Koppal  

(Search results - 268)
 • Koppal23, Oct 2019, 8:03 AM IST

  ಕೊಪ್ಪಳ: ವರುಣ ಅಬ್ಬರಕ್ಕೆ ನಲುಗಿದ ಐತಿಹಾಸಿಕ ಸ್ಥಳಗಳು

  ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿ ಬಿಟ್ಟಿದ್ದರಿಂದ ಐತಿಹಾಸಿಕ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಕಳೆದ ಎರಡು ದಿನಗಳಿಂದ ಅಣೆಕಟ್ಟೆಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಹೆಚ್ಚುವರಿ ನೀರನ್ನೆಲ್ಲ ನದಿಗೆ ಬಿಡಲಾಗುತ್ತಿದೆ. ಮಂಗಳವಾರ ಬೆಳಗ್ಗೆ ನದಿಗೆ 1.50 ಲಕ್ಷ ಕ್ಯುಸೆಕ್ ನೀರು ಬಿಡಲಾಗಿದೆ. ಇದರಿಂದ ತಾಲೂಕಿನ ಆನೆಗೊಂದಿ, ಹನುಮನಹಳ್ಳಿ, ಸಣ್ಣಾಪುರ, ವಿರೂಪಾಪುರ ಗಡ್ಡೆ, ಋುಷಿಮುಖಪರ್ವತ, ಸೇರಿದಂತೆ ಐತಿಹಾಸಿಕ ಪ್ರದೇಶಗಳು ಜಲಾವೃತಗೊಂಡಿವೆ.

 • Anegondi

  Koppal23, Oct 2019, 7:47 AM IST

  ಹಂಪಿ ಉತ್ಸವ ಮಾಡ್ತೀರಾ, ಆನೆಗೊಂದಿ ಉತ್ಸವ ಯಾಕೆ ಮಾಡ್ತಿಲ್ಲ?

  ಹಂಪಿಯ ತೂಗುತೊಟ್ಟಿಲು ಎಂದು ಕರೆಯುವ ಆನೆಗೊಂದಿ ಉತ್ಸವ ಆಚರಣೆಗೆ ಸರ್ಕಾರ ಮೀನಮೇಷ ಮಾಡುತ್ತಲೇ ಬಂದಿದೆ. ಹಂಪಿ ಉತ್ಸವಕ್ಕೆ ನೀಡುವ ಆದ್ಯತೆ ನೀಡುತ್ತಲೇ ಇಲ್ಲ ಎನ್ನುವ ಕೊರಗಿಗೆ ಮುಕ್ತಿ ಯಾವಾಗ ಎನ್ನುವುದು ಮಾತ್ರ ಯಕ್ಷ ಪ್ರಶ್ನೆಯೇ ಆಗಿದೆ. ಈಗೇನು ಸರ್ಕಾರ ಹಂಪಿ ಉತ್ಸವನ್ನು ಮಾಡಲು ಮುಂದಾಗಿದ್ದು, ಆನೆಗೊಂದಿ ಉತ್ಸವದ ಕುರಿತುಇದುವರೆಗೂ ಚಕಾರ ಎತ್ತುತ್ತಿಲ್ಲ. 2014 ರಲ್ಲಿ ನಡೆದ ಬಳಿಕ ಮತ್ತೆ ಆನೆಗೊಂದಿ ಉತ್ಸವ ನಡೆದೇ ಇಲ್ಲ. 
   

 • Marehalli kere

  Koppal21, Oct 2019, 8:14 AM IST

  ಯಲಬುರ್ಗಾ: ಭಾರೀ ಮಳೆಗೆ ತುಂಬಿದ ಕೃಷಿ ಹೊಂಡಗಳು

  ಕಳೆದ ಮೂರ್ನಾಲ್ಕು ವರ್ಷಗಳಿಂದ ಸತತ ಬರಗಾಲ ಹಾಗೂ ಪ್ರಸಕ್ತ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರ ಬದುಕು ದಿಕ್ಕು ತೋಚದಂತಾಗಿತ್ತು. ಆದರೆ ಈ ಸಾರಿ ಹಿಂಗಾರು ಮಳೆ ಸಕಾಲಕ್ಕೆ ಉತ್ತಮ ಪ್ರಮಾಣದಲ್ಲಿ ಆಗುವ ಮೂಲಕ ರೈತರ ಜಮೀನಿನಲ್ಲಿ ನಿರ್ಮಿಸಿಕೊಂಡ ಕೃಷಿ ಹೊಂಡಗಳು ಭರ್ತಿಯಾಗಿರುವುದಕ್ಕೆ ತಾಲೂಕಿನ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

 • Koppal20, Oct 2019, 7:39 AM IST

  ಕೊಪ್ಪಳ: ನೀರಲಗಿ 1500 ಎಕರೆಗೆ ನೀರಾವರಿ ಭಾಗ್ಯ

  ನೀರಲಗಿ ಏತ ನೀರಾವರಿ ಯೋಜನೆಯ ಮುಂದುವರಿದ ಕಾಮಗಾರಿಯಿಂದ ಈ ಭಾಗದ 1,500 ಎಕರೆ ಪ್ರದೇಶ ನೀರಾವರಿಯಾಗಲಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್‌ ಅವರು ಹೇಳಿದ್ದಾರೆ. 
   

 • Koppal18, Oct 2019, 7:38 AM IST

  ರಾಜ್ಯ ಸರ್ಕಾರದ ದ್ರೋಹ ಖಂಡಿಸಿ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ

  ರಾಜ್ಯ ಸರ್ಕಾರ ಒಪ್ಪಿರುವ ಪಿಂಚಣಿ ಸೌಲಭ್ಯ ಕೊಡದೆ ಬಿಸಿಯೂಟ ನೌಕರರಿಗೆ ಮಾಡಿರುವ ದ್ರೋಹವನ್ನು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಖಂಡಿಸುತ್ತದೆ ಎಂದು ಪ್ರತಿಭಟನೆ ಕೈಗೊಳ್ಳುವ ಮೂಲಕ ಘೋಷಣೆಗಳನ್ನು ಕೂಗುತ್ತಾ ವಿವಿಧ ಬೇಡಿಕೆಗೆ ಒತ್ತಾಯಿಸಿ ಅಪಾರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
   

 • karadi sanganna

  Raichur16, Oct 2019, 3:14 PM IST

  ಕೊಪ್ಪಳ ಸಂಸದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

  ಪ್ರತಾಪ್‌ಗೌಡ ಪಾಟೀಲ್‌ ರಾಜೀನಾಮೆಯಿಂದ ಮಸ್ಕಿ ಕ್ಷೇತ್ರದಲ್ಲಿ ಎದುರಾಗಬಹುದಾದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಹೇಗಾದರೂ ಮಾಡಿ ಸ್ಪರ್ಧಿಸಬೇಕೆಂದು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಮುಖಂಡರ ಹಾಗೂ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿರುವ ಬಸನಗೌಡ ತುವಿರಹಾಳ ಅವರಿಗೆ ಉಪ ಕದನದಲ್ಲಿ ಬಿಜೆಪಿಯಿಂದ ಟಿಕೆಟ್‌ ಸಿಗುವ ಲಕ್ಷಣಗಳು ಕಡಿಮೆಯಾಗುತ್ತಿವೆ.
   

 • accident

  Koppal16, Oct 2019, 9:57 AM IST

  ಕೊಪ್ಪಳದಲ್ಲಿ ಸರಣಿ ಅಪಘಾತ: ಐದು ವಾಹನಗಳು ಡಿಕ್ಕಿ

  ಐದು ವಾಹನಗಳು ಡಿಕ್ಕಿ ಹೊಡೆದ ಘಟನೆ ತಾಲೂಕಿನ ಹೊಸ‌ ಲಿಂಗಾಪೂರ ಬಳಿ ಅ. 15 ರಂದು ರಾತ್ರಿ ನಡೆದಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 
   

 • wine

  Koppal16, Oct 2019, 8:23 AM IST

  ಹನುಮಸಾಗರ: ಕುಡುಕರ ತಾಣವಾದ ಕಪಿಲ ತೀರ್ಥ

  ಲ್ಲಿಯ ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣ ‘ಕಪಿಲ ತೀರ್ಥ ಜಲಪಾಲ’ ಇತ್ತೀಚಿಗೆ ಕುಡುಕರ ಮೋಜಿನ ತಾಣವಾಗುತ್ತಿದ್ದು, ಸಭ್ಯಸ್ಥರು ಸಂಸಾರ ಸಮೇತ ಇಲ್ಲಿ ಪ್ರವಾಸ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಪಿಲ ತೀರ್ಥ ಎಂದು ಕರೆಯಲ್ಪಡುವ ಈ ಕಪ್ಪಲೆಪ್ಪ ಜಲಪಾತ ಮಳೆಗಾಲದಲ್ಲಿ ಸುತ್ತಮುತ್ತಲಿನ ಜನರು ಕುಟುಂಬ ಸಮೇತ ಬಂದು ಖುಷಿ ಪಡುವ ಪ್ರೇಕ್ಷನೀಯ ಸ್ಥಳ. ಜತೆಗೆ ರೈತರು ಈ ಜಲಪಾತಕ್ಕೆ ಪೂಜಿಸಿ ಇಲ್ಲಿನ ನೀರನ್ನು ತೀರ್ಥದ ರೂಪದಲ್ಲಿ ತೆಗೆದುಕೊಂಡು ಹೋಗಿ ಬೆಳೆಗಳಿಗೆ ಚಿಮುಕಿಸುವಂತಹ ಪದ್ಧತಿ ಇರುವುದರಿಂದ ಶ್ರದ್ಧಾ ಕೇಂದ್ರವೂ ಹೌದು. ಆದರೆ ಸದ್ಯ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಪ್ರತಿ ನಿತ್ಯ ಆಗಮಿಸುವ ಜನರ ಸಂಖ್ಯೆ ಮಾತ್ರ ಕಡಿಮೆಯಾಗಿದೆ. ಇಡೀ ವಾತಾವರಣದಲ್ಲಿ ಮದ್ಯದ ವಾಸನೆ ತುಂಬಿಕೊಂಡಿದೆ. ಮಾಂಸದ ತುಂಡುಗಳು ಅಲ್ಲಲ್ಲಿ ಬಿದ್ದು ವಾಕರಿಕೆ ತರಿಸುತ್ತಿವೆ. ಸದ್ಯ ಈ ಸ್ಥಳಕ್ಕೆ ಸಭ್ಯಸ್ಥರು ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
   

 • home flood damage in karnataka

  Koppal15, Oct 2019, 10:46 AM IST

  ಕೊಪ್ಪಳದಲ್ಲಿ ಮನೆಯ ಚಾವಣಿ ಕುಸಿತ: ಒಂದೇ ಕುಟುಂಬದ ಮೂವರ ಸಾವು

  ಮನೆಯ ಚಾವಣಿ  ಕುಸಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ತಾಲೂಕಿನ ಯಲಮಗೇರಿ ಗ್ರಾಮದಲ್ಲಿ ನಡೆದಿದೆ.  

 • यूपी के देवरिया की एक बच्‍ची और उसकी मां का एक विडियो वायरल हुआ है। विडियो में ट्रैफिक नियमों का पालन करते हुए दोनों ने हेल्मेट लगा रखा है और इसके लिए एक पुलिस अधिकारी उनकी तारीफ करता दिख रहा है।

  Koppal15, Oct 2019, 8:23 AM IST

  ಗಂಗಾವತಿ: ಸಂಚಾರಿ ಪೊಲೀಸರೊಂದಿಗೆ ವಿದೇಶಿಗರ ಅನುಚಿತ ವರ್ತನೆ

  ಇಲ್ಲಿಯ ಸಂಚಾರಿ ಪೊಲೀಸ್ ಅಧಿಕಾರಿಯೊಂದಿಗೆ ಇಬ್ಬರು ವಿದೇಶಿ ಪ್ರವಾಸಿಗರು ಅನುಚಿತವಾಗಿ ವರ್ತಿಸಿದ ಘಟನೆ ಸೋಮವಾರ ನಡೆದಿದೆ.
   

 • Communist Party

  Koppal15, Oct 2019, 8:09 AM IST

  'ಜನರ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಆಸಕ್ತಿ ತೋರುತ್ತಿಲ್ಲ'

  ನಗರದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮತ್ತು ಜನ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಕಮ್ಯುನಿಸ್ಟ್ ಪಕ್ಷದ ಪದಾಧಿಕಾರಿಗಳು ನಗರದ ಪ್ರಮುಖ ಬೀದಿಗಳಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಇದೇ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. 
   

 • Anganavadi

  Koppal10, Oct 2019, 8:16 AM IST

  ಅಂಗನವಾಡಿ ಮಕ್ಕಳ ಹಾಲಿನ ಪುಡಿಗೂ ಸರ್ಕಾರದಲ್ಲಿ ದುಡ್ಡಿಲ್ವಂತೆ!

  ಜಿಲ್ಲಾದ್ಯಂತ ಮಕ್ಕಳಲ್ಲಿ ಅಪೌಷ್ಟಿಕತೆ ತಾಂಡವಾಡುತ್ತಿದೆ. ಇದರಿಂದ ಬಳಲುತ್ತಿರುವ ಮಕ್ಕಳನ್ನು ಪಾರು ಮಾಡಲು ಸರ್ಕಾರ ನಾನಾ ಪೌಷ್ಟಿಕ ಆಹಾರ ಮತ್ತು ವಿಶೇಷವಾಗಿ ಹಾಲಿನ ಪೌಡರ್‌ ಪೂರೈಕೆ ಮಾಡುತ್ತಿದೆ. ಆದರೆ, ಕಳಗೆ ಮೂರು ತಿಂಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ಹಾಲಿನ ಪೌಡರ್‌ ಪೂರೈಕೆಯೇ ಆಗಿಲ್ಲ.
   

 • Lake

  Karnataka Districts7, Oct 2019, 8:43 AM IST

  ತಾವರಗೇರಾದ ರಾಯನ ಕೆರೆ ಭರ್ತಿ: ರೈತರ ಮೊಗದಲ್ಲಿ ಸಂತಸ

  ತಾಲೂಕಿನಾದ್ಯಂತ ಶನಿವಾರ ರಾತ್ರಿ ಅಲ್ಲಲ್ಲಿ ಉತ್ತಮ ಮಳೆಯಾಗಿದ್ದರಿಂದ ತಾಲೂಕಿನ ತಾವರಗೇರಾ ಬಳಿ ಇರುವ ರಾಯನ ಕೆರೆ ಭರ್ತಿಯಾಗಿದ್ದು. ನಿಡಶೇಸಿ ಕೆರೆಗೆ ಅಲ್ಪ ಪ್ರಮಾಣದ ನೀರು ಸಂಗ್ರಹವಾಗಿದೆ.
   

 • उत्तराखंड में भारी बारिश को लेकर 28 और 29 सितंबर को क्रमशः येलो और ऑरेंज अलर्ट जारी किया गया है। देहरादून, चमोली, पौड़ी, बागेश्वर और पिथौरागढ़ में ऑरेंज अलर्ज जारी किया गया है।

  Karnataka Districts7, Oct 2019, 8:24 AM IST

  ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಮಳೆ: ಕೊಚ್ಚಿ ಹೋದ ಈರುಳ್ಳಿ ಬೆಳೆ

  ಜಿಲ್ಲೆಯಾದ್ಯಂತ ಶನಿವಾರ ಮಧ್ಯರಾತ್ರಿ ಹಾಗೂ ಭಾನುವಾರ ಬೆಳಗ್ಗೆ ಸುರಿದ ಧಾರಾಕಾರ ಮಳೆಯಿಂದಾಗಿ ವಿವಿಧ ಕೆರೆ, ಹಳ್ಳಗಳು ಭರ್ತಿಯಾಗಿ ಹರಿಯಲಾರಂಭಿಸಿದೆ. ಇನ್ನು ಕಾರಟಗಿ ತಾಲೂಕಿನ ಹುಳ್ಕಿಹಾಳ- ಗುಂಡೂರು 4.5 ಕಿ.ಮೀ ಉದ್ದದ ಉಪಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಬತ್ತದ ಬೆಳೆಗೆ ನುಗ್ಗಿ ಅಪಾರ ನಷ್ಟವನ್ನುಂಟು ಮಾಡಿದೆ.
   

 • BJP
  Video Icon

  Karnataka Districts6, Oct 2019, 9:28 PM IST

  ‘ಬಳೆ-ಸೀರೆ ಕಳಿಸಿದರೆ ಅದನ್ನು ಬಡವರಿಗೆ ಹಂಚುತ್ತೇವೆ’

  ಕೊಪ್ಪಳ[ಅ. 06] ಮಾಜಿ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಕಿಡಿಕಾರಿದ್ದಾರೆ. ನೀವು ಸೀರೆ ಕಳಿಸಿದರೆ ಅದನ್ನು ಬಡವರಿಗೆ ಹಂಚಿಬಿಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.