ಬೆಂಗಳೂರು (ಜ.  11)   ಉತ್ತರ ಪ್ರದೇಶದಿಂದ ದಾಖಲಾಗುತ್ತಿದ್ದ ಲವ್ ಜಿಹಾದ್ ಪ್ರಕರಣ ಬೆಂಗಳೂರಿನಲ್ಲಿಯೂ ಕಾಣಿಸಿಕೊಂಡಿದೆ. ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಿಂದ ಪ್ರಕರಣ ವರದಿಯಾಗಿದೆ.

ಲವ್ ಜಿಹಾದ್  ಆರೋಪದ ಮೇಲೆ ಶಬ್ಬೀರ್  ಎಂಬಾತನ್ನು ಬಂಧಿಸಲಾಗಿದೆ. ಪ್ರಮುಖ ಅರೋಪಿ ಮಹಮೊದ್ ರಿಲ್ವಾನ್  ಪರಾರಿಯಾಗಿದ್ದು ಬಲೆ ಬೀಸಲಾಗಿದೆ.

2018 ರಿಂದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ಅರೋಪಿ  ಬಳಿಕ 2020 ನವೆಂಬರ್ ರಲ್ಲಿ ಮದುವೆಯಾಗಿದ್ದಾನೆ.  ಇಸ್ಲಾಂ ಧರ್ಮಕ್ಕೆ ಸೇರಿಕೊ ಎಂದು ಮಹಮದ್ ರಿಲ್ವಾನ್  ಯುವತಿಯನ್ನು ಪೀಡಿಸುತ್ತಿದ್ದ.

ಮದುವೆಗೆ ಮುನ್ನ ರಾಹುಲ್..ಮದುವೆ ನಂತರ ತೌಫೀಕ್

ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದ ಅರೋಪಿ  ಮಹಮದ್ ರಿಲ್ವಾನ್  ಬಳಿಕ ದುಬೈ ನಲ್ಲಿ ಕೆಲಸ ಕೊಡಿಸುತ್ತೆನೆ ಎಂದು ಹೇಳಿದ್ದ ಹಣೆಯಲ್ಲಿರೊ ಕುಂಕುಮ ತೆಗೆದು ಇಸ್ಲಾಂ ಧರ್ಮಕ್ಕೆ ಸೇರುವಂತೆ ಒತ್ತಾಯ ಮಾಡುತ್ತಿದ್ದ.  ಶಬ್ಬಿರ್ ಮತ್ತು ರಿಲ್ವಾನ್ ಅಣ್ಣತಮ್ಮಂದಿರು. ಈ ಇಬ್ಬರು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ.