ಜಮೀನು ವಿವಾದ ಸೆಟ್ಲಮೆಂಟ್ ಮಾಡಿಕೊಳ್ಳುವ ವಿಚಾರವಾಗಿ ಕುಖ್ಯಾತ ರೌಡಿಶೀಟರ್ ಮಾರ್ಕೆಟ್ ಲೋಕಿ ಹೆಸರಲ್ಲಿ ಶಿವಮೊಗ್ಗದ ವ್ಯಕ್ತಿಯೋರ್ವನಿಗೆ ಬೆದರಿಕೆ ಕರೆ ಮಾಡಿರುವ ಘಟನೆ ನಡೆದಿದೆ.

ಶಿವಮೊಗ್ಗ (ಸೆ.18) : ಜಮೀನು ವಿವಾದ ಸೆಟ್ಲಮೆಂಟ್ ಮಾಡಿಕೊಳ್ಳುವ ವಿಚಾರವಾಗಿ ಕುಖ್ಯಾತ ರೌಡಿಶೀಟರ್ ಮಾರ್ಕೆಟ್ ಲೋಕಿ ಹೆಸರಲ್ಲಿ ಶಿವಮೊಗ್ಗದ ವ್ಯಕ್ತಿಯೋರ್ವನಿಗೆ ಬೆದರಿಕೆ ಕರೆ ಮಾಡಿರುವ ಘಟನೆ ನಡೆದಿದೆ.

ಗೋಪಾಲಗೌಡ ಬಡಾವಣೆಯ ಹರೀಶ್ ಎಂಬುವರಿಗೆ ಬೆದರಿಕೆ ಕರೆ ಬಳ್ಳಾರಿಯ ಸೆಂಟ್ರಲ್ ಜೈಲಿನಿಂದ ಕರೆ ಮಾಡಿ ದಮ್ಕಿ ಹಾಕಿರುವ ಪಾತಕಿ. ಗೋಪಾಲಗೌಡ ಬಡಾವಣೆಯ ಹರೀಶ್ ಎಂಬುವವರಿಗೆ ಸಾಗರ ರಸ್ತೆಯಲ್ಲಿ ಅರ್ಧ ಎಕರೆ ಜಮೀನಿದೆ. ಆ ಜಮೀನು ವಿವಾದವಾಗಿ ನ್ಯಾಯಾಲಯದಲ್ಲಿದೆ. ಹೀಗಾಗಿ ಕೋರ್ಟ್‌ನಿಂದ ಕೇಸ್ ವಾಪಸ್ ತೆಗೆದುಕೊಂಡು ಜಮೀನು ಸೆಟ್ಲಮಾಡಿಕೊಳ್ಳುವಂತೆ ಬೆದರಿಕೆ ಕರೆ ಮಾಡಿರುವ ರೌಡಿಶೀಟರ್. 

ಚೈತ್ರಾ ಕುಂದಾಪುರ ಡೀಲ್‌ ಪ್ರಕರಣಕ್ಕೆ ಟ್ವಿಸ್ಟ್‌: ಸಲೂನ್‌ ಮಾಲೀಕನಿಗೆ ಬೆದರಿಕೆ ಕರೆ

ಬಳ್ಳಾರಿ ಸೆಂಟ್ರಲ್ ಜೈಲ್‌ನಲ್ಲಿದ್ರೂ ಜೈಲಿನಿಂದಲೇ ಮಾರ್ಕೆಟ್ ಲೋಕಿ ಹೆಸರಲ್ಲಿ ಹರೀಶ್ ರಿಗೆ ಹಲವು ಬಾರಿ ವಾಟ್ಸ್‌ಆ್ಯಪ್ ಕರೆ ಬಂದಿವೆ. ಕೇಸ್ ಹಿಂಪಡೆದಿದ್ದರೆ ತಲೆ ಉರುಳುತ್ತದೆ ಎಂದು ಧಮ್ಮಿ ಕೂಡ ಹಾಕಲಾಗಿದೆ. ಇಷ್ಟು ಸಾಲದೆಂಬಂತೆ ಹುಡುಗರನ್ನು ಕಳುಹಿಸಿ ಹರೀಶ್‌ಗೆ ಬೆದರಿಕೆ ಕೂಡ ಹಾಕಲಾಗಿದೆ.

ಪದೇಪದೆ ಬೆದರಿಕೆ ಕರೆಬರುತ್ತಿರುವ ಹಿನ್ನೆಲೆ ಶಿವಮೊಗ್ಗದ ತುಂಗಾನಗರ ಠಾಣೆಗೆ ದೂರು ನೀಡಿದ ಹರೀಶ್.ದೂರು ಹಿನ್ನೆಲೆ ರೌಡಿಶೀಟರ್ ಮಾರ್ಕೆಟ್' ಲೋಕಿ ಸೇರಿದಂತೆ ಐವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 

ಮೆಟ್ರೋ ರೈಲು ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಪೊಲೀಸರಿಂದ ತೀವ್ರ ತಪಾಸಣೆ, ಗಾಬರಿಯಾದ ಪ್ರಯಾಣಿಕರು!