ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಟ್ರ್ಯಾಪ್‌ಗೆ ಫುಡ್ ಇನ್ಸ್‌ಪೆಕ್ಟರ್
ಲಂಚ ಪಡೆಯುತ್ತಿದ್ದ ಅಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ಸಿನಿಮಾ ಸ್ಟೈಲ್‍ನಲ್ಲಿ 15 ಕಿ.ಮೀ ಚೇಸಿಂಗ್ ಮಾಡಿ ಹಿಡಿದ ಘಟನೆ ನೆಲಮಂಗಲ ಬಳಿಯ ಸೊಂಡೇಕೊಪ್ಪದಲ್ಲಿ ನಡೆದಿದೆ.
ಬೆಂಗಳೂರು (ಜು.15): ಲಂಚ ಪಡೆಯುತ್ತಿದ್ದ ಅಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ಸಿನಿಮಾ ಸ್ಟೈಲ್‍ನಲ್ಲಿ 15 ಕಿ.ಮೀ ಚೇಸಿಂಗ್ ಮಾಡಿ ಹಿಡಿದ ಘಟನೆ ನೆಲಮಂಗಲ ಬಳಿಯ ಸೊಂಡೇಕೊಪ್ಪದಲ್ಲಿ ನಡೆದಿದೆ. ರಂಗದಾಮಯ್ಯ ಎಂಬುವವರು ಕೆ.ಜಿ ಸರ್ಕಲ್ ಬಳಿಯಿರುವ ತಹಶೀಲ್ದಾರ್ ಆಫೀಸ್‍ನ ಫುಡ್ ಇನ್‍ಸ್ಪೆಕ್ಟರ್ ಆಗಿರುವ ಮಹಂತೇಗೌಡ ಬಳಿ ವ್ಯಾಪರದ ಪರವಾನಗಿ ಮಾಡಿಸಲು ತೆರಳಿದ್ದರು.
ಈ ವೇಳೆ ಅಧಿಕಾರಿ 1 ಲಕ್ಷ ರೂ. ಹಣವನ್ನು ಲಂಚವನ್ನಾಗಿ ಕೇಳಿದ್ದ. 12000 ಮುಂಗಡವಾಗಿ ಹಣ ಪಡೆದಿದ್ದ ಮಹಾಂತೇಶ್, ಮತ್ತೆ 43 ಸಾವಿರ ರೂ. ಹಣವನ್ನು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾನೆ. ಲೋಕಾಯುಕ್ತ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಪಡೆದು ಟ್ರ್ಯಾಪ್ ಮಾಡಿದ್ದಾರೆ. ಹಣ ಪಡೆಯುವ ವೇಳೆ ಟ್ರ್ಯಾಪ್ ಎಂದು ತಿಳಿದು ಪರಾರಿಯಾಗಲು ಮಹಂತೇಗೌಡ ಪ್ರಯತ್ನಿಸಿದಲ್ಲದೇ ಲೋಕಾ ಅಧಿಕಾರಿಗಕಳ ಮೇಲೆ ಕಾರ್ ಹತ್ತಿಸಲು ಯತ್ನಿಸಿದ್ದಾನೆ. ಹಣ ಪಡೆದು ಸುಮಾರು 15 ಕಿ.ಮೀ ತೆರಳಿದ್ದಾನೆ. ಆದರೆ ಬೆನ್ನಟ್ಟಿದ ಲೋಕಾ ಅಧಿಕಾರಿಗಳು ಮಹಂತೇಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಲಗಿದ್ದಲ್ಲಿಯೇ ನಿಗೂಢ ರೀತಿಯಲ್ಲಿ ಪ್ರಾಣಬಿಟ್ಟ ಇಬ್ಬರು ಯುವಕರು
ಲಂಚ ಕೇಳುವವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿ: ಸಾರ್ವಜನಿಕ ಕೆಲಸ ಮಾಡಲು ವಿಳಂಬ ಹಾಗೂ ಲಂಚ ಕೇಳುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುವಂತೆ ಲೋಕಾಯುಕ್ತ ಡಿವೈಎಸ್ಪಿ ಎಸ್.ಕೆ. ಮಾಲತೇಶ್ ಹೇಳಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಸಾರ್ವಜನಿಕರಿಂದ ದೂರು ಸ್ವೀಕರಿಸಿ ಅವರು ಮಾತನಾಡಿದರು. ನಾವು ಇಲ್ಲಿ ಸಭೆ ನಡೆಸುವ ಉದ್ದೇಶ ಸರ್ಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವುದಕ್ಕಿಂತಲೂ ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ, ಬೆಂಗಳೂರು ಮತ್ತಿತರ ದೊಡ್ಡ ನಗರಗಳಲ್ಲಿ ನಿಗದಿತ ನಮೂನೆಗಳಲ್ಲಿ ಸಾರ್ವಜನಿಕರು ನಮಗೆ ದೂರು ಸಲ್ಲಿಸುತ್ತಾರೆ.
ಆದರೆ ಗ್ರಾಮೀಣ ಪ್ರದೇಶದಲ್ಲಿ ಈ ಬಗ್ಗೆ ಯಾವುದೇ ತಿಳುವಳಿಕೆ ಇರುವುದಿಲ್ಲ, ಸಾರ್ವಜನಿಕರು ನೇರವಾಗಿ ಲೋಕಾಯುಕ್ತಕ್ಕೆ ಭೇಟಿ ನೀಡಿ ದೂರು ಸಲ್ಲಿಸುವ ಬದಲು ಆನ್‌ಲೈನ್ ಮೂಲಕವು ಸಲ್ಲಿಸಬಹುದಾಗಿದೆ, ಕೆಲ ಅಧಿಕಾರಿಗಳು ಅನಾವಶ್ಯಕವಾಗಿ ಸಾರ್ವಜನಿಕ ಕೆಲಸ ಮಾಡಲು ಸತಾಯಿಸುತ್ತಿರುವುದು ಕಂಡುಬರುತ್ತಿದೆ, ದಲ್ಲಾಳಿಗಳ ಮೂಲಕ ಹೋದರೆ ಹಣ ಪಡೆದು ಅವರ ಕೆಲಸವಾಗುತ್ತದೆ, ಈ ವ್ಯವಸ್ಥೆ ತಪ್ಪಬೇಕು ಎಂದರೆ ಸಾರ್ವಜನಿಕರು ನಮಗೆ ದೂರು ನೀಡಬೇಕು.
ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅರೆಸ್ಟ್
ಪ್ರತಿ ಕಚೇರಿಗಳಲ್ಲೂ ಕ್ಯಾಶ್ ಡಿಕ್ಲರೇಷನ್ ರಿಜಿಸ್ಟರ್ ನಿರ್ವಹಿಸಿ ಪ್ರತಿದಿನ ಕಚೇರಿಗೆ ಆಗಮಿಸಿದ ತಕ್ಷಣ ತಮ್ಮ ಬಳಿ ಇರುವ ಹಣದ ಬಗ್ಗೆ ರಿಜಿಸ್ಟರ್‌ನಲ್ಲಿ ನಮೂದಿಸಬೇಕು, ಅಧಿಕಾರಿಗಳು ಸರಿಯಾಗಿ ಕಡತ ನಿರ್ವಹಿಸದೆ ವರ್ಗಾವಣೆಗೊಂಡಲ್ಲಿ ನಂತರ ಬಂದ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ, ಗ್ರಾಪಂ ಮತ್ತು ಪಪಂಗಳಲ್ಲಿ ಟ್ಯಾಂಕ್ ಸ್ವಚ್ಛಗೊಳಿಸದೆ ನಕಲಿ ಬಿಲ್ ಸೃಷ್ಟಿಸಿ ಹಣ ಪಡೆಯುವುದು ನಡೆಯುತ್ತಿದೆ, ಇದಕ್ಕೆ ಕಡಿವಾಣ ಹಾಕಬೇಕಿದೆ, ಸ್ವಚ್ಛಗೊಳಿಸುತ್ತಿರುವ ಫೋಟೋ ಮತ್ತು ಸ್ವಚ್ಛಗೊಳಿಸಿದ ವ್ಯಕ್ತಿಯ ಪೂರ್ಣ ವಿವರವನ್ನು ದಾಖಲೆಗಳಲ್ಲಿ ನಮೂದಿಸಬೇಕು ಎಂದರು.