ಅಪ್ರಾಪ್ತೆಯ ಅತ್ಯಾಚಾರಗೈದ ಅಪ್ಪ, ಇಬ್ಬರು ಸ್ನೇಹಿತರು 20 ವರ್ಷ ಜೈಲುಪಾಲು!
* 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ
* ಅತ್ಯಾಚಾರಗೈದ ಅಪ್ಪ, ಆತನ ಇಬ್ಬರು ಗೆಳೆಯರ ಬಂಧನ
* ಅಪ್ಪನ ಕುಕೃತ್ಯ ಮುಚ್ಚಿಡಲು ಯತ್ನಿಸಿದ್ದ ತಾಯಿ
ಮುಂಬೈ(ಜು.15): 16 ವರ್ಷದ ಬಾಲಕಿಯ ತಂದೆ ಮತ್ತು ಆತನ ಇಬ್ಬರು ಸ್ನೇಹಿತರಿಗೆ ಪದೇ ಪದೇ ಅತ್ಯಾಚಾರವೆಸಗಿದ ಆರೋಪದ ಮೇಲೆ ಬುಧವಾರ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.
ಈ ಲೈಂಗಿಕ ದೌರ್ಜನ್ಯ ಪ್ರಕರಣ 2018ರಲ್ಲಿ ಪ್ರಾರಂಭವಾಗಿದೆ, 40 ವರ್ಷದ ವ್ಯಕ್ತಿ ಕೊಲೆಯ ಯತ್ನದಲ್ಲಿ ಬಂಧಿಸಲ್ಪಟ್ಟು ಆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ತಂದೆ ಮತ್ತು ಆತನ ಸ್ನೇಹಿತರು ಅಪ್ರಾಪ್ತ ಬಾಲಕಿಯನ್ನು ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ಗೆ ಕರೆದೊಯ್ದು ಮಾದಕ ದ್ರವ್ಯ ನೀಡಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ವಿಶೇಷ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಎಸ್‌ಸಿ ಜಾಧವ್ ಮೂವರಿಗೆ ತಲಾ 10,000 ರೂ. ದಂಡವನ್ನೂ ವಿಧಿಸಲಾಗಿದೆ.
ಅಪ್ರಾಪ್ತ ವಯಸ್ಕ ಬಾಲಕಿಯನ್ನು ನ್ಯಾಯಾಲಯಕ್ಕೆ ಕರೆತಂದಿದ್ದು, ಆಕೆ ಆರೋಪಿಗಳನ್ನು ಗುರುತಿಸಿದ್ದಾಳೆ. ಆಕೆಯ ಪೋಷಕರು ಬೇರ್ಪಟ್ಟಿದ್ದು, ತನ್ನ ತಂದೆ ಜೈಲಿನಿಂದ ಮರಳಿದ್ದ. ಆದರೆ ತನ್ನ ತಾಯಿ ಬೇರೆ ಸಂಬಂಧದಲ್ಲಿದ್ದ ಕಾರಣ ತಾನು ಮತ್ತು ಸಹೋದರ ಅಪ್ಪನೊಂದಿಗೇ ವಾಸಿಸಲು ಪ್ರಾರಂಭಿಸಿದ್ದೆವೆಂದು ಸಂತ್ರಸ್ತೆ ನ್ಯಾಯಾಲಯಕ್ಕೆ ತಿಳಿಸಿದಳು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವೀಣಾ ಶೇಲಾರ್ ಅವರು ಇತರ 13 ಸಾಕ್ಷಿಗಳ ಸಾಕ್ಷ್ಯವನ್ನು ಮಂಡಿಸಿದರು.
ಏಪ್ರಿಲ್ 4, 2018 ರಂದು, ತಂದೆ ಆಕೆ ಬಳಿ ಲೈಂಗಿಕ ಸಂಬಂಧ ಹೊಂದಬಹುದೇ ಎಂದು ಕೇಳಿದ್ದ. ಈ ವೇಳೆ ಆಕೆ ಅಳಲು ಪ್ರಾರಂಭಿಸಿದಳು, ಆದ್ದರಿಂದ ಆತ ಮಗಳನ್ನು ಸಮಾಧಾನಪಡಿಸಿದ್ದ, ಅಲ್ಲದೇ ಅವಳಿಗೆ ತಂಪು ಪಾನೀಯವನ್ನು ಕೊಟ್ಟಿದ್ದ. ಬಳಿಕ ಆಕೆಗೆ ತಲೆಸುತ್ತು ಬಂದಿದ್ದು, ಆರೋಪಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆ ಸಮಯದಲ್ಲಿ ಅವಳ ಸಹೋದರರು ಆಟವಾಡುತ್ತಿದ್ದರು ಮತ್ತು ಅವರು ಹಿಂತಿರುಗಿದಾಗ ಅವಳು ಅವರಿಗೆ ಏನನ್ನೂ ಹೇಳಲಿಲ್ಲ.
ಮುಂದಿನ ಕೆಲ ತಿಂಗಳಲ್ಲಿ, ಆಕೆಯ ತಂದೆ ಅವಳ ಮೇಲೆ ಅತ್ಯಾಚಾರವನ್ನು ಮುಂದುವರೆಸಿದ್ದ. ಅವಳು ಅಂತಿಮವಾಗಿ ತನ್ನ ತಾಯಿಯನ್ನು ಬಳಿ ಹೋಗಲು ನಿರ್ಧರಿಸಿದಳು, ಅಮ್ಮನ ಜೊತೆ ವಾಸಿಸಲು ಹೋದಳು. ಆದರೆ ಅವಳು ಆಗಾಗ್ಗೆ ಮನೆಗೆಡ ಬೇಕಾದ ವಸ್ತುಗಳನ್ನು ಖರೀದಿಸಲು ಹೊರಗೆ ಹೋಗುತ್ತಿದ್ದಳು, ಈ ವೇಳೆ ತಂದೆ ಮತ್ತು ಅವನ ಸ್ನೇಹಿತರು ಅವಳನ್ನು ಬ್ಯಾಂಡ್‌ಸ್ಟ್ಯಾಂಡ್‌ಗೆ ಬಲವಂತವಾಗಿ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಆಕೆಗೆ ಯೌಆಉದೋ ಒಂದು ಮಾಥ್ರ ನೀಡಿ, ಅತ್ಯಾಚಾರವೆಸಗುತ್ತಿದ್ದರು. ಬಳಿಕ "ಗುಹೆಯಂತಹ ಸ್ಥಳದಲ್ಲಿ" ಬಿಡುತ್ತಿದ್ದರು. ಮುಂದಿನ ಎರಡು ತಿಂಗಳ ಕಾಲ ದೌರ್ಜನ್ಯ ಮುಂದುವರೆಯಿತು ಎಂದು ಅವರು ಹೇಳಿದ್ದಾರೆ.
ನಿರಂತರ ಲೈಂಗಿಕ ಕಿರುಕುಳದ ಬಗ್ಗೆ ತನ್ನ ತಾಯಿಗೆ ತಿಳಿಸಿದ್ದಾಳೆ ಆದರೆ ಏನೂ ಬದಲಾಗಿಲ್ಲ ಎಂದು ಹುಡುಗಿ ಹೇಳಿದ್ದಾಳೆ. ಬೇಸರಗೊಂಡ ಆಕೆ ಜೂನ್ 20 ರಂದು ಮನೆಯಿಂದ ಓಡಿಹೋದಳು, ಹೀಗಿರುವಾಗ CSMT ನಿಲ್ದಾಣದಲ್ಲಿ ಚೈಲ್ಡ್ ಲೈನ್ ಸದಸ್ಯರು ರಕ್ಷಿಸಿದರು. ಇನ್ನು ಸಹಿಸಲು ಸಾಧ್ಯವಿಲ್ಲ ಎಂದ ಬಾಲಕಿ ಸಹಿಸಲಾರದೆ ತನಗಾದ ಸಂಕಟವನ್ನು ಅವರ ಬಳಿ ಹೇಳಿಕೊಂಡಳು. ಕೊನೆಗೆ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ನಂತರ ಪೊಲೀಸ್ ಠಾಣೆಗೆ ಕರೆದೊಯ್ದರು.
ಬಾಲಕಿ ತಾನು ಮಕ್ಕಳ ಆಶ್ರಯ ಮನೆಯಲ್ಲಿದ್ದಾಗ, ತನ್ನ ತಾಯಿ ತನ್ನನ್ನು ಭೇಟಿಯಾಗಲು ಬಂದಳು ಮತ್ತು ತನ್ನ ತಂದೆಯ ವಿರುದ್ಧ ಮಾತನಾಡುವಂತೆ ಇಲ್ಲಿ ಕಿರುಕುಳ ನೀಡಲಾಗಿದೆ ಎಂದು ಹೇಳುವಂತೆ ಒತ್ತಾಯಿಸಿದಳು. ತನ್ನ ತಾಯಿ ಕೊಟ್ಟ ಈ ಸೂಚನೆಯ ಬಗ್ಗೆ ಪರೀಕ್ಷೆಗೆ ಕರೆದುಕೊಂಡು ಹೋದಾಗ ವೈದ್ಯಕೀಯ ಅಧಿಕಾರಿಗೆ ತಿಳಿಸಿರುವುದಾಗಿ ಬಾಲಕಿ ಹೇಳಿದ್ದಾಳೆ.