Asianet Suvarna News Asianet Suvarna News

ಕುಷ್ಟಗಿ: ಮದುವೆ ಆಗೋದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ

*  ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೆಣೇದಾಳ ಗ್ರಾಮದಲ್ಲಿ ನಡೆದ ಘಟನೆ
*  ಪೋಕ್ಸೋ ಕಾಯ್ದೆಯಡಿ ಕಾಮುಕನ ಬಂಧನ
*  ಮಹೇಶ ಛತ್ರಪ್ಪ ಪಾಳೇದ ಬಂಧಿತ ಅರೋಪಿ 

Man Arrested for Rape on Minor Girl at Kushtagi in Koppal grg
Author
Bengaluru, First Published Aug 7, 2021, 1:14 PM IST

ತಾವರಗೇರಾ(ಆ.07): ಇಲ್ಲಿಗೆ ಸಮೀಪದ ಕುಷ್ಟಗಿ ತಾಲೂಕಿನ ಮೆಣೇದಾಳ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಯುವಕನೊಬ್ಬ ಮಂಗಳವಾರ ರಾತ್ರಿ ಅತ್ಯಾಚಾರ ಎಸಗಿದ್ದಾನೆ.

ಪ್ರಕರಣದ ಸಂಬಂಧ ಅದೇ ಗ್ರಾಮದ ಮಹೇಶ ಛತ್ರಪ್ಪ ಪಾಳೇದ ಅವರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹೂವಿನಹಡಗಲಿ: ಅಪ್ರಾಪ್ತ ಬಾಲಕಿಯ ಮೇಲೆ ಕಾಮುಕನ ಅಟ್ಟಹಾಸ 

9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಗೆ ಮದುವೆ ಆಗುವುದಾಗಿ ನಂಬಿಸಿ ಆರೋಪಿ ಮಂಗಳವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿ ಬಚನಾಳ ರಸ್ತೆ ಪಕ್ಕದ ಜಮೀನಿನ ಶೆಡ್‌ನಲ್ಲಿ ಅತ್ಯಾಚಾರ ಎಸಗಿದ್ದಾನೆ. ಯುವತಿಯ ಪಾಲಕರು ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಕುಷ್ಟಗಿ ಸಿಪಿಐ ನಿಂಗಪ್ಪ ಎನ್‌.ಆರ್‌. ತಿಳಿಸಿದ್ದಾರೆ.
 

Follow Us:
Download App:
  • android
  • ios