ಜೂನ್ 30ರಂದು ನಡೆದ ಘಟನೆ ಕುರಿತು ಇಬ್ಬರು ಮಹಿಳೆಯರು ಸೇರಿದಂತೆ 6 ಜನರನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿಗಾಗಿ ಬಲೆ ಬೀಸಲಾಗಿದೆ. ಮತ್ತೊಂದೆಡೆ ಅರಣ್ಯಾಧಿಕಾರಿಗಳು, ಆರೋಪಿಗಳು ಒತ್ತುವರಿ ಮಾಡಿಕೊಂಡಿದ್ದ ಅಕ್ರಮ ಅರಣ್ಯ ಭೂಮಿಯನ್ನು ತೆರವುಗೊಳಿಸಿ, ಅಲ್ಲಿ ಅವರು ನಿರ್ಮಿಸಿದ್ದ ಮನೆಯನ್ನು ಧ್ವಂಸ ಮಾಡಿದ್ದಾರೆ.
ಭೋಪಾಲ್ (ಜುಲೈ 8, 2023): ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದರು ಎಂಬ ಆರೋಪ ಮಾಡಿ ಇಬ್ಬರು ಯುವಕರ ಮುಖಕ್ಕೆ ಮಸಿ ಬಳಿದು, ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ, ಅವರಿಗೆ ಮಲ ತಿನ್ನಿಸಿ ಮೆರವಣಿಗೆ ಮಾಡಿದ ಹೇಯ ಘಟನೆಯೊಂದು ಮಧ್ಯಪ್ರದೇಶದ ಶಿವಗಿರಿಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆಯ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಅದಕ್ಕಿಂತ ಹೀನ ಪ್ರಕರಣ ಬೆಳಕಿಗೆ ಬಂದಿದೆ.
ಜೂನ್ 30ರಂದು ನಡೆದ ಘಟನೆ ಕುರಿತು ಇಬ್ಬರು ಮಹಿಳೆಯರು ಸೇರಿದಂತೆ 6 ಜನರನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿಗಾಗಿ ಬಲೆ ಬೀಸಲಾಗಿದೆ. ಮತ್ತೊಂದೆಡೆ ಅರಣ್ಯಾಧಿಕಾರಿಗಳು, ಆರೋಪಿಗಳು ಒತ್ತುವರಿ ಮಾಡಿಕೊಂಡಿದ್ದ ಅಕ್ರಮ ಅರಣ್ಯ ಭೂಮಿಯನ್ನು ತೆರವುಗೊಳಿಸಿ, ಅಲ್ಲಿ ಅವರು ನಿರ್ಮಿಸಿದ್ದ ಮನೆಯನ್ನು ಧ್ವಂಸ ಮಾಡಿದ್ದಾರೆ.
ಇದನ್ನು ಓದಿ: ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಬಿಜೆಪಿ ನಾಯಕ: ಕಾಲು ತೊಳೆದು ಸನ್ಮಾನ ಮಾಡಿದ ಮಧ್ಯ ಪ್ರದೇಶ ಸಿಎಂ
ಹೀನ ಕೃತ್ಯ:
ಜಾಟವ್ ಮತ್ತು ಕೇವತ್ ಎಂಬ ಹಿಂದುಳಿದ ಸಮದಾಯಕ್ಕೆ ಸೇರಿದ ಇಬ್ಬರು ಯುವಕರು, ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ಸ್ಥಳೀಯ ಅಲ್ಪಸಂಖ್ಯಾತ ಸಮುದಾಯದ ಕುಟುಂಬವೊಂದು ಆರೋಪಿಗಳ ಮೇಲೆ ಜೂನ್ 30 ರಂದು ಹಲ್ಲೆ ಮಾಡಿದೆ. ಬಳಿಕ ಇಬ್ಬರ ಮುಖಕ್ಕೆ ಮಸಿ ಬಳಿದು, ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ, ಅವರಿಗೆ ಮಲ ತಿನ್ನಿಸಿ ಮೆರವಣಿಗೆ ಮಾಡಿದೆ. ಘಟನೆ ಶಿವಗಿರಿಯ ಬಳಿಕ ನರ್ವಾರ್ ಪ್ರದೇಶದ ವರ್ಖಾಡಿ ಎಂಬಲ್ಲಿ ನಡೆದಿದೆ. ಸಂತ್ರಸ್ತರ ಸೋದರ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಯುವಕರು ಲೈಂಗಿಕ ಕಿರುಕುಳ ನೀಡಿದ ಆರೋಪ ಸುಳ್ಳು. ಅವರಿಬ್ಬರೂ ಯುವತಿಯರಿಗೆ ಕರೆ ಮಾಡಿದ್ದರು ಎಂಬುದು ತಿಳಿದುಬಂದಿದೆ. ಜೊತೆಗೆ ಈ ದಾಳಿಗೆ ಜಮೀನು ವಿವಾದವೇ ಮೂಲ ಕಾರಣ ಎಂದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹೀನ ಕೃತ್ಯ ಎಸಗಿದ್ದ ಇಬ್ಬರು ಮಹಿಳೆಯರು ಸೇರಿದಂತೆ 6 ಜನರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಪತ್ನಿ ಶವ 3 ದಿನ ಫ್ರೀಜರ್‌ನಲ್ಲಿಟ್ಟ ಪಾಪಿ ಪತಿ: ಗಂಡನಿಂದ್ಲೇ ಕೊಲೆ ಎಂದು ಮಹಿಳೆ ಕುಟುಂಬಸ್ಥರ ಆರೋಪ
ಈ ನಡುವೆ ಘಟನೆಯನ್ನು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ‘ಇದೊಂದು ಮಾನವೀಯತೆಯನ್ನು ಅವಮಾನಿಸುವ ತಾಲಿಬಾನ್ ಕೃತ್ಯ’ ಎಂದು ಖಂಡಿಸಿದ್ದಾರೆ. ಜೊತೆಗೆ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸಲಾಗಿದೆ ಮತ್ತು ಅವರು ನಿರ್ಮಿಸಿದ್ದ ಅಕ್ರಮ ಕಟ್ಟಡಗಳನ್ನು ಧ್ವಂಸಗೊಳಿಸಲು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಪ್ರಕರಣ ಮುಚ್ಚಿ ಹಾಕಲು ಕಾಂಗ್ರೆಸ್ ನಾಯಕರು ಸ್ಥಳೀಯ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು ಎಂದೂ ನರೋತ್ತಮ್ ಮಿಶ್ರಾ ಆರೋಪಿಸಿದ್ದಾರೆ.
ಇದನ್ನೂ ಓದಿ: ಸಮ್ಮತಿ ಸೆಕ್ಸ್‌ಗೆ ಒಪ್ಪಿಗೆ ವಯಸ್ಸು 16 ಆಗಿರ್ಬೇಕು: 17 ವರ್ಷದ ಹುಡುಗನ ವಿರುದ್ಧ ಎಫ್‌ಐಆರ್ ರದ್ದು ಮಾಡಿದ ಹೈಕೋರ್ಟ್
