ಕೊಡಗು ಜಿಲ್ಲೆಯ ಮೂರ್ನಾಡುವಿನಲ್ಲಿ ಕಟ್ಟೆಮಾಡು ದೇವಾಲಯದ ವಿಚಾರಕ್ಕೆ ಇಬ್ಬರು ದುಷ್ಕರ್ಮಿಗಳು ದೇವಾಲಯದ ಅರ್ಚಕ ವಿಘ್ನೇಶ್ ಭಟ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಅರ್ಚಕನಿಗೆ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಡಗು (ಜ.27): ಕಟ್ಟೆಮಾಡು ದೇವಾಲಯದ ವಿಚಾರಕ್ಕೆ ಇಬ್ಬರು ದುಷ್ಕರ್ಮಿಗಳು ದೇವಾಲಯದ ಅರ್ಚಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಕೊಡಗು ಜಿಲ್ಲೆಯ ಮೂರ್ನಾಡುವಿನಲ್ಲಿ ನಡೆದಿದೆ.

ವಿಘ್ನೇಶ್ ಭಟ್ ಹಲ್ಲೆಗೊಳಗಾದ ಅರ್ಚಕ, ಕಾಕೋಟು ಪರಂಬು ಗ್ರಾಮದ ಅನಿಲ್ ಮತ್ತು ಸಹಚರರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಅರ್ಚಕ ಕೊಡಗು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕದನ್ನೂ ಓದಿ: ಕೊಡಗಿನಲ್ಲಿ ತಣ್ಣಗಾಗದ ವಸ್ತ್ರ ಸಂಹಿತೆ ದಂಗಲ್ ಕಿಚ್ಚು; ಎರಡು ಸಮುದಾಯ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ನಿಂದನೆ

ಹಲ್ಲೆಗೆ ಕಾರಣವೇನು?

ಕಟ್ಟೆಮಾಡು ಶ್ರೀ ಮೃತ್ಯುಂಜಯ ದೇವಾಲಯದ ಅರ್ಚಕರಾಗಿರುವ ವಿಘ್ನೇಷ್ ಭಟ್. ದೇವಾಲಯದ ವಿಚಾರಕ್ಕೆ ಹಿಂದೇ ಎರಡು ಸಮುದಾಯಗಳ ನಡುವೆ ಘರ್ಷಣೆಯಾಗಿತ್ತು. ಇದೇ ವಿಚಾರಕ್ಕೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಮನೆಯಲ್ಲಿ ಪೂಜೆ ಕಾರ್ಯವಿದೆ ಎಂದು ಹೇಳಿ ಬಂದಿದ್ದ ಇಬ್ಬರು ಆರೋಪಿಗಳು ಮನೆಯೊಳಗೆ ನುಗ್ಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಅರ್ಚಕ ವಿಘ್ನೇಶ್ ಭಟ್ ಆಘಾತಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: ಕೊಡಗು ದೇವಾಲಯದಲ್ಲಿ ಧಾರ್ಮಿಕ ಉಡುಪು ವಿವಾದ; ಕೊಡವ-ಗೌಡ ಸಂಘರ್ಷಕ್ಕೆ ಹೊಸ ತಿರುವು!

ಚೂರಿ ಇರಿಯಲು ಯತ್ನ:

ಮೃತ್ಯುಂಜಯ ದೇವಾಲಯದಲ್ಲಿನ ಗಲಾಟೆಗೆ ನೀನೇ ಕಾರಣ, ಹೀಗಾಗಿ ನಿನ್ನನ್ನು ಬದುಕಲು ಬಿಡುವುದಿಲ್ಲ ಎಂದು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಅರ್ಚಕ ವಿಘ್ನೇಶ್ ಭಟ್ ಅವರ ಮನೆಯ ಮುಂಭಾಗದಲ್ಲೇ ಹಲ್ಲೆ. ಮುಖ, ಹೊಟ್ಟೆ ಭಾಗಗಳಿಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ. ಮುಖದಲ್ಲಿ ತೀವ್ರ ರಕ್ತಸ್ರಾವವಾಗಿದೆ. ಹಲ್ಲೆ ವೇಳೆ ಚಾಕು ಇರಿಯಲು ಯತ್ನಿಸಲಾಗಿದೆ. ಅಷ್ಟರಲ್ಲಿ ತಡೆದಿರುವ ವಿಘ್ನೇಶ್ ಭಟ್ ಅವರ ತಾಯಿ ಗೀತಾ ಬಂದಿದ್ದಾರೆ. ಅಲ್ಲಿಂದ ಕಾಲ್ಕಿತ್ತಿರುವ ಆರೋಪಿಗಳು. ಸದ್ಯ ಮಡಿಕೇರಿ ಅಸ್ಪತ್ರೆಯಲ್ಲಿ ಸದ್ಯ ಸಿಟಿ ಸ್ಕ್ಯಾನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.