Asianet Suvarna News Asianet Suvarna News

ಲಕ್ನೋ ಮೂಲದ ಟೆಕ್ಕಿ ಬೆಂಗಳೂರಿನಲ್ಲಿ ನಿಗೂಢ ಕಣ್ಮರೆ, ಹುಡುಕಿ ಕೊಡುವಂತೆ ಪತ್ನಿ ಪೋಸ್ಟರ್

ಬೆಂಗಳೂರಿಗೆ ಕೆಲಸ ಅರಸಿ ಬಂದು ನೆಲೆಯೂರಿದ್ದ ಲಕ್ನೋ ಮೂಲದ ಟೆಕ್ಕಿಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದು, ಎಂಟು ದಿನ ಕಳೆದರೂ ಪತ್ತೆಯಾಗಿಲ್ಲ.

lucknow based techie goes missing in bengaluru wife  desperately searching for her  husband gow
Author
First Published Aug 12, 2024, 8:30 PM IST | Last Updated Aug 12, 2024, 8:30 PM IST

ಬೆಂಗಳೂರು (ಆ.12): ಸಿಲಿಕಾನ್ ಸಿಟಿ ಬೆಂಗಳೂರಿಗೆ ಕೆಲಸ ಅರಸಿ ಬಂದು ನೆಲೆಯೂರಿದ್ದ ಲಕ್ನೋ ಮೂಲದ ಟೆಕ್ಕಿಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದು, ಎಂಟು ದಿನ ಕಳೆದರೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಕಾಣೆಯಾದ ಪತಿಯನ್ನು ಹುಡುಕಿ ಕೊಡುವಂತೆ ಪತ್ನಿ ಕಣ್ಣೀರು ಹಾಕುತ್ತಿದ್ದಾಳೆ

ವಿಪಿನ್ (37) ಕಾಣೆಯಾದ ಲಕ್ನೋ ಮೂಲದ ಟೆಕ್ಕಿಯಾಗಿದ್ದು, ಮೂರು ವರ್ಷದಿಂದ ಬೆಂಗಳೂರಿನಲ್ಲಿ ಪತ್ನಿ ಜೊತೆ ವಾಸವಿದ್ದ. ಮಾನ್ಯತಾ ಟೆಕ್ ಪಾರ್ಕ್ ನ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ವೃತ್ತಿಯಲ್ಲಿದ್ದ, ಪತಿ ವಿಪಿನ್ ಕಾಣೆಯಾದ ಹಿನ್ನೆಲೆ ಪತ್ನಿ ಹಾಗೂ ಇಬ್ಬರು ಮಕ್ಕಳು ಕಂಗಾಲಾಗಿದ್ದಾರೆ.

ವಯನಾಡು ಭೂಕುಸಿತದ ಬಳಿಕ ಎಚ್ಚೆತ್ತ ಕರ್ನಾಟಕ, ಕುದುರೆಮುಖದಲ್ಲಿ ಒಂದು ಅಕ್ರಮ ರೆಸಾರ್ಟ್‌ ಪತ್ತೆ!

ಆಗಸ್ಟ್ 4ರಂದು ಮಧ್ಯಾಹ್ನ 12:44ರ ಸುಮಾರಿಗೆ  ಮನೆಯಿಂದ ಹೊರಟ ವಿಪಿನ್    ಮರಳಿ ಮನೆಗೆ ಬಂದಿಲ್ಲ. ಕೈನಲ್ಲಿ ಟಿ ಶರ್ಟ್ ಹಿಡಿದು ಮನೆಯಿಂದ ಹೊರ ನಡೆದು ತನ್ನ ಕವಾಸಕಿ ಬೈಕ್ ನಲ್ಲಿ ತೆರಳಿದ್ದು, ಮರಳಿ ಮನೆಗೆ ಬಂದಿಲ್ಲ.

ಮನೆಯಿಂದ ಹೊರಟ ಕೆಲ ನಿಮಿಷಗಳ ಬಳಿಕ ಅಕೌಂಟ್‌ನಿಂ ಹಣ ಡ್ರಾ ಆಗಿದೆ.  1ಲಕ್ಷ 80 ಸಾವಿರ ಹಣ ಡ್ರಾ ಮಾಡಿದ್ದಾನೆ. ಇದಾದ ನಂತರ ವಿಪಿನ್ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ. ಕಾಣೆಯಾದ ಪತಿಯನ್ನು ಹುಡುಕಿಕೊಡುವಂತೆ ಕೋಡಿಗೆಹಳ್ಳಿ ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದಾರೆ. ದೂರು ನೀಡಿದರೂ ಪೊಲೀಸರು ಬೇಜವಾಬ್ದಾರಿ ತೋರಿದ್ದಾರೆಂಬ ಆರೋಪ ಕೇಳಿಬಂದಿದೆ.

ಅಪರೂಪದ ಹೊಯ್ಸಳರ ದೇಗುಲ ಶಿಥಿಲ, ಜೀರ್ಣೋದ್ಧಾರಕ್ಕೆ 85 ಲಕ್ಷ ಕೊಟ್ರೂ ಕೆಲಸ ಮಾಡದ ಅಧಿಕಾರಿಗಳು!

ಪತಿ ಕಾಣೆಯಾಗಿ 7 ದಿನ ಕಳೆದರೂ ಪೊಲೀಸರಿಂದ ಯಾವುದೇ ಹುಡುಕುವ ಪ್ರಯತ್ನ ಇಲ್ಲ ಎಂದು ಆರೋಪಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪತಿ ಕಾಣೆಯಾದ ಬಗ್ಗೆ ಮಾಹಿತಿ ಹಂಚಿಕೊಂಡ ಪತ್ನಿ ನಗರ ಪೊಲೀಸ್ ಆಯುಕ್ತರಿಗೆ ಸಹ ಈ ಬಗ್ಗೆ ಟ್ವಿಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.

ಫೇಸ್ ಬುಕ್ ಲೈವ್ ಬಂದ ಪತ್ನಿ: ಕಾಣೆಯಾದ ಟೆಕ್ಕಿ ವಿಪಿನ್ ಗುಪ್ತಾ ಪತ್ನಿ ಫೇಸ್ ಬುಕ್ ಲೈವ್ ಬಂದು ಹಲವು ವಿಚಾರಗಳನ್ನು ಉಲ್ಲೇಖ ಮಾಡಿದ್ದಾರೆ. ಜೊತೆಗೆ  ಪತಿಯನ್ನು ಹುಡುಕಿ ಕೊಡುವಂತೆ ಪೊಲೀಸರಿಗೆ  ಟೆಕ್ಕಿ ಪತ್ನಿ ಶ್ರೀಪರ್ಣ ದುತ್ತ ಮನವಿ ಮಾಡಿಕೊಂಡಿದ್ದಾರೆ.

ನನ್ನ ಪತಿ ಯಾವತ್ತು ಕುಡಿದಿಲ್ಲ, ಗ್ಯಾಂಬಲಿಂಗ್ ಆಡಿಲ್ಲ. ನನ್ನ ಪತಿಗೆ ಯಾವುದೇ ಚಟವಿಲ್ಲ. ನಮಗೆ ಯಾವುದೇ ಆರ್ಥಿಕ ಸಮಸ್ಯೆಯೂ ಇಲ್ಲ. ಕುಟುಂಬ ಖುಷಿ ಖುಷಿಯಾಗಿ ಇತ್ತು. ನನ್ನ ಪತಿಗೆ ಡಿಪ್ರೆಷನ್ ಸಹ ಇಲ್ಲ. ಮೊಬೈಲ್ ಡೀಲರ್ ಬಗ್ಗೆ ಅನುಮಾನ ಇದೆ. ನನಗೆ ಗಿಫ್ಟ್ ಆಗಿ ಮೊಬೈಲ್ ನೀಡಲು ಸಿದ್ಧತೆ ಮಾಡಿದ್ದರು. ಅದರ ಮೊತ್ತ ಸಹ ಡ್ರಾ ಮಾಡಿದ ಹಣಕ್ಕೆ ಮ್ಯಾಚ್ ಆಗುತ್ತಿದೆ. ಆದರೆ ಅದನ್ನು ಹೊರತು ಪಡಿಸಿ ಬೇರೆ ಏನಾಗಿದೆ ಎನ್ನುವುದು ಗೊತ್ತಾಗುತ್ತಿಲ್ಲ. ನನ್ನ ಪತಿ ಯಾವತ್ತು ಜಗಳ ಆಡಿದವರಲ್ಲ. ಸಣ್ಣಕುಟುಂಬವಾದರೂ ಖುಷಿಯಾಗಿದ್ದೆವು ಎಂದು ಅಳಲು ತೋಡಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios