Asianet Suvarna News Asianet Suvarna News

ರಾಯಚೂರು ಶಾಸಕ ಶಿವರಾಜ್‌ ಪಾಟೀಲ್‌ ವಿರುದ್ಧ ಕಿಡ್ನಾಪ್‌ ಕೇಸ್‌

*   ರಾಯಚೂರು ನಗರಸಭಾ ಸದಸ್ಯೆ ಶೈನಾಜ್‌ ಬೇಗಂ ಅಪಹರಿಸಿದ್ದಾಗಿ ಆರೋಪ
*  ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಶೈನಾಜ್‌ ಬೇಗಂ ಪುತ್ರ ದೂರು
*  ಇಂದು ರಾಯಚೂರು ನಗರಸಭಾ ಅಧ್ಯಕ್ಷ ಸ್ಥಾನದ ಚುನಾವಣೆ 

Kidnap Case Against Raichur MLA Shivaraj Patil grg
Author
Bengaluru, First Published Mar 30, 2022, 8:18 AM IST

ಬೆಂಗಳೂರು(ಮಾ.30):  ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಯಚೂರು ನಗರಸಭಾ ಸದಸ್ಯೆ ಶೈನಾಜ್‌ ಬೇಗಂ(Shainaja Begum) ಅವರನ್ನು ರಾಯಚೂರು(Raichur) ಕ್ಷೇತ್ರದ ಶಾಸಕ ಡಾ.ಶಿವರಾಜ್‌ ಪಾಟೀಲ್‌(Dr Shivaraj Patil) ಹಾಗೂ ಅವರ ಬೆಂಬಲಿಗರು ಅಪಹರಿಸಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಲಾಗಿದೆ.

ಮಂಗಳವಾರ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌(Kamal Pant) ಅವರನ್ನು ಭೇಟಿಯಾಗಿದ್ದ ಶೈನಾಜ್‌ ಬೇಗಂ ಅವರ ಪುತ್ರ, ಎಂ.ಡಿ.ಅಲಿ ಅವರು ಶಾಸಕ ಡಾ.ಶಿವರಾಜ್‌ ಪಾಟೀಲ್‌ ವಿರುದ್ಧ ದೂರು(Complaint) ನೀಡಿದರು. ಇಂದು ರಾಯಚೂರು ನಗರ ಸಭೆ ಅಧ್ಯಕ್ಷ ಸ್ಥಾನದ ಚುನಾವಣೆ(Election) ನಿಗದಿಯಾಗಿರುವುದರಿಂದ ಮತದಾನ ತಪ್ಪಿಸುವ ದುರುದ್ದೇಶದಿಂದ ನನ್ನ ತಾಯಿಯನ್ನು ಅಪಹರಿಸಿ(Kidnap) ಅಕ್ರಮ ಬಂಧನದಲ್ಲಿ ಇರಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

Vijayapura Kidnap Case: 8 ಗಂಟೆಯಲ್ಲೇ ಐವರು ಅಪಹರಣಕಾರರ ಹೆಡೆಮುರಿ ಕಟ್ಟಿದ ಪೊಲೀಸರು

ಶೈನಾಜ್‌ ಬೇಗಂ ಅವರು ರಾಯಚೂರಿನ ವಾರ್ಡ್‌ ಸಂಖ್ಯೆ 26ರ ಚುನಾಯಿತ ಸದಸ್ಯರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮಾ.27ರಂದು ನಗರದ ಕನ್ನಿಂಗ್‌ ಹ್ಯಾಂ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ನನ್ನ ತಮ್ಮ ಮೊಹಮ್ಮದ್‌ ಆಲಂ ಹಾಗೂ ಅತ್ತೆ ಖಾಜಾಬಿ ಅವರು ತಾಯಿಯ ಜತೆಯಲ್ಲಿದ್ದರು.

ಮಂಗಳವಾರ ಮುಂಜಾನೆ ತಾಯಿಯ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್‌ ಆಫ್‌ ಬಂದಿತು. ಬಳಿಕ ತಮ್ಮ ಮತ್ತು ಅತ್ತೆಯ ಮೊಬೈಲ್‌ಗೆ ಕರೆ ಮಾಡಿದ್ದು, ಇಬ್ಬರ ಮೊಬೈಲ್‌ ಸ್ವಿಚ್ಡ್‌ ಆಫ್‌ ಬಂದಿತು. ಬಳಿಕ ಬೆಳಗ್ಗೆ ಆಸ್ಪತ್ರೆಗೆ ಬಂದು ವಿಚಾರಿಸಿದಾಗ ಬಿಳಿ ಬಣ್ಣದ ಕಾರಿನಲ್ಲಿ ಬಂದವರು ಮೂರು ಜನರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು. ಆಸ್ಪತ್ರೆಯ ಸಿಸಿಟಿವಿ(CCTV) ಕ್ಯಾಮರಾ ದೃಶ್ಯಾವಳಿ ತೆಗೆಸಿ ನೋಡಿದಾಗ ಆ ಕಾರು ರಾಯಚೂರು ಶಾಸಕ ಡಾ.ಶಿವರಾಜ್‌ ಪಾಟೀಲ್‌ ಅವರರಿಗೆ ಸೇರಿರುವುದು ಗೊತ್ತಾಗಿದೆ. ಈ ವೇಳೆ ಶಾಸಕರು, ಅವರ ಬೆಂಬಲಿಗರು ಹಾಗೂ ಪಕ್ಷದ ಮುಖಂಡರನ್ನು ಸಂಪರ್ಕಿಸಿ ವಿಚಾರಿಸಲು ಪ್ರಯತ್ನಿಸಿದಾಗ ಯಾರೊಬ್ಬರೂ ಸ್ಪಂದಿಸಲಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

Kidnap Case: ಆಶ್ರಯ ನೀಡುವ ನೆಪದಲ್ಲಿ ನವಜಾತು ಶಿಶು ಅಪಹರಿಸಿದ ಸ್ವಾಮೀಜಿ: ಮೂವರ ವಿರುದ್ಧ ಪ್ರಕರಣ

ಇಂದು ರಾಯಚೂರು ನಗರಸಭಾ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ನನ್ನ ತಾಯಿ ಮತ ಚಲಾಯಿಸದೆ ಗೈರು ಹಾಜರಾಗುವಂತೆ ಮಾಡುವ ದುರುದ್ದೇಶದಿಂದ ಆಸ್ಪತ್ರೆಯಿಂದ ತಾಯಿಯನ್ನು ಅಪಹರಿಸಿ ಅಕ್ರಮ ಬಂಧನದಲ್ಲಿ ಇರಿಸಿಕೊಂಡಿದ್ದಾರೆ. ನನ್ನ ತಾಯಿ ಹಾಗೂ ಕುಟುಂಬದವರ ಜೀವಕ್ಕೆ ಏನಾದರೂ ಅಪಾಯವಾದರೆ, ಶಾಸಕ ಶಿವರಾಜ್‌ ಪಾಟೀಲ್‌ ಅವರೇ ನೇರ ಹೊಣೆಯಾಗಲಿದ್ದಾರೆ. ಕೂಡಲೇ ನನ್ನ ತಾಯಿ ಹಾಗೂ ಕುಟುಂಬದವರನ್ನು ರಕ್ಷಿಸಬೇಕು. ಅಂತೆಯೆ ಅಪಹರಣ ಮಾಡಿರುವ ಶಾಸಕರು ಹಾಗೂ ಅವರ ಬೆಂಬಲಿಗರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ನರ್ಸ್‌ ವೇಷದಲ್ಲಿ ಬಂದು ಸರ್ಕಾರಿ ಆಸ್ಪತ್ರೆಯಿಂದ ಮಗು ಅಪಹರಣ

ಅರಕಲಗೂಡು: ನರ್ಸ್‌ ವೇಷದಲ್ಲಿ ಬಂದು ನವಜಾತ ಶಿಶುವೊಂದನ್ನು ಅಪಹರಣ ಮಾಡಿರುವ ಘಟನೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಾ.14 ರಂದು ನಡೆದಿತ್ತು. 

ಅಸ್ಸಾಂ(Assam) ಮೂಲದ ಯಾಸ್ಮಿನ್‌ ಮಗು ಕಳೆದುಕೊಂಡವರು. ಯಾಸ್ಮಿನ್‌ ಭಾನುವಾರ ರಾತ್ರಿ ಸರ್ಕಾರಿ ಆಸ್ಪತ್ರೆಯಲ್ಲಿ(Government Hospital) ಗಂಡು ಮಗುವಿಗೆ ಜನ್ಮ ನೀಡಿದ್ದರು. ರಾತ್ರಿ 10.50ರ ವೇಳೆಗೆ ರೋಗಿಗಳ ಸೋಗಿನಲ್ಲಿ ಆಸ್ಪತ್ರೆಗೆ ಆರೋಪಿಗಳು(Accused) ಆಗಮಿಸಿದ್ದು, ತಡರಾತ್ರಿ 12.30ರ ತನಕ ಎಲ್ಲರ ಚಲನವಲನ ಗಮಿಸಿದ್ದಾರೆ. ಈ ವೇಳೆ ನರ್ಸ್‌ ವೇಷದಲ್ಲಿ ವಾರ್ಡ್‌ಗೆ ಬಂದ ಆರೋಪಿಯೊಬ್ಬಳು, ಔಷಧಿ ತರುವಂತೆ ಚೀಟಿಯೊಂದನ್ನು ಯಾಸ್ಮಿನ್‌ ಪತಿಗೆ ನೀಡಿದ್ದಾಳೆ. ಆತ ವಾರ್ಡ್‌ನಿಂದ ಆಚೆ ತೆರಳುತ್ತಿದ್ದಂತೆ ಕ್ಷಣ ಮಾತ್ರದಲ್ಲಿ ಮಗುವನ್ನು ಎತ್ತಿಕೊಂಡು ಆರೋಪಿ, ಆಸ್ಪತ್ರೆಯ ಹಿಂಬಾಗಿಲಿನಿಂದ ಪರಾರಿ ಆಗಿದ್ದಾಳೆ. ಸಿಸಿಟೀವಿಯಲ್ಲಿ(CCTV) ದೃಶ್ಯಗಳು ಸೆರೆಯಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ ಎಂದು ಪೊಲೀಸರು(Police) ತಿಳಿಸಿದ್ದರು.
 

Follow Us:
Download App:
  • android
  • ios