ಪಂಜಾಬ್‌ನಲ್ಲಿ ನಾಲ್ವರು ಕಾಮುಕಿಯರಿಂದ ಪುರುಷನ ಮೇಲೆ ಅತ್ಯಾಚಾರ..!

ತನ್ನ ಕಣ್ಣಿಗೆ ಕೆಮಿಕಲ್‌ ಸ್ಪ್ರೇ ಮಾಡಿ, ತನ್ನನ್ನು ಬಿಳಿಯ ಕಾರಿನಲ್ಲಿ ಕಿಡ್ನ್ಯಾಪ್‌ ಮಾಡಲಾಯಿತು. ಹಾಗೂ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಲವಂತವಾಗಿ ಆಲ್ಕೋಹಾಲ್‌ ಕುಡಿಸಿ ಅತ್ಯಾಚಾರ ಮಾಡಲಾಯಿತು ಎಂದು ಪಂಜಾಬ್‌ ಕಾರ್ಮಿಕ ಸ್ಥಳೀಯ ಮಾಧ್ಯಮಕ್ಕೆ ಹೇಳಿದ್ದಾನೆ. 

4 girls kidnapped raped and dumped me punjab labourers shocking claim police launch probe ash

ಪುರುಷರಿಂದ ಯುವತಿಯರ ಮೇಲೆ ಅತ್ಯಾಚಾರ (Rape), ಹತ್ಯೆಯಂತ (Murder) ಪ್ರಕರಣಗಳ ಬಗ್ಗೆ ಇತ್ತೀಚೆಗೆ ಹೆಚ್ಚಿನ ವರದಿಗಳು ಬಂದಿವೆ. ಆದರೆ, ಈ ಪ್ರಕರಣದಲ್ಲಿ ಮಹಿಳೆಯರಿಂದಲೇ ಪುರುಷನ ಅಪಹರಣ(Kidnap) ಹಾಗೂ ಅತ್ಯಾಚಾರವಾಗಿದೆ.  ಹೌದು, ಪಂಜಾಬ್‌ನಲ್ಲಿ (Punjab) ಇಂತಹದ್ದೊಂದು ಅಪರೂಪದ ಕೇಸ್‌ ದಾಖಲಾಗಿದೆ. ಪಂಜಾಬ್‌ನ ಜಲಂಧರ್‌ (Jalandhar) ಮೂಲದ ವ್ಯಕ್ತಿಯೊಬ್ಬನನ್ನು ನಾಲ್ವರು ಮಹಿಳೆಯರು ಅಪಹರಿಸಿ ಅತ್ಯಾಚಾರ ಮಾಡಿರುವ ಬಗ್ಗೆ ವ್ಯಕ್ತಿ ಹೇಳಿಕೊಂಡಿದ್ದಾನೆ. ಈ ಸಂಬಂಧ ಪಂಜಾಬ್‌ ಪೊಲೀಸರು ಸ್ವಯಂಪ್ರೇರಿತ ಪ್ರಕರಣ (Suomoto Case) ದಾಖಲಿಸಿಕೊಂಡಿದ್ದಾರೆ. 

ತನ್ನ ಕಣ್ಣಿಗೆ ಕೆಮಿಕಲ್‌ ಸ್ಪ್ರೇ ಮಾಡಿ, ತನ್ನನ್ನು ಬಿಳಿಯ ಕಾರಿನಲ್ಲಿ ಕಿಡ್ನ್ಯಾಪ್‌ ಮಾಡಲಾಯಿತು. ಹಾಗೂ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಲವಂತವಾಗಿ ಆಲ್ಕೋಹಾಲ್‌ ಕುಡಿಸಿ ಅತ್ಯಾಚಾರ ಮಾಡಲಾಯಿತು ಎಂದು ಜಲಂಧರ್‌ ಮೂಲದ ಕಾರ್ಮಿಕ ಸ್ಥಳೀಯ ಮಾಧ್ಯಮವೊಂದಕ್ಕೆ ಹೇಳಿದ್ದಾನೆ. ತನ್ನ ಮೇಲೆ ಅತ್ಯಾಚಾರವೆಸಗಿದ ಎಲ್ಲ ಮಹಿಳೆಯರೂ 20 ರ ಆಸುಪಾಸಿನವರು ಎಂದೂ ಆತ ಹೇಳಿದ್ದಾನೆ. ಪಂಜಾಬ್‌ ಸ್ಥಳೀಯ ಮಾಧ್ಯಮದಲ್ಲಿ ಈ ಬಗ್ಗೆ ವರದಿಗಳು ಕೇಳಿಬಂದ ನಂತರ ಪಂಜಾಬ್‌ ಪೊಲೀಸ್‌ ಗುಪ್ತಚರ ವಿಭಾಗವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.   

ಇದನ್ನು ಓದಿ: Kerala Crime: ಕಾರಿನಲ್ಲೇ 19 ವರ್ಷದ ಮಾಡೆಲ್‌ ಮೇಲೆ ಗ್ಯಾಂಗ್‌ ರೇಪ್: ಮಹಿಳೆ ಸೇರಿ ನಾಲ್ವರ ವಶಕ್ಕೆ

ಅತ್ಯಾಚಾರವೆಸಗಿದ ಬಳಿಕ ತನ್ನನ್ನು ನಿರ್ಜನ ಪ್ರದೇಶವೊಂದರಲ್ಲಿ ಬಿಡಲಾಯಿತು ಎಂದೂ ಆತ ಹೇಳಿಕೊಂಡಿದ್ದಾರೆ. ಆದರೆ, ಈ ವ್ಯಕ್ತಿ ಈವರೆಗೆ ಪೊಲೀಸರಿಗೆ ದೂರು ನೀಡಿಲ್ಲ ಎಂದು ತಿಳಿದುಬಂದಿದೆ. ತನಗೆ ಮದುವೆಯಾಗಿ ಮಕ್ಕಳಿದೆ. ತಾನು ಚರ್ಮದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಅಲ್ಲದೆ, ಲೈಂಗಿಕವಾಗಿ ತನ್ನನ್ನು ಬಳಸಿಕೊಳ್ಳಲೆಂದೇ ಅವರು ಕಿಡ್ನ್ಯಾಪ್‌ ಮಾಡಿದರು ಎಂದೂ ಆತ ಹೇಳಿಕೊಂಡಿದ್ದಾನೆ.

ಅತ್ಯಾಚಾರದ ವಿವರ ಹೀಗಿದೆ..
ಸೋಮವಾರ ತಾನು ಮನೆಗೆ ಹೋಗುತ್ತಿದ್ದಾಗ ಬಿಳಿಯ ಕಾರಿನಲ್ಲಿದ್ದ ನಾಲ್ವರು ಮಹಿಳೆಯರು ತನ್ನನ್ನು ಜಲಂಧರ್‌ನ ಕಪುರ್ಥಲಾ ರಸ್ತೆಯಲ್ಲಿ ನಿಲ್ಲಿಸಿದರು. ಬಳಿಕ, ವಾಹನ ಓಡಿಸುತ್ತಿದ್ದ ಮಹಿಳೆ, ಚೀಟಿಯಲ್ಲಿ ಬರೆದಿದ್ದ ಅಡ್ರೆಸ್‌ ಕೇಳಿದರು. ನಾನು ಅದನ್ನು ಓದುತ್ತಿದ್ದಾಗ ನನ್ನ ಕಣ್ಣಿಗೆ ಯಾವುದೋ ಕೆಮಿಕಲ್‌ ಸ್ಪ್ರೇ ಮಾಡಿದರು. ಇದರಿಂದ ತನ್ನ ಕಣ್ಣು ಕಾಣದಂತಾಯಿತು ಹಾಗೂ ತನಗೆ ತಲೆ ಸುತ್ತು ಬಂತು. ನಂತರ, ನನಗೆ ಪ್ರಜ್ಞೆ ಬಂದಾಗ ನಾನು ಕಾರಿನಲ್ಲಿದ್ದೆ, ನನ್ನ ಕಣ್ಣಿಗೆ ಹಾಗೂ ಕೈಗಳಿಗೆ ಕಟ್ಟಲಾಗಿತ್ತು. ನಂತರ, ಅವರು ನನಗೆ ಮದ್ಯ ಕುಡಿಸಿ ಅರಣ್ಯ ಪ್ರದೇಶವೊಂದಕ್ಕೆ ಕರೆದುಕೊಂಡು ಹೋದರು ಎಂದು ಆತ ಹೇಳಿದ್ದಾನೆ. 

ಇದನ್ನೂ ಓದಿ: ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆ: ಎನರ್ಜಿ ಮಾತ್ರೆ ತೆಗೆದುಕೊಂಡಿದ್ದ ಆರೋಪಿ..!

ಎಲ್ಲ ಮಹಿಳೆಯರೂ ಮದ್ಯಪಾನ ಮಾಡುತ್ತಿದ್ದರು, ತನಗೂ ಸಹ ಬಲವಂತವಾಗಿ ಕುಡಿಸಿ, ನಾಲ್ವರು ಮಹಿಳೆಯರೂ ತನಗೆ ಅತ್ಯಾಚಾರ ಮಾಡಿದರು. ಬಳಿಕ ನಸುಕಿನ ಜಾವ 3 ಗಂಟೆ ವೇಳೆಗೆ ತನಗೆ ಕಣ್ಣಿಗೆ ಕಟ್ಟಿ ಕೈಯನ್ನು ಕಟ್ಟಿ ಹಾಕಿಯೇ ತನ್ನನ್ನು ಬಿಡಲಾಯಿತು ಎಂದೂ ಆತ ಮಾಧ್ಯಮವೊಂದಕ್ಕೆ ಹೇಳಿದ್ದಾನೆ.

ಆ ಮಹಿಳೆಯರು ಇಂಗ್ಲೀಷ್‌ನಲ್ಲಿ ಮಾತನಾಡಿಕೊಳ್ಳುತ್ತಿದ್ದರು. ತನ್ನ ಜತೆಗೆ ಮಾತ್ರ ಪಂಜಾಬಿ ಭಾಷೆಯಲ್ಲಿ ಮಾತನಾಡಿದರು. ಎಲ್ಲರೂ ಶ್ರೀಮಂತರಿದ್ದರು ಎಂದೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಹೇಳಿಕೊಂಡಿದ್ದಾನೆ. 

ಇದನ್ನೂ ಓದಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಗಾರ್ಡ್ ಮೇಲೆ ಗಾಡಿ ಹತ್ತಿಸಿದ ಅತ್ಯಾಚಾರ ಆರೋಪಿ

Latest Videos
Follow Us:
Download App:
  • android
  • ios