ಹೂವಿನಹಡಗಲಿ(ಮೇ.09): ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಗೋವಿಂದಪುರ ತಾಂಡ-2ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 

ಮೇ 3ರಂದು ಸಂಜೆ 7 ಗಂಟೆ ಸುಮಾರಿಗೆ ಬಾಲಕಿ ತಾಂಡದ ಹೊರವಲಯದಲ್ಲಿ ಬಹಿರ್ದೆಸೆಗೆಂದು ಹೋಗಿದ್ದ ವೇಳೆ ಅದೇ ತಾಂಡದ ಮಲ್ಲೇಶ ನಾಯ್ಕ (35) ಅತ್ಯಾಚಾರ ಎಸಗಿದ್ದಾನೆ.

13ರ ಬಾಲಕಿ ಮೇಲೆ ಅತ್ಯಾಚಾರ : ಅರೆಸ್ಟ್ ಆದವಗೆ ಕೊರೋನಾ ಪಾಸಿಟಿವ್

ಈಗಾಗಲೇ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಇಲಾಖೆಗೆ ಒಪ್ಪಿಸಲಾಗಿದೆ. ಈ ಕುರಿತು ಇಟಿಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.