ಬಾಂಬ್ ಹಿಡಿದುಕೊಂಡು ನೇರವಾಗಿ ಪೊಲೀಸ್ ಸ್ಟೇಶನ್ಗೆ ಬಂದ!
* ಬಾಂಬ್ ತೆಗೆದುಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಬಂದ
* ಕಾಲೇಜಿನ ಬಳಿ ಬ್ಯಾಗ್ ಸಿಕ್ಕಿತು ಎಂದು ಹೇಳಿದ್ದ
* ವಿಚಾರಣೆ ಮಾಡಿದಾಗ ಆತನೇ ಬಾಂಬ್ ತಯಾರಿಕೆ ಮಾಡಿದ್ದು ಬಯಲಾಗಿತ್ತು
* ಆನ್ ಲೈನ್ ನಲ್ಲಿ ನೋಡಿ ಕೆಲಸ ಮಾಡಿದ್ದ
ನಾಗಪುರ(ಜೂ. 13) ಇದು ಯಾವ ಸಿನಿಮಾ ದೃಶ್ಯವಲ್ಲ. ಇದ್ದಕ್ಕಿದ್ದಂತೆ ಪೊಲೀಸ್ ಸ್ಟೇಶನ್ ಗೆ ಬ್ಯಾಗ್ ಹಿಡಿದು ವ್ಯಕ್ತಿಯೊಬ್ಬ ಬಂದಿದ್ದಾನೆ. ಬಂದವನೆ ಈ ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದಿದ್ದಾನೆ.
ಪೊಲೀಸ್ ಠಾಣಗೆ ಬಂದ 25 ವರ್ಷದ ರಾಹುಲ್ ಪಾಗಡೆಯನ್ನು ನಂತರ ಪ್ರಶ್ನೆ ಮಾಡಲಾಗಿದೆ. ಆನ್ ಲೈನ್ ನಲ್ಲಿ ನೋಡಿಕೊಂಡು ಪೆಟ್ರೋಲ್ ಬಾಟಲ್ ಮತ್ತು ಬ್ಯಾಟರಿ ಉಪಯೋಗಿಸಿ ಬಾಂಬ್ ತಯಾರಿಸಿದ್ದೇನೆ ಎಂದು ಹೇಳಿದ್ದಾನೆ.
ನಕಲಿ ಬಾಂಬ್‌ನೊಂದಿಗೆ ಮೆಡಿಕಲ್ ಶಾಪ್ ಗೆ ಎಂಟ್ಟಿ ಕೊಟ್ಟು ಇಟ್ಟ ಬೇಡಿಕೆ
ಯಾರಿಗೂ ಹಾನಿ ಮಾಡಲು ಅಥವಾ ಸ್ಫೋಟ ಮಾಡಲು ಇದನ್ನು ಆತ ತಯಾರು ಮಾಡಿರಲಿಲ್ಲ ಎನ್ನುವುದನ್ನು ತನಿಖೆ ನಡೆಸಿದ ಅಧಿಕಾರಿಗಳು ಹೇಳಿದ್ದಾರೆ. ಸಲೂನ್ ಒಂದರಲ್ಲಿ ಕೆಲಸ ಮಾಡುವ ರಾಹುಲ್ ಬಾಡಿಗೆ ಮನೆಯಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ.
ಮೊದಲು ಈ ಬ್ಯಾಗ್ ನನಗೆ ಕೆಡಿಕೆ ಕಾಲೇಜಿನ ಬಳಿ ಸಿಕ್ಕಿತು. ಇದರಲ್ಲಿ ಬಾಂಬ್ ಇದೆ ಎಂದಿದ್ದ. ನಂತರ ವಿಚಾರಣೆ ಮಾಡಿದಾಗ ತಾನೇ ತಯಾರಿಸಿದ್ದು ಎಂಬುದನ್ನು ಒಪ್ಪಿಕೊಂಡಿದ್ದಾನೆ. ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.