ಕೆಂಪೇಗೌಡ ಏರ್‌ಪೋರ್ಟ್: ಸೊಂಟದಲ್ಲಿ ಮರೆಮಾಚಿ 2.8 ಕೆಜಿ ಚಿನ್ನ ಸಾಗಾಟ ಯತ್ನ, ಇಬ್ಬರು ವಶಕ್ಕೆ
ದುಬೈನಿಂದ ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕರಿಬ್ಬರು ಸೊಂಟದ ಭಾಗದಲ್ಲಿ ಚಿನ್ನವನ್ನು ಬಚ್ಚಿಟ್ಟುಕೊಂಡು ಅಕ್ರಮ ಸಾಗಾಟಕ್ಕೆ ಯತ್ನಿಸಿ ಸಿಕ್ಕಿ ಬಿದ್ದ ಘಟನೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ದೇವನಹಳ್ಳಿ (ಸೆ.10): ದುಬೈನಿಂದ ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕರಿಬ್ಬರು ಸೊಂಟದ ಭಾಗದಲ್ಲಿ ಚಿನ್ನವನ್ನು ಬಚ್ಚಿಟ್ಟುಕೊಂಡು ಅಕ್ರಮ ಸಾಗಾಟಕ್ಕೆ ಯತ್ನಿಸಿ ಸಿಕ್ಕಿ ಬಿದ್ದ ಘಟನೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ದುಬೈ ನಿಂದ ಬೆಂಗಳೂರಿಗೆ EK- 564 ವಿಮಾನದಲ್ಲಿ ಆಗಮಿಸಿದ ಇಬ್ಬರು ಪ್ರಯಾಣಿಕರು. ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆ ಬೆಂಗಳೂರು ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮವಾಗಿ ಸಾಗಿಸಲೆತ್ನಿಸಿದ ಚಿನ್ನ ಭಾರೀ ಪ್ರಮಾಣದ ಚಿನ್ನ ಪತ್ತೆಯಾಗಿದೆ.
ಬ್ಯಾಂಕಾಕ್‌ನಿಂದ ಹಾವು, ಕೋತಿ ಕಳ್ಳ ಸಾಗಣೆ: ಏರ್‌ಪೋರ್ಟ್‌ನಲ್ಲಿ ವಶಕ್ಕೆ
ಇಬ್ಬರು ಪ್ರಯಾಣಿಕರ ದೈಹಿಕ ತಪಾಸಣೆ ನಡೆಸಿದಾಗ ಸೊಂಟದ ಭಾಗಕ್ಕೆ ಸುಮಾರು 2.8 ಕೆಜಿ ಚಿನ್ನವನ್ನು ಕಟ್ಟಿಕೊಂಡು ಮರೆಮಾಚಿರುವುದು ಪತ್ತೆ. ತಕ್ಷಣ ಕಸ್ಟಮ್ಸ್ ಅಧಿಕಾರಿಗಳು ಚಿನ್ನ ವಶಪಡಿಸಿಕೊಂಡಿದ್ದಾರೆ. ಸದ್ಯ ಇಬ್ಬರು ಪ್ರಯಾಣಿಕರನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.
ಮಂಗಳೂರು: ಕಸ್ಟಮ್ಸ್ ವಶಕ್ಕೆ ಪಡೆದ ರಕ್ತಚಂದನ 28 ಕೋಟಿಗೆ ಹರಾಜು!