ಮದುವೆ ವಂಚನೆ ಪ್ರಕರಣದಲ್ಲಿ ಏಳನೇ ಮದುವೆಗೆ ಸಿದ್ಧವಾಗಿದ್ದ ರೇಷ್ಮಾಳನ್ನು ಪೊಲೀಸರು ಬಂಧಿಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಆರು ಜನರನ್ನು ಮದುವೆಯಾಗಿ ವಂಚಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 

ತಿರುವನಂತಪುರ: ಮದುವೆ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ರೇಷ್ಮಾ ಕಥೆ ಯಾವುದೇ ಸಿನಿಮಾಗಿಂತ ಕಡಿಮೆ ಇಲ್ಲ. ಏಳನೇ ಮದುವೆಯಾಗಲು ಸಿದ್ಧವಾಗುತ್ತಿದ್ದ ರೇಷ್ಮಾಳನ್ನು ಪೊಲೀಸರು ಬಂಧಿಸಿದ್ದಾರೆ. ಎರ್ನಾಕುಲಂ ಮೂಲದ 30 ವರ್ಷದ ರೇಷ್ಮಾ ಏಳನೇ ಮದುವೆಯಾಗಲು ರೆಡಿಯಾಗಿದ್ದಾಗಲೇ ಪೊಲೀಸರು ಶಾಕ್ ನೀಡಿದ್ದಾರೆ. ಆರ್ಯನಾಡ್ ಪಂಚಾಯತ್ ಸದಸ್ಯ ವರನೊಬ್ಬ ಅನುಮಾನಾಸ್ಪದವಾಗಿ ರೇಷ್ಮಾಳನ್ನು ಬಲೆಗೆ ಬೀಳಿಸಿಕೊಂಡಿದ್ದಳು. ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಆರು ಜನರನ್ನು ರೇಷ್ಮಾ ಮದುವೆಯಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಎರ್ನಾಕುಲಂ ಮೂಲದ ರೇಷ್ಮಾ, ಆರ್ಯನಾಡ್ ಮೂಲದ ಪಂಚಾಯತ್ ಸದಸ್ಯನನ್ನು ಮ್ಯಾರೇಜ್ ಗ್ರೂಪ್‌ನಲ್ಲಿ ಭೇಟಿಯಾಗಿದ್ದಾಳೆ. ಯುವಕ ಈ ಗ್ರೂಪ್‌ನಲ್ಲಿ ಮದುವೆಗಾಗಿ ಹುಡುಗಿಯನ್ನು ಹುಡುಕುತ್ತಿರುವ ಕುರಿತು ಪೋಸ್ಟ್ ಮಾಡಿಕೊಂಡಿದ್ದನು. ಈ ಜಾಹೀರಾತು ನೋಡಿ ರೇಷ್ಮಾಳ ತಾಯಿ ಎಂದು ಪರಿಚಯಿಸಿಕೊಂಡು ಫೋನ್‌ನಲ್ಲಿ ಮಾತನಾಡಿದ್ದಾಳೆ. ನಂತರ ಬೇರೆ ವ್ಯಕ್ತಿ ಫೋನ್‌ನಲ್ಲಿ ಮಾತನಾಡಿ ತಾನು ರೇಷ್ಮಾಳ ತಂದೆ ಎಂದು ಹೇಳಿಕೊಂಡಿದ್ದಾಳೆ. ಇದಾದ ಬಳಿಕ ಯುವಕ ಮತ್ತು ರೇಷ್ಮಾ ಮುಖಾಮುಖಿ ಭೇಟಿಯಾದಾಗ ತಾನು ಅನಾಥೆ ಎಂದು ಹೇಳಿದ್ದಾಳೆ.

ತಾನು ದತ್ತು ಪಡೆದಿರುವುದಾಗಿಯೂ, ತನ್ನೊಂದಿಗೆ ಬೇರೆ ಯಾರೂ ಇಲ್ಲವೆಂದೂ ಸುಳ್ಳು ಹೇಳಿ ಯುವಕನನ್ನು ಬಣ್ಣದ ಮಾತುಗಳಿಂದ ಮನವೊಲಿಸಿದಳು. ಕೊನೆಗೆ ಯುವಕನೊಂದಿಗೆ ರೇಷ್ಮಾ ಮದುವೆ ನಿಶ್ಚಯವಾಯಿತು. ಮರುದಿನವೇ ರೇಷ್ಮಾ ತಿರುವನಂತಪುರಂ ತಲುಪಿದಳು. ಏತನ್ಮಧ್ಯೆ, ವರನಿಗೆ ರೇಷ್ಮಾಳ ನಡವಳಿಕೆ ಅಸಾಮಾನ್ಯವೆಂದು ಕಂಡುಬಂದಿತು. ರೇಷ್ಮಾ ಮದುವೆಗೆ ಸಿದ್ಧತೆ ನಡೆಸಲು ಬ್ಯೂಟಿ ಪಾರ್ಲರ್‌ಗೆ ಹೋದಾಗ, ಯುವಕ ಆಕೆಯ ಬ್ಯಾಗ್ ಪರಿಶೀಲಿಸಿದ್ದಾನೆ. ಈ ವೇಳೆ ಬ್ಯಾಗ್‌ನಲ್ಲಿ ಬೇರೆ ಬೇರೆ ಮದುವೆ ಪತ್ರಿಕೆಗಳು ಕಂಡು ಬಂದಿವೆ. ಇದರಿಂದ ಅನುಮಾನಗೊಂಡ ಯುವಕ ನೇರವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ವಿಷಯ ತಿಳಿದ ಆರ್ಯನಾಡ್ ಪೊಲೀಸರು ಸ್ಥಳಕ್ಕೆ ತಲುಪಿ ರೇಷ್ಮಾಳನ್ನು ವಶಕ್ಕೆ ಪಡೆದಿದ್ದಾರೆ.

ರೇಷ್ಮಾಳ ಮದುವೆ ಕಥೆ

ರೇಷ್ಮಾಳ ಮೊದಲ ಮದುವೆ 2014 ರಲ್ಲಿ ನಡೆಯಿತು. 2022 ರಿಂದ, ಅವರು ವಿವಿಧ ಜಿಲ್ಲೆಗಳಲ್ಲಿ ಆರು ಜನರನ್ನು ಮದುವೆಯಾಗಿದ್ದಾಳೆ. ಮದುವೆಯಾದ ಕೆಲವೇ ದಿನಗಳಲ್ಲಿ ಅನಾಥಳಾಗಿ ಅಲ್ಲಿಂದ ಕಣ್ಮರೆಯಾದ ಕಥೆಯನ್ನು ಅವರು ಎಲ್ಲರಿಗೂ ಹೇಳಿದರು. ರೇಷ್ಮಾಗೆ ಎರಡು ವರ್ಷದ ಮಗುವಿದೆ. ಪೊಲೀಸರಿಗೆ ರೇಷ್ಮಾ ನೀಡಿದ ಹೇಳಿಕೆಯಲ್ಲಿ ಅವರು ಪ್ರೀತಿಯನ್ನು ಅರಸಿ ಹಲವಾರು ಬಾರಿ ಮದುವೆಯಾಗಿದ್ದಳು ಎಂದು ಹೇಳಿದ್ದಾಳಂತೆ. ಆದ್ರೆ ಪೊಲೀಸರು ರೇಷ್ಮಾ ಹಿಂದೆ ದೊಡ್ಡಗ್ಯಾಂಗ್ ಇರಬಹುದು ಎಂದು ಅನುಮಾನಿಸಿ ತನಿಖೆ ಆರಂಭಿಸಿದ್ದಾರೆ.

ಚಿನ್ನ ಮತ್ತು ಹಣವನ್ನು ಕದಿಯುವುದೇ ಸಾಲು ಸಾಲು ಮದುವೆಗಳ ಉದ್ದೇಶವಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮದುವೆ ವಂಚನೆಗೆ ಒಳಗಾದವರನ್ನು ಹುಡುಕಲು ಮತ್ತು ಮಾಹಿತಿ ಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ವಂಚನೆಗೆ ಒಳಗಾದವರು ಮುಜುಗರದಿಂದ ಹೊರಜಗತ್ತಿಗೆ ಮಾಹಿತಿ ನೀಡಿಲ್ಲ ಎಂದು ಶಂಕಿಸಲಾಗಿದೆ. ಏಳನೇ ಮದುವೆಯ ನಂತರ ಇನ್ನೂ ಎರಡು ಮದುವೆಗಳಿಗೆ ಸಿದ್ಧತೆ ನಡೆಸುತ್ತಿದ್ದಾಗ ರೇಷ್ಮಾಳನ್ನು ಬಂಧಿಸಲಾಯಿತು.