KSRTC: ಪಕ್ಕದಲ್ಲಿ ಕುಳಿತ ಯುವತಿಗೆ ಗುಪ್ತಾಂಗ ತೋರಿಸಿದ ಪ್ರಯಾಣಿಕ!
ಬಸ್‌ನಲ್ಲಿ ತನ್ನ ಪಕ್ಕದಲ್ಲಿ ಕುಳಿತಿದ್ದ ಯುವತಿಗೆ ಗುಪ್ತಾಂಗ ತೋರಿಸಿದ ಕಾರಣಕ್ಕೆ ಪೊಲೀಸರು 53 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಕೇರಳ ರಾಜ್ಯ ಸಾರಿಗೆ ಸಂಸ್ಥೆ (KSRTC) ಬಸ್‌ನಲ್ಲಿ ಈ ಘಟನೆ ನಡೆದಿದೆ.
ತಿರುವನಂತಪುರಂ (ಏ.7): ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವತಿಯೊಬ್ಬಳಿಗೆ ತನ್ನ ಗುಪ್ತಾಂಗವನ್ನು ತೋರಿಸಿದ ಕಾರಣಕ್ಕಾಗಿ 53 ವರ್ಷದ ವ್ಯಕ್ತಿಯನ್ನು ಕರಮಾನ ಪೊಲೀಸರು ಬಂಧಿಸಿದ್ದಾರೆ. ಈತನನ್ನು ಕರಮಾನದ ಚುಲ್ಲಮುಕ್ಕು ಎಂಬಲ್ಲಿಯ ಮುಂಡಪ್ಲಾವಿಲ ವೀಟಿಲ್‌ನ ಜಯನ್ ಎಂದು ಗುರುತಿಸಲಾಗಿದೆ. ನೆಮೊಮ್ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬಳು ಕೆಎಸ್‌ಆರ್‌ಟಿಸಿ ಬಸ್ ಏರಿದ್ದಳು. ಈ ವೇಳೆ ಆಕೆ ಬೇರೆ ಎಲ್ಲೂ ಸ್ಥಳವಿಲ್ಲದೆ, ಜಯನ್ ಪಕ್ಕದಲ್ಲಿ ಬಂದು ಕುಳಿತಿದ್ದಳು. ಆಕೆ ಪಕ್ಕದಲ್ಲಿ ಕುಳಿತಿದ್ದ ಸಮಯದಲ್ಲಿಯೇ ಜಯನ್ ತನ್ನ ಗುಪ್ತಾಂಗವನ್ನು ತೆಗೆದು ತೋರಿಸಿದ್ದಾನೆ ಎಂದು ಹೇಳಲಾಗಿದೆ. ಕರಮಾನ ವೃತ್ತ ನಿರೀಕ್ಷಕ ಸುಜಿತ್, ಸಬ್ ಇನ್ಸ್‌ಪೆಕ್ಟರ್ ಸಂತು, ಸಿಪಿಒಗಳಾದ ಸಜನ್ ಮತ್ತು ಅಭಿಲಾಷ್, ಜಯನ್‌ನಲ್ಲಿ ಬಂಧಿಸಿದ್ದಾರೆ. ಆರಂಭದಲ್ಲಿಯೇ ಯುವತಿ ಇದನ್ನು ಗಮನಿಸಿದ್ದಳಾದರೂ ವ್ಯಕ್ತಿಯ ನಡೆಯನ್ನು ನಿರ್ಲಕ್ಷ್ಯ ಮಾಡಿದ್ದಳು. ಆದರೆ, ಇದೇ ಕೃತ್ಯವನ್ನು ಸಾಕಷ್ಟು ಬಾರಿ ಮುಂದುವರಿಸಿದ್ದರಿಂದ ಸಿಟ್ಟಾದ ಯುವತಿ ಬಸ್‌ನ ಕಂಡಕ್ಟರ್‌ಗೆ ಮಾಹಿತಿ ನೀಡಿದ್ದಳು. ಈ ವೇಳೆ ಬಸ್‌ನ ಸಿಬ್ಬಂದಿಗಳು ಪೊಲೀಸ್‌ಗೆ ಮಾಹಿತಿ ನೀಡಿದ್ದಾರೆ. ಜಯನ್‌ನಲ್ಲಿ ಬಂಧಿಸಿದ ಪೊಲೀಸರು ಯುವತಿಯ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಿ, ಠಾಣೆಗೆ ಒಯ್ದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಗಡ್ಡೆಯಿದೆ ಎಂದು ರೋಗಿಯ ಗುಪ್ತಾಂಗ ಕತ್ತರಿಸಿದ ವೈದ್ಯ, ನಂತ್ರ ಹಾಗೇನೂ ಇರ್ಲಿಲ್ಲ Sorry ಅಂದ್ಬಿಟ್ಟ!
ಇದನ್ನೂ ಓದಿ: Bengaluru: ಚಿಕಿತ್ಸೆಗೆ ಬಂದ ಯುವತಿ ಗುಪ್ತಾಂಗ ಮುಟ್ಟಿ ಕಾಮುಕ ವೈದ್ಯನಿಂದ ವಿಕೃತಿ