ಇದಪ್ಪಾ ಶಿಕ್ಷೆ ಅಂದ್ರೆ! ಅಪ್ರಾಪ್ತ ಸೋದರ ಸಂಬಂಧಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಪಾಪಿಗೆ 135 ವರ್ಷ ಸೆರೆವಾಸ

2 ವರ್ಷಗಳ ಹಿಂದೆ ತನ್ನ ಅಪ್ರಾಪ್ತ ಸೋದರ ಸಂಬಂಧಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿ ಗರ್ಭಿಣಿಯಾಗುವಂತೆ ಮಾಡಿದ್ದ ಅಪರಾಧಿಗೆ ಕೇರಳದ ನ್ಯಾಯಾಲಯ 135 ವರ್ಷ ಜೈಲು ಶಿಕ್ಷೆ ವಿಧಿಸಿದೆ.

kerala court sentences man to cumulative 135 years imprisonment for raping impregnating minor cousin ash

ಅಲಪ್ಪುಳ (ಕೇರಳ), ಜೂನ್ 20: ಅತ್ಯಾಚಾರ, ಕೊಲೆಯಂತಹ ಹೀನಾಯ ಕೃತ್ಯ ನಡೆಸಿದವರಿಗೆ ದೇಶದ ಕೆಲ ನ್ಯಾಯಾಲಯಗಳು ಅಥವಾ ಜಡ್ಜ್‌ಗಳು ಸರಿಯಾದ ಶಿಕ್ಷೆ ನೀಡಲ್ಲ ಎಂದು ಹಲವು ನೆಟ್ಟಿಗರು ಹಾಗೂ ಜನರು ಆಕ್ಷೇಪ ವ್ಯಕ್ತಪಡಿಸುತ್ತಿರುತ್ತಾರೆ. ನಮ್ಮ ನ್ಯಾಯಾಂಗ ವ್ಯವಸ್ಥೆಯ ಬಗ್ಗೆಯೂ ಹಲವರು ಅಸಮಾಧಾನ ವ್ಯಕ್ತಪಡಿಸುತ್ತಿರುತ್ತಾರೆ. ಆದರೆ, ಇದಕ್ಕೆ ಅಪವಾದವೆಂಬಂತೆ ಕೇರಳದ ಈ ನ್ಯಾಯಾಲಯ ನೀಡಿರುವ ಶಿಕ್ಷೆ ನೋಡಿ..

2 ವರ್ಷಗಳ ಹಿಂದೆ ತನ್ನ ಅಪ್ರಾಪ್ತ ಸೋದರ ಸಂಬಂಧಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿ ಗರ್ಭಿಣಿಯಾಗುವಂತೆ ಮಾಡಿದ್ದ ಅಪರಾಧಿಗೆ ಕೇರಳದ ನ್ಯಾಯಾಲಯವು ಸೋಮವಾರ 135 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ. ಹರಿಪಾದ್ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ (ಎಫ್‌ಟಿಎಸ್‌ಸಿ) ನ್ಯಾಯಾಧೀಶ ಸಾಜಿ ಕುಮಾರ್ 24 ವರ್ಷದ ಯುವಕನಿಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, ಐಪಿಸಿ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಬಾಲಾಪರಾಧಿ ಕಾಯ್ದೆಯ ಹಲವು ನಿಬಂಧನೆಗಳ ಅಡಿಯಲ್ಲಿ ಒಟ್ಟು 135 ವರ್ಷ ಶಿಕ್ಷೆ ನೀಡಿದೆ. ಈ ಸಂಬಂಧ ಪಬ್ಲಿಕ್ ಪ್ರಾಸಿಕ್ಯೂಟರ್ ರಘು ಕೆ. ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಅಪ್ರಾಪ್ತ ಬಾಲಕಿ ರೇಪ್‌ ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಾಕಿದ ಗಾಯಕನ ಬಂಧನ

ಆದರೂ, ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕಾಗಿರುವುದರಿಂದ ಮತ್ತು ಅವುಗಳಲ್ಲಿ ಗರಿಷ್ಠ 20 ವರ್ಷಗಳ ಶಿಕ್ಷೆ ವಿಧಿಸಿರುವುದರಿಂದ, ಅಪರಾಧಿ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಪ್ರಾಸಿಕ್ಯೂಟರ್ ಹೇಳಿದ್ದಾರೆ. ಅಲ್ಲದೆ, ನ್ಯಾಯಾಲಯವು ಅಪರಾಧಿಗೆ 5.1 ಲಕ್ಷ ರೂಪಾಯಿ ದಂಡವನ್ನು ವಿಧಿಸಿದ್ದು ಮತ್ತು ಘಟನೆಯ ಸಮಯದಲ್ಲಿ 15 ವರ್ಷ ವಯಸ್ಸಾಗಿದ್ದ ಸಂತ್ರಸ್ತೆಗೆ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚಿಸಿದೆ ಎಂದೂ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.

ಅಪರಾಧಿ ಸಂತ್ರಸ್ತೆಯ ತಂದೆಯ ಹಿರಿಯ ಸಹೋದರನ ಮಗನಾಗಿದ್ದು, ಅವಳನ್ನು ತನ್ನ ಶಾಲೆಗೆ ಕರೆದೊಯ್ದು ತನ್ನ ತಾಯಿಯ ಅಜ್ಜಿಯ ಮನೆಗೆ ಮರಳಿ ಕರೆತರುತ್ತಿದ್ದನು ಎಂದೂ ಪ್ರಾಸಿಕ್ಯುಷನ್‌ ಮಾಹಿತಿ ನೀಡಿದೆ. ಈ ಹಿನ್ನೆಲೆ ಈ ಸಾಮೀಪ್ಯವನ್ನು ಬಳಸಿಕೊಂಡು ಸಂತ್ರಸ್ತ ವಿದ್ಯಾರ್ಥಿನಿ ಸ್ನಾನ ಮಾಡುವಾಗ ಆಕೆಯ ವಿಡಿಯೋ ರೆಕಾರ್ಡ್ ಮಾಡುವ ಮೂಲಕ, ಅವನು ಅವಳಿಗೆ ಬೆದರಿಕೆ ಹಾಕಿ ಹಲವು ಬಾರಿ ರೇಪ್‌ ಮಾಡಿ ಗರ್ಭಿಣಿಯನ್ನಾಗಿ ಮಾಡಿದ್ದಾನೆ ಎಂದು ಪ್ರಾಸಿಕ್ಯೂಟರ್ ಹೇಳಿದರು.

ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ಹಲವು ಬಾರಿ ಗ್ಯಾಂಗ್‌ ರೇಪ್‌: ಕೃತ್ಯ ಸೆರೆ ಹಿಡಿದು ಕಾಮುಕರ ಬ್ಲ್ಯಾಕ್‌ಮೇಲ್‌
    
ಈ ಮಧ್ಯೆ, ಸಂತ್ರಸ್ತೆ ಶಿಶು ಕಲ್ಯಾಣ ಸಮಿತಿಯ ಆಶ್ರಯದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದೂ ವಕೀಲರು ತಿಳಿಸಿದ್ದಾರೆ.

ಇನ್ನೊಂದೆಡೆ, ಕಳೆದ ವಾರ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಚಿತ್ರಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಭೋಜ್‌ಪುರಿ ಗಾಯಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಆರೋಪಿಯನ್ನು ಬಿಹಾರ ಮೂಲದ ಅಭಿಷೇಕ್ (21) ಎಂದು ಗುರುತಿಸಲಾಗಿದ್ದು, ಆತನನ್ನು ಭೋಜ್‌ಪುರಿ ಗಾಯಕ ಬಾಬುಲ್ ಬಿಹಾರಿ ಎಂದೂ ಗುರುತಿಸಲಾಗಿದೆ. 

ಇದನ್ನೂ ಓದಿ: ಮುಸ್ಲಿಂ ಸೋದರರ ಬಲೆಯಲ್ಲಿ ಬಿದ್ದ ಇಬ್ಬರು ಹಿಂದೂ ಸೋದರಿಯರು: ಪೋಷಕರ ವಿರೋಧಕ್ಕೆ ಬೇಸತ್ತು ಯುವತಿಯರ ಆತ್ಮಹತ್ಯೆ!

ಈತ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ 27,000 ಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾನೆ. ಪೊಲೀಸರ ಪ್ರಕಾರ, ಆರೋಪಿಯು ಎರಡು ವರ್ಷಗಳ ಹಿಂದೆ ರಾಜೀವ್ ನಗರದಲ್ಲಿ ವಾಸಿಸುತ್ತಿದ್ದ 13 ವರ್ಷದ ಬಾಲಕಿಗೆ ಆಮಿಷವೊಡ್ಡಿದ್ದ. ಆಕೆಯೊಂದಿಗೆ ಸ್ನೇಹ ಬೆಳೆಸಿದ ಬಳಿಕ ಆಕೆಯನ್ನು ಹೋಟೆಲ್ ರೂಮಿಗೆ ಕರೆದೊಯ್ದು ಅತ್ಯಾಚಾರವೆಸಗಿ ಆಕೆಯ ಫೋಟೋಗಳನ್ನು ತೆಗೆದಿದ್ದಾನೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಸಂಗಾತಿ ಮೃತದೇಹ ತುಂಡು ತುಂಡು ಮಾಡಿ ಬೀದಿ ನಾಯಿಗೆ ಹಾಕ್ದ: ಶ್ರದ್ಧಾ ವಾಕರ್‌ ಹಂತಕನೇ ಇವನಿಗೆ ಸ್ಪೂರ್ತಿ!

Latest Videos
Follow Us:
Download App:
  • android
  • ios