ಹುಟ್ಟುಹಬ್ಬದ ದಿನ ಖರ್ಚಿಗೆ ದುಡ್ಡು ಕೊಡಲಿಲ್ಲ ಅಂತ ಹಿರಿಯ ವಿದ್ಯಾರ್ಥಿಗಳು ಜೂನಿಯರ್‌ನ ಮೇಲೆ ಹಲ್ಲೆ ಮಾಡಿದ್ದಾರೆ. ಮದ್ಯ ಸೇರಿದಂತೆ ಬೇರೆ ವಸ್ತುಗಳನ್ನು ಕೊಳ್ಳಲು ಆ ಹುಡುಗನಿಂದ ದುಡ್ಡು ಕೇಳಿದ್ದರಂತೆ. ದುಡ್ಡು ಕೊಡದಿದ್ದಕ್ಕೆ ಹಾಸಿಗೆಗೆ ಕಟ್ಟಿಹಾಕಿ ಕಂಪಾಸ್‌ನಿಂದ ಚುಚ್ಚಿ ಗಾಯಗೊಳಿಸಿದ್ದಾರೆ.

ಕೊಟ್ಟಾಯಂ (ಫೆ.14): ಕೊಟ್ಟಾಯಂ ನರ್ಸಿಂಗ್ ಕಾಲೇಜ್‌ನಲ್ಲಿ ನಡೆದ ರಾಗಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವಿವರಗಳು ಹೊರಬಿದ್ದಿವೆ. ಹುಟ್ಟುಹಬ್ಬದ ಖರ್ಚಿಗೆ ದುಡ್ಡು ಕೊಡದಿದ್ದಕ್ಕೆ ಹಿರಿಯ ವಿದ್ಯಾರ್ಥಿಗಳು ಜೂನಿಯರ್‌ನ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ. ಮದ್ಯ ಸೇರಿದಂತೆ ಬೇರೆ ವಸ್ತುಗಳನ್ನು ಕೊಳ್ಳಲು ಆ ಹುಡುಗನಿಂದ ದುಡ್ಡು ಕೇಳಿದ್ದರಂತೆ. ಆದ್ರೆ ಆತ ದುಡ್ಡು ಕೊಡಲು ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಹಿರಿಯ ವಿದ್ಯಾರ್ಥಿಗಳು ಆತನನ್ನು ಹಾಸಿಗೆಗೆ ಕಟ್ಟಿಹಾಕಿ ಕಂಪಾಸ್‌ನಿಂದ ಚುಚ್ಚಿ ಗಾಯಗೊಳಿಸಿದ್ದಾರೆ. ಈ ಘಟನೆಯ ವಿಡಿಯೋವನ್ನು ಆರೋಪಿಗಳೇ ಸೆರೆಹಿಡಿದಿದ್ದು, ವಿಡಿಯೋ ನಿನ್ನೆ ಬಹಿರಂಗವಾಗಿತ್ತು.

ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕಾಲೇಜು ಮತ್ತು ಹಾಸ್ಟೆಲ್‌ನಲ್ಲಿ ಪೊಲೀಸರು ತೀವ್ರ ತಪಾಸಣೆ ನಡೆಸಲಿದ್ದಾರೆ. ಈವರೆಗೆ ಐದು ಜನ ಆರೋಪಿಗಳನ್ನು ಗುರುತಿಸಲಾಗಿದೆ. ತನಿಖೆ ಮುಂದುವರೆದಂತೆ ಇನ್ನಷ್ಟು ಆರೋಪಿಗಳು ಸಿಕ್ಕಿಬೀಳುವ ಸಾಧ್ಯತೆ ಇದೆ. ಪೊಲೀಸರು ಈಗಾಗಲೇ ಸಂತ್ರಸ್ತ ವಿದ್ಯಾರ್ಥಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಬಹಿರಂಗಗೊಂಡ ವಿಡಿಯೋವನ್ನು ಪರಿಶೀಲಿಸಲು ಸೈಬರ್ ಸೆಲ್ ನೆರವು ಪಡೆಯಲಾಗುತ್ತದೆ. ಆರೋಪಿಗಳ ಫೋನ್‌ಗಳಲ್ಲಿ ಬೇರೆ ವಿಡಿಯೋಗಳಿವೆಯೇ ಎಂದು ಪರಿಶೀಲಿಸಲು ಫೋನ್‌ಗಳನ್ನು ಫೋರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದೆ. ಈಗ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆಯುವುದಿಲ್ಲ ಎನ್ನಲಾಗಿದ್ದು, ತನಿಖೆ ಪೂರ್ಣಗೊಂಡ ನಂತರವೇ ಆರೋಪಿಗಳನ್ನು ವಶಕ್ಕೆ ಪಡೆಯಲು ಅರ್ಜಿ ಸಲ್ಲಿಸಲಾಗುತ್ತದೆ.

ಅಮಾನವೀಯ ರೀತಿಯಲ್ಲಿ ರಾಗಿಂಗ್‌ ಮಾಡಿ ಬಂಧನಕ್ಕೆ ಒಳಗಾಗಿ ಎಲ್ಲಾ ಐವರು ಸೀನಿಯರ್ಸ್‌ಗಳನ್ನು ಕಾಲೇಜಿನಿಂದ ಕಿಕ್‌ಔಟ್‌ ಮಾಡಲಾಗುವುದು ಎಂದು ತಿಳಿದುಬದಿದೆ.ಘಟನೆಯ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದ್ದರೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರಾಜ್ಯ ಪೊಲೀಸರಿಂದ 10 ದಿನಗಳಲ್ಲಿ ವರದಿ ಕೇಳಿದೆ.

ಕೊಟ್ಟಾಯಂ ಸರ್ಕಾರಿ ನರ್ಸಿಂಗ್ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳ ಮೇಲಿನ ಕ್ರೂರ ಹಲ್ಲೆಗೆ ಸಂಬಂಧಿಸಿದಂತೆ ಗುರುವಾರ ಐದು ಮಂದಿ ಮೂರನೇ ವರ್ಷದ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಬಂಧಿತ ವಿದ್ಯಾರ್ಥಿಗಳನ್ನು ರಾಹುಲ್ ರಾಜ್, ಎನ್.ಎಸ್. ಜೀವಾ, ಎನ್.ಪಿ. ವಿವೇಕ್, ರಿಗಿಲ್ ಜೀತ್ ಮತ್ತು ಸ್ಯಾಮ್ಯುಯೆಲ್ ಜಾನ್ಸನ್ ಎಂದು ಗುರುತಿಸಲಾಗಿದೆ.

ಖಾಸಗಿ ಬಸ್‌ನಲ್ಲಿ ಮಹಿಳೆಯ ರೇಪ್‌ ಮಾಡಿದ ಡ್ರೈವರ್‌, ನೋಡ್ತಾ ನಿಂತಿದ್ದ ಕಂಡಕ್ಟರ್‌!

ಮೊದಲ ವರ್ಷದ ವಿದ್ಯಾರ್ಥಿಯನ್ನು ಬೆಡ್‌ಗೆ ಕಟ್ಟಿರುವ ಸೀನಿಯರ್ಸ್‌ಗಳು ಆತನ ಅಂಗಿಯನ್ನು ತೆಗೆದುಹಾಕಿದ್ದಾರೆ. ಆತನ ಮರ್ಮಾಂಗದ ಮೇಲೆ ಭಾರೀ ತೂಕದ ವಸ್ತುಗಳನ್ನು ಕೂಡ ಇರಿಸಿದ್ದಾರೆ. ಪೇಸ್ಟ್‌, ಮುಖಕ್ಕೆ ಹಚ್ಚಿಕೊಳ್ಳುವ ಕ್ರೀಮ್‌ಗಳನ್ನು ಆತನ ಇಡೀ ಮೈಮೇಲೆ ಹಾಕಿದ್ದಾರೆ. ಅದರೊಂದಿಗೆ ಕಂಪಾಸ್‌ನಲ್ಲಿನ ತ್ರಿಜ್ಯದಿಂದ ಆತನ ಮೈಮೇಲೆ ಚುಚ್ಚುತ್ತಿರುವುದು ಕಂಡಿದೆ.

Viral Video: ಅಯೋಧ್ಯೆ ರಾಮಮಂದಿರ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್‌ ಜಲಸಮಾಧಿ, ಸಂತರ ದೇಹ ಸುಡೋದಿಲ್ಲ ಯಾಕೆ?

ಜೂನಿಯರ್ ವಿದ್ಯಾರ್ಥಿಗಳು ಸುಮಾರು ಮೂರು ತಿಂಗಳಿನಿಂದ ಈ ರೀತಿಯ ರ‍್ಯಾಗಿಂಗ್ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರಥಮ ವರ್ಷದ ವಿದ್ಯಾರ್ಥಿಗಳು ತರಗತಿ ಆರಂಭಿಸಿದ ಸ್ವಲ್ಪ ಸಮಯದ ನಂತರ, ನವೆಂಬರ್ 2024 ರಲ್ಲಿ ಇದು ಪ್ರಾರಂಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಹಿರಿಯ ವಿದ್ಯಾರ್ಥಿಗಳು ಭಾನುವಾರಗಳಂದು ಮದ್ಯ ಖರೀದಿಸಲು ಜೂನಿಯರ್ ವಿದ್ಯಾರ್ಥಿಗಳಿಂದ ನಿಯಮಿತವಾಗಿ ಹಣವನ್ನು ಸುಲಿಗೆ ಮಾಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.

Horrific. Is this ragging? No, it's clearly a criminal offense.

These "students" are associated with SFI, a left-wing student org, and since the Left is ruling Kerala, I don't expect strict action against them. They've been arrested, but they'll likely get away with it. pic.twitter.com/8gDvP0mOk2

— Mr Sinha (@MrSinha_) February 14, 2025