Asianet Suvarna News Asianet Suvarna News

Chitradurga: ಬಾರ್‌ಗೆ ಕನ್ನ ಹಾಕಿ ಎಣ್ಣೆ, ಹಣ ಕದ್ದ ಲೋಕಸಭಾ ಚುನಾವಣಾ ಅಭ್ಯರ್ಥಿ!

ಚಿತ್ರದುರ್ಗ ಜಿಲ್ಲೆ‌ ಮೊಳಕಾಲ್ಮೂರು ತಾಲೂಕಿನ ರಾಯಾಪುರ  ಗ್ರಾಮದ ಬಳಿಯ ಬಾರ್ ಕಳ್ಳತನ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಯಿಂದಲೇ ಈ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

Lok Sabha election candidate stole liquor and money from chitradurga bar gow
Author
First Published Jul 10, 2024, 11:04 AM IST

ರಾಯಾಪುರ (ಜು.10): ಚಿತ್ರದುರ್ಗ ಜಿಲ್ಲೆ‌ ಮೊಳಕಾಲ್ಮೂರು ತಾಲೂಕಿನ ರಾಯಾಪುರ  ಗ್ರಾಮದ ಬಳಿಯ ಬಾರ್ ಕಳ್ಳತನ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಅಭ್ಯರ್ಥಿಯಿಂದಲೇ ಈ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಇವನ ಜೊತೆಗೆ ಗ್ಯಾಂಗ್ ಇದೆ ಎಂದು ತಿಳಿದುಬಂದಿದೆ.

ಎರಡು ತಿಂಗಳ ಹಿಂದೆ ಬಾರ್ ಗೆ ಕನ್ನ ಹಾಕಿ ಹಣ ದೋಚಿ ಎಸ್ಕೇಪ್ ಆಗಿದ್ದರು. ಬಾರ್ ಗೆ ಕನ್ನ ಹಾಕಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ  ಆಗಿತ್ತು. ಆರೋಪಿಗಳ ಬಂಧನಕ್ಕೆ ಮೊಳಕಾಲ್ಮೂರು  ಪೊಲೀಸ ಬಲೆ ಬೀಸಿದ್ದರು.

ಬೆಂಗಳೂರು ಕಾಲೇಜು ಹುಡುಗಿಯರ ಮುಂದೆ ಪ್ಯಾಂಟ್‌ ಜಿಪ್ ತೆಗೆದು ಪ್ರೈವೇಟ್ ಪಾರ್ಟ್ ತೋರಿಸಿದ ಕಾಮುಕನ ವೀಡಿಯೋ!

ಆದರೆ ಅದಕ್ಕೂ ಮುನ್ನ ಚಿಕ್ಕಮಗಳೂರಲ್ಲಿ ಅರೆಸ್ಟ್ ಆಗಿದ್ದಾರೆ. ಚಿಕ್ಕಮಗಳೂರು ಜೈಲಿನಲ್ಲಿದ್ದ 3 ಆರೋಪಿಗಳ ಬಾಡಿ ವಾರೆಂಟ್ ಪಡೆದು ಮೂವರು ಆರೋಪಿಗಳ ವಿಚಾರಣೆ ನಡೆಸಲಾಗಿದೆ. ಚಿಕ್ಕಮಗಳೂರಿನ ರಘುಕುಮಾರ್, ದರ್ಶನ್, ಹಾಸನದ ಜಗದೀಶ್ ಬಂಧಿತರಾಗಿದ್ದರು.

ಹಲವು ವರ್ಷಗಳಿಂದಲೇ ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಳ್ಳತನ, ಜೊತೆಗೆ ವಿವಿಧ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

ದುಬೈನಲ್ಲಿ ವೆಡ್ಡಿಂಗ್ ಆನಿವರ್ಸರಿ ಆಚರಿಸಿಕೊಂಡದ್ದಕ್ಕೆ ದರ್ಶನ್‌ ಜತೆ ಮಾತು ಬಿಟ್ಟಿದ್ದ ಪವಿತ್ರಾ ಗೌಡ!

ಕಳೆದ ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ  ರಘುಕುಮಾರ್  ಸ್ಪರ್ಧಿಸಿದ್ದ, 2337 ಮತಗಳನ್ನು ಪಡೆದಿದ್ದ ರಘುಕುಮಾರ್ ಈಗ ಕಳ್ಳತನ ಕೇಸಲ್ಲಿ ಅಂದರ್ ಆಗಿದ್ದಾನೆ.

Latest Videos
Follow Us:
Download App:
  • android
  • ios