Asianet Suvarna News Asianet Suvarna News

ದಾಳಿ ವೇಳೆ ಲಂಚದ ಹಣ ನುಂಗಿದ ಕೇರಳ ಇಂಜಿನಿಯರ್ ಅರೆಸ್ಟ್‌

Crime News: ಕೇರಳ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯ ಎಂಜಿನಿಯರ್‌ ಲಂಚ ಪಡೆಯುತ್ತಿದ್ದ ವೇಳೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾನೆ

Kerala engineer swallows bribe money during vigilance raid arrested mnj
Author
First Published Aug 28, 2022, 8:41 PM IST

ಕೇರಳ (ಆ. 28): ಕೇರಳ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯ ಎಂಜಿನಿಯರ್‌ ಲಂಚ ಪಡೆಯುತ್ತಿದ್ದ ವೇಳೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದು, ದಾಳಿ ವೇಳೆ ಕರೆನ್ಸಿ ನೋಟುಗಳನ್ನು ನುಂಗಿದ ಘಟನೆ ನಡೆದಿದೆ. ಕೇರಳ ವಿಜಿಲೆನ್ಸ್ ಇಲಾಖೆಯ ಅಧಿಕಾರಿಗಳ ದಾಳಿ ವೇಳೆ  ಅಧಿಕಾರಿ ಕರೆನ್ಸಿ ನೋಟುಗಳನ್ನು ನುಂಗಿದ್ದಾನೆ. ತನ್ನ ಕಾರ್ ಶೆಡ್ ಮೇಲೆ ಅಪಾಯಕಾರಿಯಾಗಿ ಹಾದು ಹೋಗುತ್ತಿದ್ದ ಎಲೆಕ್ಟ್ರಿಕ್ ಲೈನನ್ನು ಬದಲಾಯಿಸುದಕ್ಕಾಗಿ ಗ್ರಾಹಕರೊಬ್ಬರು ಜೋ ಜೋಸೆಫ್ ಎಂದು ಗುರುತಿಸಲಾದ ಸಬ್ ಇಂಜಿನಿಯರ್ ಅವರನ್ನು ಸಂಪರ್ಕಿಸಿದಾಗ ಈ ಘಟನೆ ಕಣ್ಣೂರಿನಲ್ಲಿ ನಡೆದಿದೆ. 

ಗ್ರಾಹಕ ನಿಗದಿತ ಶುಲ್ಕವನ್ನು ಪಾವತಿಸಿದ್ದಾರೆ. ಆದರೆ  ಶನಿವಾರ ರೂ 1,000 ಪಾವತಿಸಿದರೆ, ತಕ್ಷಣವೇ ಲೈನನ್ನು ಬದಲಾಯಿಸಲಾಗುವುದು, ಇಲ್ಲದಿದ್ದರೆ, ಪ್ರಕ್ರಿಯೆಯು ಒಂದು ತಿಂಗಳು ತೆಗೆದುಕೊಳ್ಳುತ್ತದೆ ಎಂದು ಜೋಸೆಫ್  ಗ್ರಾಹಕರಿಗೆ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ. 

ಗ್ರಾಹಕ ನಂತರ ವಿಜಿಲೆನ್ಸ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು 1,000 ರೂಪಾಯಿಯ ಕರೆನ್ಸಿ ನೋಟುಗಳಲ್ಲಿ ರಾಸಾಯನಿಕಗಳನ್ನು ಸಿಂಪಡಿಸಿ ಜೋಸೆಫ್ ಅವರಿಗೆ ನೀಡಿದ್ದರು. ಬಳಿಕ ಗ್ರಾಹಕ ಈ ನೋಟುಗಳನ್ನು ಅಧಿಕಾರಿಗೆ ಲಂಚದ ರೂಪದಲ್ಲಿ ನೀಡಿದ್ದ. 

ಸರ್ಕಾರಿ ಕಚೇರಿಯಲ್ಲಿ ಲಂಚ ಇಲ್ಲದೇ ಫೈಲ್ ಮೂವ್ ಆಗಲ್ಲ: ಹೈಕೋರ್ಟ್ ಕಳವಳ

ಲಂಚ ಸ್ವೀಕರಿಸಿದ ತಕ್ಷಣ ವಿಜಿಲೆನ್ಸ್ ಅಧಿಕಾರಿಗಳು ಆರೋಪಿಯನ್ನು ಸುತ್ತುವರೆದಿದ್ದರು.  ಮತ್ತೆ ಸಿಕ್ಕಿಬೀಳುವ ಮೊದಲು ತಪ್ಪಿಸಿಕೊಂಡಿದ್ದ ಅಧಿಕಾರಿ ಕರೆನ್ಸಿ ನೋಟುಗಳನ್ನು ನುಂಗಿರುವುದು ಖಚಿತವಾಗಿದೆ. ಆದಾಗ್ಯೂ, ವಿಜಿಲೆನ್ಸ್ ಅಧಿಕಾರಿ ಲಂಚವನ್ನು ಸ್ವೀಕರಿಸಿದ್ದಾರೆ ಎಂದು ಸಾಬೀತುಪಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.  ಅಲ್ಲದೇ ನಿರ್ಣಾಯಕ 'ಸಾಕ್ಷ್ಯ'ಗಳನ್ನು ಮರುಪಡೆಯಬಹುದೇ ಎಂದು ನೋಡಲು ಶೀಘ್ರದಲ್ಲೇ ಅಧಿಕಾರಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವರದಿಗಳು ತಿಳಿಸಿವೆ. 

ಲಂಚ ಸ್ವೀಕರಿಸಿದ ಆರೋಪ: ಅಧಿಕಾರಿ ಬಂಧನ: ಈ ತಿಂಗಳ ಆರಂಭದಲ್ಲಿ ಇದೇ ರೀತಿಯ ಘಟನೆಯಲ್ಲಿ, ರಾಜ್ಯ ವಿಜಿಲೆನ್ಸ್ ಬ್ಯೂರೋ 1.5 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಹರಿಯಾಣ ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಯ  ದಿಶಾ ಗುಪ್ತಾ ಅವರನ್ನು ಬಂಧಿಸಿದೆ. ವಿಜಿಲೆನ್ಸ್ ಬ್ಯೂರೋ ಡಿಎಸ್ಪಿ ಜೀತ್ ಸಿಂಗ್ ಪ್ರಕಾರ, ಲಂಚ ನೀಡಿದ್ದಕ್ಕಾಗಿ ಸಂಜಯ್, ದೀಪಕ್ ಮತ್ತು ಅನಿಲ್ ಎಂದು ಗುರುತಿಸಲಾದ ಮೂವರನ್ನು ತಂಡವು ಬಂಧಿಸಿದೆ.

ಹಂಸಿ ಮೂಲದ ಈ ವ್ಯಕ್ತಿಗಳು ಹಂಸಿಯ ತರಕಾರಿ ಮಾರುಕಟ್ಟೆಯಲ್ಲಿ ಶೆಡ್‌ಗಳ ನಿರ್ಮಾಣಕ್ಕೆ ಸಂಬಂಧಿಸಿದ ಕಡತವನ್ನು ತೆರವುಗೊಳಿಸಲು ದಿಶಾಗೆ ಹಣ ನೀಡಲು ಪಂಚಕುಲಕ್ಕೆ ಬರುತ್ತಿದ್ದಾರೆ ಎಂದು ನಮಗೆ ಸುಳಿವು ಸಿಕ್ಕಿತು ಎಂದು ಡಿಎಸ್‌ಪಿ ಹೇಳಿದ್ದಾರೆ. ಭ್ರಷ್ಟ ಕೃತ್ಯವನ್ನು ಸಾಬೀತುಪಡಿಸಲು ಎರಡೂ ಪಕ್ಷಗಳ ದೂರವಾಣಿ ಕರೆ ದಾಖಲೆಗಳು ನಮ್ಮ ಬಳಿ ಇವೆ ಎಂದು ಪೊಲೀಸರು ತಿಳಿಸಿದ್ದಾರೆ.  10 ಗೆಜೆಟೆಡ್ ಅಧಿಕಾರಿಗಳು ಸೇರಿದಂತೆ 83 ಸರ್ಕಾರಿ ಅಧಿಕಾರಿಗಳನ್ನು ಹರಿಯಾಣ ವಿಜಿಲೆನ್ಸ್ ಬ್ಯೂರೋ ಈ ವರ್ಷದ ಜನವರಿಯಿಂದ ಜುಲೈವರೆಗೆ ಲಂಚ ಸ್ವೀಕರಿಸಿದ್ದಕ್ಕಾಗಿ ಬಂಧಿಸಿದೆ.

Follow Us:
Download App:
  • android
  • ios