Asianet Suvarna News Asianet Suvarna News

ಶೂಟಿಂಗ್ ಮುಗಿಸಿ ತಡವಾಗಿ ಮನೆಗೆ ಮರಳಿದ ಜೋಡಿ, 7ನೇ ಮಹಡಿಯಿಂದ ಜಿಗಿದು ದುರಂತ ಅಂತ್ಯ!

ಶಾರ್ಟ್ ಮೂವಿ, ರೀಲ್ಸ್ ಸೇರಿದಂತೆ ಕೆಲ ವಿಡಿಯೋಗಳ ಪೋಸ್ಟ್ ಮಾಡುತ್ತಾ  ರೀತಿ ವಿಡಿಯೋಗಳ ಮೂಲಕ ಯೂಟ್ಯೂಬ್ ನಡೆಸುತ್ತಿದ್ದ ಜೋಡಿಯ ದುರಂತ ಅಂತ್ಯವಾಗಿದೆ. ಶೂಟಿಂಗ್ ಮುಗಿಸಿ ತಡವಾಗಿ ಮನೆಗೆ ಬಂದ ಈ ಜೋಡಿ ವಾಗ್ವಾದ ನಡೆಸಿ ಕಿತ್ತಾಡಿಕೊಂಡಿದ್ದಾರೆ. ಇಷ್ಟೇ ನೋಡಿ, 7ನೇ ಮಹಡಿಯಿಂದ ಇಬ್ಬರು ಜಿಗಿದು ಬದುಕು ಅಂತ್ಯಗೊಳಿಸಿದ್ದಾರೆ.
 

Live in relationship Couple ends life after jumping from 7th floor after heated Argument in Haryana ckm
Author
First Published Apr 13, 2024, 8:07 PM IST

ಹರ್ಯಾಣ(ಏ.13) ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ಯುವ ಜೋಡಿ ಬದುಕು ದುರಂತದಲ್ಲಿ ಅಂತ್ಯಗೊಡಿದೆ. ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಈ ಜೋಡಿ ಶೂಟಿಂಗ್ ಮುಗಿಸಿಕೊಂಡು ತಡರಾತ್ರಿ ಮನೆಗೆ ಮರಳಿದ್ದಾರೆ. ಅಪಾರ್ಟ್‌ಮೆಂಟ್‌ನ 7ನೇ ಮಹಡಿಯಲ್ಲಿನ ಮನೆಗೆ ಮರಳಿದ ಈ ಜೋಡಿ ನಡುವೆ ವಾಗ್ವಾದ ನಡೆದಿದೆ. ಈ ಜಗಳ ತಾರಕಕ್ಕೇರಿದೆ. ವಾಗ್ವಾದ, ಕಿತ್ತಾಟಗಳು ಅಂತ್ಯವಾಗಲಿಲ್ಲ, ಬದಲಾಗಿ ಈ ಜೋಡಿ 7ನೇ ಮಹಡಿಯಿಂದ ಜಿಗಿದು ಬದುಕನ್ನೇ ಅಂತ್ಯಗೊಳಿಸಿದ ಘಟನೆ ಹರ್ಯಾಣದ ಬಹದ್ದೂರಘಡದಲ್ಲಿ ನಡೆದಿದೆ.25 ವರ್ಷದ ಗ್ರಾವಿತ್ ಹಾಗೂ 22 ವರ್ಷದ ನಂದಿನಿ ಮೃತ ದುರ್ದೈವಿಗಳು.

ಮೂಲತಃ ಡೆಹ್ರಡೂನ್‌ನವರಾಗಿರುವ ಈ ಜೋಡಿ ಯೂಟ್ಯೂಬ್ ಚಾನೆಲ್ ಮೂಲಕ ಸಕ್ರಿಯವಾಗಿದ್ದರು. ಇದರಲ್ಲೇ ಆದಾಯಗಳಿಸುತ್ತಿದ್ದರು. ಯೂಟ್ಯೂಬ್ ಚಾನಲೆ ವಿಸ್ತಾರಗೊಳ್ಳುತ್ತಿದ್ದಂತೆ ಐವರು ಸದಸ್ಯರ ತಂಡ ರಚಿಸಿ ವಿಡಿಯೋ ಶೂಟ್‌ಗಳಲ್ಲಿ ತೊಡಗಿಕೊಂಡಿದ್ದರು. ಹೀಗಾಗಿ ಇತ್ತೀಚೆಗಷ್ಟೇ ಡೆಹ್ರಡೂನ್‌ನಿಂದ ಬಹದ್ದೂರಘಡಕ್ಕೆ ಸ್ಥಳಾಂತರವಾಗಿದ್ದರು.

ಬೆಂಗಳೂರು: ನಾಯಂಡಹಳ್ಳಿ ಮೇಲ್ಸೇತುವೆಯಿಂದ ಜಿಗಿದು ನವವಿವಾಹಿತನ ಆತ್ಮಹತ್ಯೆ

ಸತತ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದ ಈ ಜೋಡಿ ತಡರಾತ್ರಿ ಮನೆಗೆ ಮರಳಿದ್ದಾರೆ. ಶೂಟಿಂಗ್ ಮುಗಿಸಿ ಬಂದ ಈ ಜೋಡಿ ನಡುವೆ ಜಗಳ ಆರಂಭಗೊಂಡಿದೆ. ಈ ಜಗಳಕ್ಕೆ ಕಾರಣವೇನು ಅನ್ನೋದು ಬಯಲಾಗಿಲ್ಲ. ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿದೆ. ಸುಮಾರು ಬೆಳಗಿನ ಜಾವ 6 ಗಂಟೆ ಹೊತ್ತಿದೆ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಈ ಜೋಡಿ 7ನೇ ಮಹಡಿಯಿಂದ ಜಿಗಿದು ಬದುಕು ಅಂತ್ಯಗೊಳಿಸಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ಅಪಾರ್ಟ್‌ಮೆಂಟ್ ಆವರಣದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪೊಲೀಸರ ಪರಿಶೀಲಿಸಿದ್ದಾರೆ. ಮಾಹಿತಿ ಕಲೆ ಹಾಕಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಬಿಸಿದ್ದಾರೆ. ಇತ್ತ ಇಬ್ಬರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಡೆಹ್ರಡೂನ್‌ನಿಂದ ಇಬ್ಬರ ಕುಟುಂಬಸ್ಥರು ಹರ್ಯಾಣಗೆ ಆಗಮಿಸಿದ್ದಾರೆ.

Rameshwaram Cafe Blast case ಹುಬ್ಬಳ್ಳಿಯಲ್ಲಿ ಶಂಕಿತ ಉಗ್ರ ವಶಕ್ಕೆ

ಯೂಟ್ಯೂಬ್ ಚಾನೆಲ್ ಹೆಚ್ಚಿನ ಸಮಸ್ಯೆಗಳಿಲ್ಲದೆ ಮುಂದುವರಿಯುತ್ತಿತ್ತು. ಆಧರೂ ಈ ಜೋಡಿ  ಈ ನಿರ್ಧಾರ ಮಾಡಿದ್ದೇಕೆ ಅನ್ನೋ ಪ್ರಶ್ನೆಗೆ ಉತ್ತರ ಹುಡುಕಲು ಮುಂದಾಗಿದ್ದಾರೆ. ಇದೀಗ ಈ ಜೋಡಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಕೆಲಸ ಮಾಡುತ್ತಿರುವ ಇತರ ಸಿಬ್ಬಂದಿಗಳ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

Follow Us:
Download App:
  • android
  • ios