ಜನತಾ ಕರ್ಫ್ಯೂವನ್ನೇ ದಂಧೆ ಮಾಡಿಕೊಂಡ ವೈನ್‌ ಶಾಪ್‌ಗಳು!

ಜನತಾ ಕರ್ಫ್ಯೂ ಬೆನ್ನಲೆ ದಂಧೆಗಿಳದ ಲಿಕ್ಕರ್ ಶಾಪ್ ಗಳು/ ನಿಯಮ ಉಲ್ಲಂಘಿಸಿ ಲಿಕ್ಕರ್ ಮಾರಾಟಕ್ಕೆ ಮುಂದಾಗಿದ್ದ ಕ್ಯಾಷಿಯರ್ಸ್/ ಉತ್ತರ ವಿಭಾಗದ ಪೊಲೀಸರಿಂದ ಎರಡು ಲಿಕ್ಕರ್ ಶಾಪ್ ಗಳ ವಿರುದ್ಧ ದೂರು/ ಸೋಲದೇವನಹಳ್ಳಿ ಇನ್ಸ್ಪೆಕ್ಟರ್ ಹರಿವರ್ಧನ್ ರಿಂದ ದಾಳಿ

Liquor shops work illegally in corona curfew time Bengaluru mah

ಬೆಂಗಳೂರು(ಮೇ 02) ಕೊರೋನಾ ನಿಯಂತ್ರಣಕ್ಕೆ ಬರಲಿ, ಏರುತ್ತಿರುವ ಕೇಸ್ ಕಡಿಮೆಯಾಗಲಿ ಎಂದು ಸರ್ಕಾರ ಜನತಾ ಕರ್ಫ್ಯೂ ಅಳವಡಿಕೆ ಮಾಡಿದೆ. ಆದರೆ ಇದೇ ಅವಕಾಶ ಬಳಕೆ ಮಾಡಿಕೊಂಡು ಕೆಲವರು ದಂಧೆಗೆ  ಇಳಿದಿದ್ದಾರೆ.

ಜನತಾ ಕರ್ಫ್ಯೂ ಬೆನ್ನಲ್ಲೆ  ಲಿಕ್ಕರ್ ಶಾಪ್ ಗಳು ದಂಧೆಗಿಳಿದಿವೆ. ನಿಯಮ ಉಲ್ಲಂಘಿಸಿ ಲಿಕ್ಕರ್ ಮಾರಾಟಕ್ಕೆ ಮುಂದಾಗಿದ್ದ ಕ್ಯಾಷಿಯರ್ಸ್  ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  ಉತ್ತರ ವಿಭಾಗದ ಪೊಲೀಸರಿಂದ ಎರಡು ಲಿಕ್ಕರ್ ಶಾಪ್ ಗಳ ವಿರುದ್ಧ ದೂರು ದಾಖಲಿಸಲಾಗಿದೆ.

ಕರ್ನಾಟದಲ್ಲಿ ಇಳಿಯದ ಕೊರೋನಾ ಅಬ್ಬರ; ಮುಂದೇನು?

ಸೋಲದೇವನಹಳ್ಳಿ ಇನ್ಸ್ಪೆಕ್ಟರ್ ಹರಿವರ್ಧನ್  ಮಾಹಿತಿ ಆಧರಿಸಿ ದಾಳಿ ಮಾಡಿದ್ದಾರೆ. ಗಂಗಮ್ಮಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ದೂರು ದಾಖಲಾಗಿದೆ. ಜನತಾ ಕರ್ಫ್ಯೂ ನಿಯಮ ಉಲ್ಲಂಘಿಸಿ ಲಿಕ್ಕರ್ ಮಾರಾಟ ಮಾಡುತ್ತಿದ್ದ ಆರೋಪಿಗಳ ಮೇಲೆ ದಾಳಿ ಮಾಡಲಾಗಿದೆ. ಲಿಕ್ಕರ್ ಶಾಪ್ ಮಾಲೀಕರ ವಿರುದ್ದ ದೂರು ದಾಖಲಿಸಿಕೊಂಡು ಲಿಕ್ಕರ್ ಶಾಪ್ ಸೀಲ್ ಡೌನ್ ಮಾಡಲಾಗಿದೆ. 

ಅಗತ್ಯ ವಸ್ತುಗಳ ಖರೀದಿಗೆ ಸರ್ಕಾರ ಬೆಳಗಿನ ಅವಧಿಯಲ್ಲಿ ಅವಕಾಶ ಮಾಡಿಕೊಟ್ಟಿದೆ. ರಾತ್ರಿ ಎಂಟು  ಗಂಟೆ ವರೆಗೆ ಹಾಲು ಲಭ್ಯವಿರುತ್ತದೆ ಎಂದು ತಿಳಿಸಲಾಗಿದೆ. ಕೊರೋನಾ ಎಚ್ಚರಿಕೆಯನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿ .

"

 

 

Latest Videos
Follow Us:
Download App:
  • android
  • ios