ನವದೆಹಲಿ(ಫೆ. 16) ಮೆಟ್ರೋ ರೈಲಿನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಎರಡು ದಿನಗಳ ಹಿಂದೆ ಮೆಟ್ರೋ ರೈಲಿನಲ್ಲಿ ಪ್ಯಾಂಟ್ ಜಿಪ್ ತೆಗೆದು ಯುವತಿಗೆ ತನ್ನ ಗುಪ್ತಾಂಗ ತೋರಿಸಿದ್ದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್​ ಮಾಡಲಾಗಿದೆ.

ಆರೋಪಿ ತನ್ನ ಸ್ಮಾರ್ಟ್​​ ಕಾರ್ಡ್​​ನ್ನು ಮೊಬೈಲ್​​ ನಂಬರ್ ಮೂಲಕ ರೀಚಾರ್ಜ್​ ಮಾಡಿಸಿದ್ದ. ಇದನ್ನೇ ಆಧಾರವಾಗಿಟ್ಟುಕೊಂಡು ಟ್ರೇಸ್ ಮಾಡಿದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ಎಂಜಿ ರಸ್ತೆಯಲ್ಲಿ ಕಾಮಾಂಧರು ಮಾಡಿದ ನೀಚ ಕೆಲಸ

ಬಂಧಿತ ಆರೋಪಿ 28 ವರ್ಷದ ಸಿವಿಲ್ ಇಂಜಿನಿಯರ್ ಎಂದು ತಿಳಿದುಬಂದಿದೆ. ಹರಿಯಾಣದ ಗುರುಗಾಂವ್​​ನಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

2 ದಿನಗಳ ಹಿಂದೆ ಈ ಯುವಕ ತನ್ನ ಮುಂದೆ ನಿಂತಿದ್ದ ಯುವತಿಗೆ ತನ್ನ ಪ್ಯಾಂಟ್ ಬಿಚ್ಚಿ ಗುಪ್ತಾಂಗ ಪ್ರದರ್ಶಿಸಿದ್ದ. ಈ ವೇಳೆ ಹೆದರಿದ್ದ ಯುವತಿ ನಂತರ ಪೊಲೀಸ್ ಸ್ಟೇಷನ್​​ಗೆ ತೆರಳಿ ಯುವಕನ ಕೃತ್ಯದ ಬಗ್ಗೆ ದೂರು ನೀಡಿದ್ದರು.

ಜೀನ್ಸ್ ಪ್ಯಾಂಟ್, ಜಾಕೆಟ್ ಧರಿಸಿದ್ದ ಯುವಕತನ್ನ ಬ್ಯಾಕ್‍ಬ್ಯಾಗ್‍ನನ್ನು ಮುಂಭಾಗದಲ್ಲಿ ಹಾಕಿಕೊಂಡಿದ್ದ. ಆ ವಿಕೃತ ಕಾಮಿ ತನ್ನ ಜನನಾಂಗವನ್ನು ಹೊರಹೊಮ್ಮಿಸಿ ನನ್ನತ್ತ ಪ್ರದರ್ಶಿಸಿದ. ಬೇರೆಯವರಿಗೆ ಗೊತ್ತಾಗದಂತೆತನ್ನ ಬ್ಯಾಗ್‍ನನ್ನುಅಡ್ಡವಾಗಿಟ್ಟುಕೊಂಡಿದ್ದ.  ಈ ಘಟನೆಯಿಂದ ನನಗೆ ಆಘಾತ ಮತ್ತು ಹೇಸಿಗೆಯಾಗಿತ್ತು ಎಂದು ಯುವತಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದರು.