ಬೆಂಗಳೂರು(ಸೆ. 04)  ಕಿರಿಕ್ ಪಾರ್ಟಿ ಸಿನಿಮಾದಿಂದ ಹೆಸರು ಮಾಡಿದ್ದ ಕಿರಿಕ್ ಬೆಡಗಿ ಸಂಯುಕ್ತ ಹೆಗ್ಡೆ ಒಂದೆಲ್ಲಾ ಒಂದು ಕಿರಿಕ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಸಾರ್ವಜನಿಕ ಪಾರ್ಕ್ ನಲ್ಲಿ ತುಂಡು ಬಟ್ಟೆ ತೊಟ್ಟು ನೃತ್ಯ ಮಾಡಿದ ಕಾರಣಕ್ಕೆ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.

"

ಬೆಂಗಳೂರಿನ ಅಗರ ಉದ್ಯಾನವನದಲ್ಲಿ ಸಂಯುಕ್ತ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.  ಶುಕ್ರವಾರ ಸಂಜೆ ಸಾರ್ವಜನಿಕರು ವಾಕಿಂಗ್ ಮಾಡುವ ಪಾರ್ಕ್‍ನಲ್ಲಿ ಸಂಯುಕ್ತ ಹೆಗ್ಡೆ ಮತ್ತವರ ಸಂಗಡಿಗರು 'ಹುಲಾ ಹೂಪ್ ಡ್ಯಾನ್ಸ್' ಮಾಡುತ್ತಿದ್ದರು. ಇದಕ್ಕೆ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಕಿರಿಕ್ ಬೆಡಗಿಯ ಲಿಪ್ ಲಾಕ್ ಗೆ ಏನಂತಾರೆ?

ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ವೇಳೆ ಸಂಯುಕ್ತಾ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದು ನಮ್ಮದು ಏನು ತಪ್ಪಿಲ್ಲ, ನೀವೇ ನೋಡಿ ಎನ್ನುತ್ತ ತಾವು ಧರಿಸಿದ್ದ ಮೇಲಂಗಿ ತೆಗೆದು ನಾವು ತುಂಡು ಬಟ್ಟೆ ಧರಿಸಿಲ್ಲ ಎಂದು ಸಾಕ್ಷ್ಯ  ನೀಡಿದ್ದಾರೆ. ನಂತರ ಪೊಲೀಸರು  ಸಂಯುಕ್ತಾ ಅವರ ಮನವೊಲಿಸಿ ಕಳುಹಿಸಿದ್ದಾರೆ ಎನ್ನಲಾಗಿದೆ. 

 
 
 
 
 
 
 
 
 
 
 
 
 
 
 

A post shared by Samyuktha Hegde (@samyuktha_hegde) on Sep 4, 2020 at 5:38am PDT