಣೆಯ ಡೊಂಬಿವಲಿಯಲ್ಲಿ ಘಟನೆ ನಡೆದಿದೆ. 20 ವರ್ಷದ ಯುವಕ ಅಲಿ ಖಾನ್ ಈ ಕೃತ್ಯವೆಸಗಿದ ವ್ಯಕ್ತಿ. ಪ್ಲಾಸ್ಟಿಕ್ ಚೀಲದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ ಈತ ಕೈ ಸ್ವಚ್ಛಗೊಳಿಸದೆ ಹಣ್ಣು ಮಾರಾಟ ಮಾಡ್ತಿದ್ದ. ಆತನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಹಿಂದೂ ಸಂಘಟನೆ ಸದಸ್ಯರು ದಾಳಿ ನಡೆಸಿ, ಗಲಾಟೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಬೆಂಗಳೂರು: ರುಚಿಕಟ್ಟಾದ ಊಟಕ್ಕಾಗಿ ವಿಲ್ಲಾಗಳಿಗೆ ನುಗ್ಗಿ ಹೊಟ್ಟೆತುಂಬ ಉಂಡು ಕಳ್ಳತನ..!

ಅಲಿ ಖಾನ್ ಡೊಂಬಿವಲಿ ನಿಲ್ಜೆ ಪ್ರದೇಶದಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದ. ಆತ ತಳ್ಳುವ ಗಾಡಿಯಲ್ಲಿ ಹಣ್ಣನ್ನು ಮಾರಾಟ ಮಾಡ್ತಿದ್ದು, ಉದ್ದೇಶಪೂರ್ವಕವಾಗಿ ಇಂಥ ಕೆಲಸ ಮಾಡ್ತಿದ್ದ ಎಂದು ಹಿಂದೂ ಸಂಘಟನೆಗಳು ಆರೋಪ ಮಾಡಿವೆ. ಹಿಂದೂ ಸಂಘಟನೆ ಸದಸ್ಯರು ಘಟನೆಯನ್ನು ಖಂಡಿಸಿ, ಡೊಂಬಿವಲಿ ಪ್ರದೇಶದಲ್ಲಿ ಸಾಕಷ್ಟು ದಾಂದಲೆ ನಡೆಸಿದ್ದಾರೆ. ಹಣ್ಣು- ತರಕಾರಿಗಳನ್ನು ನೆಲಕ್ಕೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪೊಲೀಸರು ಅಲಿ ಖಾನ್ ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಆದ್ರೆ ಮೂತ್ರ ವಿಸರ್ಜನೆ ಮಾಡಿ, ಕೈ ತೊಳೆಯದೆ ಹಣ್ಣು ಮಾರಾಟ ಮಾಡ್ತಿದ್ದ ಅಲಿ ಖಾನ್, ತನ್ನ ಕೆಲಸದ ಬಗ್ಗೆ ಯಾವುದೇ ಸ್ಪಷ್ಟ ಕಾರಣ ನೀಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇಂಥ ಘಟನೆಗಳು ಹೊಸದಲ್ಲ : ತರಕಾರಿ, ಹಣ್ಣು ಸೇರಿದಂತೆ ಆಹಾರ ಪದಾರ್ಥಗಳನ್ನು ಉದ್ದೇಪೂರ್ವಕವಾಗಿ ಕೊಳಕು ಮಾಡುವ ಘಟನೆಗಳು ಆಗಾಗ ಬೆಳಕಿಗೆ ಬರ್ತಿರುತ್ತವೆ. ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ ಚಪಾತಿ ಹಿಟ್ಟಿಗೆ ಉಗುಳಿದ ಢಾಬಾ ಉದ್ಯೋಗಿಯೊಬ್ಬನ ವಿಡಿಯೋ ವೈರಲ್ ಆಗಿತ್ತು. ಜನಸಾಮಾನ್ಯರು ಇದನ್ನು ಖಂಡಿಸಿ, ಢಾಬಾ ಮೇಲೆ ದಾಳಿ ನಡೆಸಿದ್ದರು. ಎರಡು ವರ್ಷಗಳ ಹಿಂದೆ ಬರೇಲಿಯಲ್ಲಿ ತರಕಾರಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ವ್ಯಾಪಾರಿಯೊಬ್ಬನ ವಿಡಿಯೋ ಕೂಡ ಸುದ್ದಿ ಮಾಡಿತ್ತು. ವಿಷ್ಯ ತಿಳಿದ ಹಿಂದೂ ಸಂಘಟನೆಗಳು ಆತನ ಅಂಗಡಿ ಮೇಲೆ ದಾಳಿ ನಡೆಸಿದ್ದವು. ವ್ಯಾಪಾರಿ ಷರೀಫ್‌ ಖಾನ್‌ ತಪ್ಪೊಪ್ಪಿಕೊಂಡಿದ್ದ. ಇನ್ಮುಂದೆ ಇಂಥ ಕೆಲಸ ಮಾಡೋದಿಲ್ಲವೆಂದು ಭರವಸೆ ನೀಡಿದ್ದ. 

ಬೆಂಗಳೂರು: ಪ್ರೇಮಿಗಳಿಂದ ಬರೋಬ್ಬರಿ 1.50 ಕೋಟಿಯ ಎಂಡಿಎಂಎ ಡ್ರಗ್ಸ್‌ ಜಪ್ತಿ

ಸಹರಾನ್‌ಪುರದ ಹೋಟೆಲ್‌ನಲ್ಲಿಯೂ ಇಂಥ ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ಉದ್ಯೋಗಿಯೊಬ್ಬ ತವಾ ಮೇಲೆ ಉಗುಳಿ, ಬ್ರೆಡ್ ಬೇಯಿಸಿದ್ದಾನೆ. ಆರೋಪಿ ಅಪ್ರಾಪ್ತ ವಯಸ್ಕನಾಗಿದ್ದು, ಆತನನ್ನು ಪೊಲೀಸರು ಬಾಲಾಪರಾಧಿಗೃಹಕ್ಕೆ ಕಳುಹಿಸಿದ್ದಾರೆ. ಬರೀ ಆಹಾರಕ್ಕೆ ಮಾತ್ರವಲ್ಲದೆ ಮುಖದ ಮೇಲೆ ಉಗುಳಿ, ಫೇಸ್ಮಸಾಜ್ ಮಾಡಿದ ವಿಡಿಯೋ ಕೂಡ ಇತ್ತೀಚಿಗೆ ವೈರಲ್ ಆಗಿತ್ತು. ತರಕಾರಿ, ಹಣ್ಣುಗಳನ್ನು ಕೊಳಕು ಪ್ರದೇಶದಲ್ಲಿ ಬೆಳೆಯುವ ಹಾಗೂ ಅದಕ್ಕೆ ಕೆಮಿಕಲ್ ಸಿಂಪಡಿಸಿ ಮಾರಾಟ ಮಾಡುವ ಸುದ್ದಿಗಳ ಮಧ್ಯೆ ಇಂಥ ಘಟನೆಗಳು ಜನರು ಆರೋಗ್ಯಕರ ಆಹಾರದಿಂದ ದೂರ ಇರುವಂತೆ ಮಾಡ್ತಿವೆ. 

Scroll to load tweet…