ನೂಪುರ್ ಬೆಂಬಲಿಸಿದ ಮಹಾರಾಷ್ಟ್ರ ಮೆಡಿಕಲ್ ಸ್ಟೋರ್ ಮಾಲೀಕನ ಇರಿದು ಕೊಲೆ, NIA ತನಿಖೆಗೆ ಆದೇಶ!

  • ಉಮೇಶ್  ಕೊಲೆ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಮಹಾರಾಷ್ಟ್ರ
  • ರಾಷ್ಟ್ರೀಯ ತನಿಖಾ ಸಂಸ್ಥೆಗೆ ಪ್ರಕರಣ ವರ್ಗಾಯಿಸಿದ ಸಿಎಂ ಶಿಂಧೆ
  • ಉದಯಪುರ ಬಳಿಕ ಮಹಾರಾಷ್ಟ್ರದಲ್ಲೂ ಕತ್ತುಸೀಳಿ ಕೊಲೆ
Maharastra New CM Eknath Shinde order NIA probe to Amravati pharmacist killing for support Nupur Sharma ckm

ಮುಂಬೈ(ಜು.02): ರಾಜಸ್ಥಾನದ ಉದಯಪುರದಲ್ಲಿನ ಕನ್ನಹಯ್ಯ ಲಾಲ್ ಹತ್ಯೆ ಬಳಿಕ ಅದೇ ರೀತಿ, ಅದೇ ಕಾರಣಕ್ಕೆ ಮಹಾರಾಷ್ಟದಲ್ಲಿ ರಸಾಯನಶಾಸ್ತ್ರಜ್ಞ ಉಮೇಶ್ ಪ್ರಹ್ಲಾದ್ ರಾವ್ ಕೊಲೆ ನಡೆದಿದೆ. ಉಮೇಶ್ ಹತ್ಯೆ ಹಿಂದೆ ಉಗ್ರರ ಕೈವಾಡದ ಶಂಕೆ ಬಲಗೊಳ್ಳುತ್ತಿದೆ. ಹೀಗಾಗಿ ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ರಾಷ್ಟ್ರೀಯ ತನಿಖಾ ದಳ(NIA)ತನಿಖೆಗೆ ಆದೇಶಿಸಿದ್ದಾರೆ. 

ಬಿಜೆಪಿ ನಾಯಕಿ ನೂಪುರ್ ಶರ್ಮಾ ಬೆಂಬಲಿಸಿ ವ್ಯಾಟ್ಸ್ಆ್ಯಪ್ ಸ್ಟೇಟಸ್ ಹಾಕಿದ ಕಾರಣಕ್ಕೆ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಮಾಡಲಾಗಿತ್ತು. ಈ ಘಟನೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಈ ಘಟನೆ ಬೆನ್ನಲ್ಲೇ ಮಹಾರಾಷ್ಟ್ರದಲ್ಲೂ ಇದೇ ರೀತಿ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ರಾಸಾಯನಶಾಸ್ತ್ರಜ್ಞ ಉಮೇಶ್ ಪ್ರಹ್ಲಾದ್ ರಾವ್‌ನನ್ನು ಕತ್ತು ಸೀಳಿ ಕೊಲೆ ಮಾಡಲಾಗಿದೆ. ಉಮೇಶ್ ಪ್ರಹ್ಲಾದ್ ರಾವ್ ತಮ್ಮ ವ್ಯಾಟ್ಸ್ಆ್ಯಪ್ ಗ್ರೂಪ್‌ನಲ್ಲಿ  ನೂಪುರ್ ಶರ್ಮಾ ಬೆಂಬಲಿಸಿದ್ದರು. ಇದೇ ಕಾರಣಕ್ಕೆ ಕೊಲೆಯಾಗಿದೆ ಅನ್ನೋ ಅನಮಾನಕ್ಕೆ ಹಲವು ಸಾಕ್ಷ್ಯಗಳು ದೊರೆತಿದೆ. ಈ ಘಟನೆ ಭಾರಿ ಆಕ್ರೋಶಕ್ಕೆ ಕಾರಣಾಗಿದೆ. ಪ್ರಕರಣದ ಗಂಭೀರತೆಯನ್ನು ಅರಿತ ಸಿಎಂ ಏಕನಾಥ್ ಶಿಂಧೆ ಎನ್ಐಎ ತನಿಖೆಗೆ ಆದೇಶಿಸಿದ್ದಾರೆ.

 

ಉದಯ್‌ಪುರ ಬಳಿಕ ಮಹಾದಲ್ಲೂ ಭಯಾನಕ ಕೃತ್ಯ: ನೂಪುರ್‌ ಬೆಂಬಲಿಸಿದ್ದಕ್ಕೆ ವ್ಯಕ್ತಿಯ ಇರಿದು ಕೊಲೆ

ಉಮೇಶ್ ಪ್ರಹ್ಲಾದ್ ರಾವ್ ಅಮರಾವತಿಯಲ್ಲಿ ಮೆಡಿಕಲ್ ಸ್ಟೋರ್ ಇಟ್ಟುಕೊಂಡಿದ್ದಾರೆ. ನೂಪುರ್ ಶರ್ಮಾ ಬೆಂಬಲಿಸಿ ಉಮೇಶ್, ತಮ್ಮ ವ್ಯಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಈ ಗ್ರೂಪ್‌ನಲ್ಲಿ ಮೆಡಿಕಲ್‌ನಿಂದ ಔಷಧಿಗಳನ್ನು ಖರೀದಿಸುವ ಹಲವರಿದ್ದಾರೆ. ಮುಸ್ಲಿಮರು ಇದ್ದಾರೆ. ನೂಪುರ್ ಶರ್ಮಾ ಬೆಂಬಲಿಸಿ ಪೋಟೋ ಹಂಚಿಕೊಂಡ ಬೆನ್ನಲ್ಲೇ ಉಮೇಶ್ ಕೊಲೆಗೆ ಸಂಚು ರೂಪಿಸಲಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ.

ಈ ಪ್ರಕರ ಸಂಬಂಧ ಈಗಾಗಲೇ ಐವರನ್ನು ಬಂಧಿಸಲಾಗಿದೆ. ಆದರೆ ಪ್ರಕರಣದ ಹಿಂದೆ ಕೇವಲ ಕೊಲೆ ಮಾತ್ರವಲ್ಲ, ಅತೀ ದೊಡ್ಡ ಸಂಚು ಅಡಗಿದೆ. ಉಗ್ರರ ಕೈವಾಡವಿರುವ ಶಂಕೆ ಬಲಗೊಳ್ಳುತ್ತಿದೆ. ಇತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರೀಯ ತನಿಖಾ ದಳ ಸಂಸ್ಥೆಯಿಂದ ತನಿಖೆ ನಡೆಸಲು ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಏಕನಾಥ್ ಶಿಂಧೆ ಎನ್ಐಎ ತನಿಖೆಗೆ ಆದೇಶ ನೀಡಿದ್ದಾರೆ.

ಕನ್ಹಯ್ಯಲಾಲ್ ಕುಟುಂಬಕ್ಕೆ ಸಹಾಯ, 24 ಗಂಟೆಯಲ್ಲಿ 1 ಕೋಟಿ ರೂಪಾಯಿ ದೇಣಿಗೆ!

ಜೂನ್ 21 ರಂದು ಈ ಕೊಲೆ ನಡೆದಿದೆ. ಕನ್ಹಯ್ಯ  ಲಾಲ್ ಪ್ರಕರಣದ ಬಳಿಕ ಉಮೇಶ್ ಕೊಲೆ ಪ್ರಕರಣದ ಹಿಂದೆ ಉಗ್ರರ ಕೈವಾಡದ ಶಂಕೆ ಬಲಗೊಂಡಿದೆ. ಎರಡೂ ಕೊಲೆಗಳ ನೂಪುರ್ ಶರ್ಮಾ ಬೆಂಬಲಿಸಿದ ಕಾರಣಕ್ಕೆ ನಡೆದಿದೆ. ಇಷ್ಟೇ ಅಲ್ಲ ಎರಡೂ ಕೊಲೆಗಳಲ್ಲಿ ಕತ್ತು ಸೀಳಿ, ರುಂಡ ಕತ್ತರಿಸಿ ಕೊಲೆ ಮಾಡಲಾಗಿದೆ. ಇದೀಗ ಪ್ರಕರಣನ್ನು ಎನ್ಐಎ ಗಂಭೀರವಾಗಿ ಪರಿಗಣಿಸಿದೆ

Latest Videos
Follow Us:
Download App:
  • android
  • ios