ಭೋಪಾಳ್(ಫೆ.25): ಯುವಕನೊಬ್ಬ ಗರ್ಲ್‌ಫ್ರೆಂಡ್‌ಗಾಗಿ ತನ್ನ ಸ್ನೇಹಿತನ್ನೇ ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ಲಭ್ಯವಾದ ಮಾಹಿತಿ ಅನ್ವಯ ವ್ಯಕ್ತಿಯೊಬ್ಬ ರಾತ್ರಿ ವೇಳೆ ತನ್ನ ಜೊತೆಗಾರರ ಸಹಾಯದಿಂದ ನಡುರಸ್ತೆಯಲ್ಲೇ ತನ್ನ ಗೆಳೆಯನನ್ನು ಕೊಂದಿದ್ದಾನೆ. ಇನ್ನು ಈ ಸಂದರ್ಭದಲ್ಲಿ ಆತ ಮದ್ಯದ ನಶೆಯಲ್ಲಿ ತೇಲಾಡುತ್ತಿದ್ದ ಎಂದೂ ವರದಿಗಳು ಉಲ್ಲೇಖಿಸಿವೆ. ಇನ್ನು ರಸ್ತೆಯಲ್ಲಿ ನಡೆದಾಡುತ್ತಿದ್ದವರು ಈ ಘಟನೆಯನ್ನು ನೊಡಿದ್ದಾರೆ. ಇವರಲ್ಲಿ ಕೆಲವರು ಇದನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಆದರೆ ಸಾಯುತ್ತಿದ್ದವನನ್ನು ಕಾಪಾಡುವ ಧೈರ್ಯ ಮಾತ್ರ ಯಾರಿಗೂ ಬಂದಿಲ್ಲ. ಈ ಘಟನೆ ಮಧ್ಯಪ್ರದೇಶದ ಗೌತಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನದೀಂ ಬಚ್ಚಾ ಹಾಗೂ ಈತನ ಜೊತೆಗಾರ ಫೈಜಾನ್ ಸೈಯ್ಯದ್ ಸೇರಿ ರಾತ್ರಿ ವೇಳೆ ಶಾದಾಬ್‌ನನ್ನು ಹಿಡಿದಿದ್ದಾರೆ. ಇದಾಧ ಬಳಿಕ ನದೀಂ ತನ್ನ ಗೆಳೆಯ ಶಾದಾಬ್‌ನ ಹೊಟ್ಟೆಗೆ ಚೂರಿಯಿಂದ ಇರಿದಿದ್ದಾನೆ. ಬಳಿಕ ಕತ್ತು ಹಿಸುಕಿದ್ದಾನೆ. ಬಳಿಕ ಮತ್ತೊಮ್ಮೆ ಚಾಕುವಿನಿಂದ ಇರಿದು ಅಲ್ಲಿಂದ ಪರಾರಿಯಾಗಿದ್ದಾರೆ.

ರಕ್ಷಿಸಲು ಬಾರದ ಸಾರ್ವಜನಿಕರು

ಇನ್ನು ಈ ಕೊಲೆ ನಡೆಯುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಜನರು ಹಾಗೂ ವಾಹನಗಳು ಓಡಾಡುತ್ತಿದ್ದರೂ, ಯಾರೊಬ್ಬರೂ ಶಾದಾಬ್ ಸಹಾಯಕ್ಕೆ ಧಾವಿಸಿಲ್ಲ. ಇನ್ನು ಸಾದಾಬ್‌ನನ್ನು ಕೊಂದ ನದೀಂ ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆಂದು ಕಲ ವರದಿಗಳು ಉಲ್ಲೇಖಿಸಿದರೆ, ಇನ್ನು ಕೆಲವು ಪೊಲೀಸರೇ ಆತನನ್ನು ಸುತ್ತುವರೆದು ಬಂಧಿಸಿದ್ದಾರೆಂದು ಉಲ್ಲೇಖಿಸಿವೆ.

ಇನ್ನು ಮೃತ ವ್ಯಕ್ತಿಯೂ ಗೂಂಡಾಗಿರಿ ಮಾಡಿಕೊಂಡಿದ್ದ ಎಂಬುವುದು ಪೊಲೀಸರ ಮಾತಾಗಿದೆ. ಸದ್ಯ ಈ ಕೊಲೆಯಲ್ಲಿ ಭಾಗಿಯಾಗಿದ್ದ ನದೀಂನ ಇನ್ನಿಬ್ಬರು ಜೊತೆಗಾರರು ತಲೆಮತರೆಸಿಕೊಂಡಿದ್ದಾರೆ.