Asianet Suvarna News Asianet Suvarna News

Belagavi: ಬಾಲಕಿ ಚುಡಾಯಿಸಿದ್ದನ್ನು ಪ್ರಶ್ನಿಸಿದ ನಾಲ್ವರಿಗೆ ಚಾಕು ಇರಿತ

ಬಾಲಕಿಗೆ ಚುಡಾಯಿಸಿದ್ದನ್ನು ಪ್ರಶ್ನಿಸಿದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ನಾಲ್ವರಿಗೆ ಚಾಕು ಇರಿದಿರುವ ಘಟನೆ ನಿನ್ನೆ (ಮಂಗಳವಾರ) ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

knife attack on four people in belagavi gvd
Author
First Published Nov 9, 2022, 7:41 AM IST

ಬೆಳಗಾವಿ (ನ.09): ಬಾಲಕಿಗೆ ಚುಡಾಯಿಸಿದ್ದನ್ನು ಪ್ರಶ್ನಿಸಿದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ನಾಲ್ವರಿಗೆ ಚಾಕು ಇರಿದಿರುವ ಘಟನೆ ನಿನ್ನೆ (ಮಂಗಳವಾರ) ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಬೈಲಹೊಂಗಲ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ಮಂಗಳವಾರ ಸಂಜೆ ತಮ್ಮ ಮಗಳಿಗೆ ಚುಡಾಯಿಸಿದ್ದನ್ನು ಪ್ರಶ್ನಿಸಲು ತಂದೆ ಹಿರಿಯರ ಸಮೇತ ಹೋಗಿದ್ದರು. 17 ವರ್ಷದ ಬಾಲಕ ಹಾಗೂ ಆತನ ಸ್ನೇಹಿತರಿಗೆ ಬುದ್ದಿ ಹೇಳಲು ಹೋದಾಗ ಜಗಳ ನಡೆದು ವಿಕೋಪಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ಬಾಲಕಿಯ ತಂದೆಯೊಂದಿಗಿದ್ದ ನಾಲ್ವರ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇರಿಯಲಾಗಿದೆ‌ ಎಂದು ತಿಳಿದುಬಂದಿದೆ. 

ಅಲ್ಲದೆ, ಆರೋಪಿ ಕಡೆಯ ಓರ್ವ ವ್ಯಕ್ತಿಗೂ ಗಾಯವಾಗಿದೆ. ರಫೀಕ್ ಕುರಿಕೊಪ್ಪ, ಸಾಹಿದ್ ಸೌದಾಗರ್, ಅತಾಹುಲ್ಲಾ ಹುಬ್ಬಳ್ಳಿ, ಮೆಹಬೂಬ್ ಹುಬ್ಬಳ್ಳಿ ಎಂಬುವರು ಚಾಕು ಇರಿತಕ್ಕೆ ಒಳಗಾದವರು. ಜಗಳ ಬಿಡಿಸಲು ಹೋದ ರವಿ ತಿಮ್ಮನ್ನರ್ ಎಂಬುವರ ಮೇಲೆಯೂ ಹಲ್ಲೆ ನಡೆಸಲಾಗಿದೆ. ಸದ್ಯ ಗಾಯಾಳುಗಳಿಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಬಿಮ್ಸ್ ಆಸ್ಪತ್ರೆ ಬಳಿ ಓರ್ವ ಎಸಿಪಿ, ಇಬ್ಬರು ಸಿಪಿಐ ಸೇರಿ ಇಪ್ಪತ್ತಕ್ಕೂ ಹೆಚ್ಚು ಜನ ಪೊಲೀಸರಿಂದ ಬಂದೋಬಸ್ತ್ ಒದಗಿಸಲಾಗಿದೆ. ಬೈಲಹೊಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ಬಾಲಕ, ಬಾಲಕಿ ಒಂದೇ ಸಮುದಾಯಕ್ಕೆ ಸೇರಿದ್ದವರಾಗಿದ್ದಾರೆ.

Chikkaballapur: ಪರೀಕ್ಷೆಗೆ ರಕ್ತ ಪಡೆಯುವ ವೇಳೆ ಮಗು ಸಾವು

ಒಂದೇ ಕುಟುಂಬದ 7 ಮಂದಿಗೆ ಚಾಕು ಇರಿತ: ಪಟ್ಟಣದ ಒಂದೇ ಕುಟುಂಬದ ಏಳು ಜನರಿಗೆ ಗಾಂಜಾ ವ್ಯಸನಿಯೊಬ್ಬ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಇಲ್ಲಿನ ಗಾಂಧಿ ವೃತ್ತದ ಬಳಿಯ ಪಟಾಲಮ್ಮ ಬಡಾವಣೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಪಟಾಲಮ್ಮ ಬಡಾವಣೆಯ ಪೇಂಟರ್‌ ನಾಗರಾಜ್‌, ಪತ್ನಿ ಹೇಮಾವತಿ, ತಮ್ಮ ರಾಮು, ಆತನ ಪತ್ನಿ ನಾಗವೇಣಿ, ಮಕ್ಕಳಾದ ರಾಜೇಶ್ವರಿ, ಚಂದ್ರಕಲಾ, ರೂಪ ಚಾಕು ಇರಿತಕ್ಕೆ ಒಳಗಾಗಿ ಇಲ್ಲಿನ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುರುಘಾ ಮಠದಲ್ಲಿದ್ದ 47 ಪೋಟೋಗಳನ್ನು ಕದ್ದಿದ್ದ ಕಳ್ಳರು ಅಂದರ್!

ಏನಿದು ಘಟನೆ: ಪೇಂಟರ್‌ ನಾಗರಾಜ್‌ ಅವರ ಸಹೋದರ ರಾಮು ಪರಿವಾಳ ವ್ಯಾಪಾರಿ. ಮಂಗಳವಾರ ರಾತ್ರಿ ಪಟ್ಟಣದ ಮಟನ್‌ ಮಾರ್ಕೆಟ್‌ ಪ್ರದೇಶದ ಇಮ್ರಾನ್‌ ಎಂಬುವನು ಪಾರಿವಾಳ ಖರೀದಿಸಲು ಆಗಮಿಸಿದ್ದಾನೆ. ರಾತ್ರಿ ವೇಳೆ ಮನೆಗೆ ಬಂದಿದ್ದಕ್ಕೆ ನಾಗರಾಜ್‌ ಅಕ್ಷೇಪಿಸಿ ಬೆಳಿಗ್ಗೆ ಬರುವಂತೆ ಹೇಳಿದ್ದಾರೆ. ಗಾಂಜಾ ನಶೆಯಲ್ಲಿದ್ದ ಇಮ್ರಾನ್‌ ತಗಾದೆ ತೆಗೆದನಲ್ಲದೇ ತನ್ನ ಬಳಿ ಇದ್ದ ಚಾಕುವಿನಿಂದ ನಾಗರಾಜ್‌ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ನಾಗರಾಜ್‌ ರಕ್ಷಣೆಗೆ ಬಂದ ಕುಟುಂಬದ ಎಲ್ಲ ಸದಸ್ಯರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಗಲಾಟೆ ಗಮನಿಸಿದ ಸಾರ್ವಜನಿಕರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಎಲ್ಲ ಗಾಯಾಳು ಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪಟ್ಟಣ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow Us:
Download App:
  • android
  • ios